ದುಬೈ : ಐಪಿಎಲ್ ನ 25 ನೇ ಪಂದ್ಯದಲ್ಲಿ ಚೆನ್ನೈ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಪೇರಿಸಿ 170 ರ ಗುರಿಯನ್ನು ಬಿಟ್ಟು ಕೊಟ್ಟಿದೆ.
ಪ್ರಾರಂಭಿಕ ಜೋಡಿಗಳಾಗಿ ಅಂಕಣಕ್ಕಿಳಿದ ಫಿಂಚ್ ಹಾಗೂ ಪಡಿಕ್ಕಲ್ ಆಮೆಗತಿಯ ಆರಂಭವನ್ನು ನೀಡಿದರು. ಫಿಂಚ್ ಬರೀ 2 ರನ್ ದೀಪಕ್ ಚಹರ್ ಎಸೆತಕ್ಕೆ ಬೌಲ್ಡ್ ಔಟ್ ಆದರು. ಬಳಿಕ ಕ್ರಿಸಿಗಿಳಿದ ನಾಯಕ ವಿರಾಟ್ ಕೊಹ್ಲಿ ಪಡಿಕ್ಕಲ್ ಜೊತೆಗೂಡಿ ಚೇತರಿಕೆಯ ಆಟ ನೀಡಿದರು. ನಿಧಾನವಾಗಿಯೇ ಬ್ಯಾಟ್ ಬೀಸಿದ ಆರ್ ಸಿಬಿ ಪ್ರಾರಂಭಿಕ ಪವರ್ ಪ್ಲೇ ಆಟದಲ್ಲಿ 1 ವಿಕೆಟ್ ನಷ್ಟಕ್ಕೆ ಕೇವಲ 36 ರನ್ ಗಳಿಸುವಲ್ಲಿ ಮಾತ್ರ ಸಫಲವಾಯಿತು.
ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಗೂಡಿ ತಂಡಕ್ಕೆ ಆಶದಾಯಕ ಆಟ ನೀಡಿದರು. ಪಡಿಕ್ಕಲ್ 2 ಬೌಂಡರಿ 1 ಸಿಕ್ಸರ್ ದಾಖಲಿಸಿ 33 ರನ್ ಗಳಿಸಿ ಠಾಕೂರು ಎಸೆತಕ್ಕೆ ಡುಪ್ಲೆಸಿಸ್ ಕೈಗೆ ಕ್ಯಾಚ್ ಕೊಟ್ಟು ನಿರ್ಗಸಿದರು. ಬಳಿಕ ಬಂದ ಎಬಿಡಿ ಡಿವಿಲಿಯರ್ಸ್ ಶಾರ್ದೂಲ್ ಠಾಕೂರು ಎಸೆತಕ್ಕೆ ಕೀಪರ್ ಕ್ಯಾಚ್ ಕೊಟ್ಟು ಶೂನ್ಯ ಸುತ್ತಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.ವಾಷಿಂಗ್ಟನ್ ಸುಂದರ್ ಹೆಚ್ಚು ಕಾಲ ಕ್ರಿಸ್ ನಲ್ಲಿ ನಿಲ್ಲದೆ 10 ರನ್ ಗಳಿಸಿ ಔಟ್ ಆದರು. ವಿರಾಟ್ ಕೊಹ್ಲಿ ಅಜೇಯ 90 ರನ್ ಗಳಿಸಿದರೆ ಶಿವಂ ದುಬೆ ಅಜೇಯ 22 ರನ್ ಗಳಿಸಿ ತಂಡದ ಮೊತ್ತ 169ಕ್ಕೆ ಏರಿಸಿದ್ದಾರೆ.
ಚೆನ್ನೈ ಬೌಲಿಂಗ್ ದಾಳಿಗೆ ತತ್ತರಿಸಿದ ಆರ್ ಸಿಬಿ ತಂಡ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿ 170 ರನ್ ಗಳ ಸವಾಲನ್ನು ನೀಡಿದೆ.
ಚೆನ್ನೈ ಪರ ಉತ್ತಮವಾಗಿ ಬೌಲ್ ಮಾಡಿದ ಶಾರ್ದೂಲ್ ಠಾಕೂರು 2 ಅಮೂಲ್ಯ ವಿಕೆಟ್ ಗಳನ್ನು ಪಡೆದು ಮಿಂಚಿದರು.ಸ್ಯಾಮ್ ಕರನ್ ಹಾಗೂ ದೀಪಕ್ ಚಹರ್ ತಲಾ 1 ವಿಕೆಟ್ ಪಡೆದರು.