Advertisement
ಹೈದರಾಬಾದ್ ಪಾಲಿಗೆ ಇದು ತವರಿನ ಪಂದ್ಯವಾಗಿದ್ದು, ತನ್ನ ಅಗ್ರಸ್ಥಾನವನ್ನು ಗಟ್ಟಿಗೊಳಿಸುವ ಉತ್ತಮ ಅವಕಾಶ ಹೊಂದಿದೆ. ಆದರೆ ಈ ಪಂದ್ಯದಲ್ಲೂ ನಾಯಕ ಕೇನ್ ವಿಲಿಯಮ್ಸನ್ ಆಡುವುದು ಅನುಮಾನ. ಹೀಗಾಗಿ ವಾರ್ನರ್-ಬೇರ್‌ಸ್ಟೊ ಸಿಡಿಯುವುದು ಅನಿವಾರ್ಯ. ಆರ್‌ಸಿಬಿ ವಿರುದ್ಧದ ತವರಿನ ಪಂದ್ಯದಲ್ಲಿ ಇವರಿಬ್ಬರೂ ಶತಕ ಬಾರಿಸಿ ಮೆರೆದಿದ್ದರು. ಅಕಸ್ಮಾತ್ ಈ ಆರಂಭಿಕ ಜೋಡಿ ವಿಫಲವಾದರೆ ಹೈದರಾಬಾದ್ ದೊಡ್ಡ ಮೊತ್ತದ ಯೋಜನೆಯನ್ನು ಕೈಬಿಡಬೇಕಾಗುತ್ತದೆ. ಸನ್‌ರೈಸರ್ ಬೌಲಿಂಗ್ ವಿಭಾಗ ಹೆಚ್ಚು ವೈವಿಧ್ಯಮಯ. ಅಫ್ಘಾನಿಸ್ಥಾನದ ಸ್ಪಿನ್ ಜೋಡಿ ಮೊಹಮ್ಮದ್ ನಬಿ-ರಶೀದ್ ಖಾನ್ ಅಪಾಯಕಾರಿಯಾಗಬಲ್ಲರು.
ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ವಿಭಾಗ ಇನ್ನಷ್ಟು ಗಟ್ಟಿಗೊಳ್ಳಬೇಕಿದೆ. ನಾಯಕ ರೋಹಿತ್, ಕ್ವಿಂಟಲ್ ಡಿ ಕಾಕ್ ಛಾತಿಗೆ ತಕ್ಕ ಆಟವಾಡಿಲ್ಲ. ಕೆರಿಬಿಯನ್ ಆಟಗಾರ ಕೈರನ್ ಪೊಲಾರ್ಡ್ ಇನ್ನೂ ಹೊಡಿಬಡಿ ಆಟಕ್ಕೆ ಇಳಿದಿಲ್ಲ. ಪಾಂಡ್ಯ ಸಹೋದರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಬೌಲಿಂಗ್ ವಿಭಾಗದಲ್ಲಿ ಲಸಿತ ಮಾಲಿಂಗ ಗೈರು ಕಾಡುವ ಸಾಧ್ಯತೆಯಿದೆ.