Advertisement

ಅಜಿಂಕ್ಯ ರಹಾನೆಗೆ ಆಡುವ ಬಳಗದಲ್ಲಿ ಸ್ಥಾನ ಲಭಿಸೀತೇ?

10:43 PM Sep 19, 2020 | mahesh |

ದುಬಾೖ: ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಏಕದಿನ ಹಾಗೂ ಟಿ20 ತಂಡಗಳಲ್ಲಿ ಸ್ಥಾನ ಕಳೆದುಕೊಂಡು ಬಹಳ ಸಮಯವೇ ಆಗಿದೆ. ಅವರೀಗ ಐಪಿಎಲ್‌ನಲ್ಲೂ ತಮಗೊಂದು ಗಟ್ಟಿ ಸ್ಥಾನ ಹೊಂದಿಸಿಕೊಳ್ಳಲು ಪೈಪೋಟಿ ಎದುರಿಸುವಂತಾಗಿದೆ!

Advertisement

ರಾಜಸ್ಥಾನ್‌ ರಾಯಲ್ಸ್‌ ನಾಯಕನಾಗಿದ್ದ ಅಜಿಂಕ್ಯ ರಹಾನೆ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳಲ್ಲಿ ಯಾರನ್ನೂ ತೆಗೆಯುವಂತಿಲ್ಲ ಎಂಬ ಸ್ಥಿತಿಯಿದೆ. ಇವರ ನಡುವೆ ರಹಾನೆಗೊಂದು ಸ್ಥಾನ ನೀಡುವುದು ತಂಡದ ನಾಯಕ ಶ್ರೇಯಸ್‌ ಅಯ್ಯರ್‌, ತರಬೇತುದಾರ ರಿಕಿ ಪಾಂಟಿಂಗ್‌ಗೆ ದೊಡ್ಡ ಸವಾಲಾಗಿದೆ.

ಆರಂಭಕಾರ ಶಿಖರ್‌ ಧವನ್‌, ಸ್ಫೋಟಕ ಬ್ಯಾಟ್ಸ್‌ ಮನ್‌ ಪೃಥ್ವಿ ಶಾ, ರಿಷಭ್‌ ಪಂತ್‌, ಶ್ರೇಯಸ್‌ ಅಯ್ಯರ್‌, ವಿಂಡೀಸ್‌ನ ಶಿಮ್ರನ್‌ ಹೆಟ್‌ಮೈರ್‌… ಎಲ್ಲರೂ ಪ್ರತಿಭಾವಂತರೇ. ಇವರಲ್ಲಿ ಯಾರನ್ನೂ ಕೈಬಿಡಲು ಸಾಧ್ಯವಿಲ್ಲ. ಮಾತ್ರವಲ್ಲ, ಬಿಗ್‌ ಹಿಟ್ಟಿಂಗ್‌ ಕೀಪರ್‌ ಆಸ್ಟ್ರೇಲಿಯದ ಅಲೆಕ್ಸ್‌ ಕ್ಯಾರಿ ಕೂಡ ಸ್ಪರ್ಧೆಯಲ್ಲಿದ್ದಾರೆ.

ಆರೋಗ್ಯಕರ ಪೈಪೋಟಿ
ರಹಾನೆ ಮತ್ತು ಆರ್‌. ಅಶ್ವಿ‌ನ್‌ ಆಗಮನದಿಂದ ಡೆಲ್ಲಿ ತಂಡದ ಸಾಮರ್ಥ್ಯ ವೃದ್ಧಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದು ತಂಡದೊಳಗೊಂದು ಆರೋಗ್ಯಕರ ಪೈಪೋಟಿಗೆ ಕಾರಣವಾಗಿದೆ. ಮತ್ತೂಂದು ಕಡೆ ರಹಾನೆ ಯಂತಹ ಹಿರಿಯ ಬ್ಯಾಟ್ಸ್‌ಮನ್‌ ಕೂಡ ಪೈಪೋಟಿ ಎದುರಿ ಸಬೇಕಾದ ಸ್ಥಿತಿ ಎದುರಾಗಿದೆ. ರಾಜಸ್ಥಾನ್‌ ನಾಯಕನಾಗಿ, ಆಟಗಾರರಾಗಿ ಮಿಂಚಿದ್ದ ರಹಾನೆಗೆ ಈಗ ಈ ಪರಿಸ್ಥಿತಿ ಒದಗಿರುವುದು ಬೇಸರದ ಸಂಗತಿಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next