Advertisement
ಹೈದರಾಬಾದ್‌ನ “ರಾಜೀವ್ ಗಾಂಧಿ’ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದ ಮೂಲಕ 12ನೇ ವರ್ಣರಂಜಿತ ಐಪಿಎಲ್ ಆವೃತ್ತಿಗೆ ತೆರೆಬೀಳಲಿದೆ. 8ನೇ ಬಾರಿಗೆ ಫೈನಲ್ ಪ್ರವೇಶಿಸಿ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಚಾಂಪಿಯನ್ ಆಗಿದ್ದರೆ, 5ನೇ ಬಾರಿ ಫೈನಲ್ ಪ್ರವೇಶಿಸಿರುವ ಮುಂಬೈ ಕೂಡ 3 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಬಾರಿ ಫೈನಲ್‌ನಲ್ಲಿ ಬಲಿಷ್ಠ ತಂಡಗಳೇ ಕಾದಾಟ ನಡೆಸುವುದರಿಂದ ವಿಜಯಲಕ್ಷ್ಮೀ ಯಾರ ಪಾಲಾಗುವುದು ಎಂದು ಹೇಳುವುದು ಕಷ್ಟ.
ಚೆನ್ನೈ ತಂಡಕ್ಕೆ ಧೋನಿ ಉಪಸ್ಥಿತಿಯೇ ಪ್ರಮುಖ ಬಲ. ತಂಡದ ಸದಸ್ಯರಲ್ಲಿ ಧೋನಿ ಹುಟ್ಟಿಸುವ ಆತ್ಮವಿಶ್ವಾಸವೇ ತಂಡದ ಪ್ರಮುಖ ಅಸ್ತ್ರ. ಎದುರಾಳಿಗಳು ಎಷ್ಟೇ ಬಲಶಾಲಿಯಾದರೂ ಧೋನಿ ಲೆಕ್ಕಾಚಾರದ ಮುಂದೆ ಮಂಕಾಗಿಬಿಡುತ್ತಾರೆ. ಇನ್ನು ಮತ್ತೆ ಪಾರ್ಮ್ ಗೆ ಮರಳಿರುವ ಫಾ ಡು ಪ್ಲೆಸಿಸ್, ವಾಟ್ಸನ್ ಭರ್ಜರಿ ಆರಂಭಿಕ ಜತೆಯಾಟ ತಂಡಕ್ಕೆ ದೊಡ್ಡ ಬಲ ತುಂಬಿದೆ. ಡೆಲ್ಲಿ ವಿರುದ್ದದ ದ್ವಿತೀಯ ಕ್ವಾಲಿಫೈಯರ್ ಪಂದ್ಯವೇ ಇದಕ್ಕೆ ಉತ್ತಮ ಉದಾಹರಣೆ. ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುವ ಅಂಬಾಟಿ ರಾಯುಡು, ಸುರೇಶ್ ರೈನಾ ಟಿ20 ಜೋಶ್ ತೋರದಿರುವುದು ಕೊಂಚ ಹಿನ್ನಡೆಯಾಗಿದೆ. ಭುಜದ ನೋವಿನಿಂದ ತಂಡದಿಂದ ಹೊರಗುಳಿದಿರುವ ಜಾಧವ್ ಈ ಪಂದ್ಯದಲ್ಲಿ ಮತ್ತೆ ವಾಪಸಾಗುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿ ಚಹಾರ್, ಬ್ರಾವೊ, ತಾಹಿರ್, ಜಡೇಜಾ, ಹರ್ಭಜನ್ ಉತ್ತಮ ಲಯದಲ್ಲಿರುವುದು ತಂಡಕ್ಕೆ ಪ್ಲಸ್ ಪಾಯಿಂಟ್.
Related Articles
ಮುಂಬೈ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲೂ ಸಶಕ್ತವಾಗಿದೆ. ಬ್ಯಾಟಿಂಗ್‌ನಲ್ಲಿ ಆರಂಭ ಕಾರ ರೋಹಿತ್ ಶರ್ಮ ಮತ್ತು ಕ್ವಿಂಟಾನ್ ಡಿ ಕಾಕ್ ಉತ್ತಮ
Advertisement
ಫಾರ್ಮ್ನಲ್ಲಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಪಾಂಡ್ಯ ಬ್ರದರ್ , ಕೈರಾನ್ ಪೊಲಾರ್ಡ್ ಯಾವ ಪರಿಸ್ಥಿತಿಯಲ್ಲಿಯೂ ಸಿಡಿಯಬಲ್ಲರು.ಈ ಪಂದ್ಯದಲ್ಲೂ ಇವರ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರಿದರೆ ಮುಂಬೈ ಬೃಹತ್ ರನ್ ಪೇರಿಸುವಲ್ಲಿ ಅಥವಾ ದೊಡ್ಡ ಮೊತ್ತ ಬೆನ್ನಟ್ಟುವುದರಲ್ಲಿ ಅನುಮಾನವಿಲ್ಲ. ಉಳಿದ ತಂಡಗಳ ಬ್ಯಾಟ್ಸ್‌ಮನ್‌ಗಳು ಚೆನ್ನೈನ ಬೌಲರ್‌ಗಳಾದ ಇಮ್ರಾನ್ ತಾಹಿರ್, ಹರ್ಭಜನ್ ಹಾಗೂ ಜಡೇಜ ಅವರ ಬೌಲಿಂಗ್‌ಗೆ ಪರದಾಡಿದರೆ ರೋಹಿತ್ ಪಡೆ ಸ್ಪಿನ್ ಬೆದರಿಕೆಯನ್ನು ಉತ್ತಮವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿರುವುದು ತಂಡದ ಬಲ. ಮುಂಬೈನದು ಘಾತಕ ಬೌಲಿಂಗ್. ಲಸಿತ ಮಾಲಿಂಗ, ಜಸ್ ಪ್ರೀತ್ ಬುಮ್ರಾ, ಪಾಂಡ್ಯ ಬ್ರದರ್, ರಾಹುಲ್ ಚಹರ್ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ.