Advertisement

ತವರಿನಲ್ಲಿ ಚೆನ್ನೈಗೆ ಶರಣಾದ ಡೆಲ್ಲಿ

07:12 AM Mar 27, 2019 | mahesh |

ಹೊಸದಿಲ್ಲಿ: ತವರಿನ ಮೊದಲ ಆಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳ ಸೊಲನುಭವಿಸಿತು. ಅಲ್ಪ ಮೊತ್ತದ ಈ ಹೋರಾಟದಲ್ಲಿ ಚೆನ್ನೈ ಆರಂಭಿಕ ಹಂತದಲ್ಲೇ ಬಿರುಸಿನ ಆಟವಾಡತೊಡಗಿತು ಆರಂಭಕಾರ ಶೇನ್‌ ವ್ಯಾಟ್ಸನ್‌ 26 ಎಸೆತಗಳಲ್ಲಿ 44 ರನ್‌ ಗಳಿಸಿದರು ಸಿಡಿಸಿದ್ದು 4 ಬೌಂಡರಿ, 3 ಸಿಕ್ಸರ್‌. ಆಬಳಿಕ ಸುರೇಶ್‌ ರೈನಾ ನಾಯಕ ಧೋನಿ ಬಿರುಸಿನ ಆಟ ಆಡಿದ್ದರಿಂದ ಚೆನ್ನೈ ಸುಲಭವಾಗಿ ಜಯಭೇರಿ ಬಾರಿಸಿತು. ಇದು ಚೆನ್ನೈ ತಂಡದ ಸತತ ಎರಡನೇ ಗೆಲುವು ಆಗಿದೆ.

Advertisement

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಡೆಲ್ಲಿ ದೊಡ್ಡ ಮೊತ್ತವನ್ನು ಪೇರಿಸಿ, ಚೆನ್ನೈಗೆ ಸವಾಲೊಡ್ಡುವ ಹುಮ್ಮಸ್ಸಿನಲ್ಲಿತ್ತು. ಆದರೆ, ಪೃಥ್ವಿ ಶಾ, ಶಿಖರ್‌ ಧವನ್‌ ನಿಧಾನಗತಿಯ ಆರಂಭ ನೀಡಿದರು. ಶಾ 16 ಎಸೆತಗಳಲ್ಲಿ ಬಿರುಸಿನ 24 ರನ್‌ ಗಳಿಸಿ ಚಾಹರ್‌ಗೆ ವಿಕೆಟ್‌ ಒಪ್ಪಿಸಿದರು. ಅನುಭವಿ ಆಟಗಾರ ಶಿಖರ್‌ ಧವನ್‌ 47 ಎಸೆತಗಳಲ್ಲಿ 51 ರನ್‌ ಬಾರಿಸಿ ತಂಡಕ್ಕೆ ಆಸರೆಯಾದರೂ ರನ್‌ ಗಳಿಕೆ ವೇಗ ಪಡೆಯಲಿಲ್ಲ. ಕಳೆದ ಪಂದ್ಯದಲ್ಲೂ ಅವರು ಮಂದಗತಿಯ ಆಟವಾಡಿದರು. ಆದರೆ ಇವರ ಬಳಿಕ ಆಟಗಾರರು ಹೊಚ್ಚು ಹೊತ್ತು ಕ್ರೀಸ್‌ನಲ್ಲಿ ಇಲ್ಲದ ಕಾರಣ ಡೆಲ್ಲಿ ಕೇವಲ 147 ರನ್‌ ಗಳಿಸಿದೆ. ಎರಡು ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿದ್ದ ವೇಳೆ ಮೊದಲ ಪಂದ್ಯದಲ್ಲಿ ಹೀರೋ ಎನಿಸಿಕೊಂಡಿದ್ದ ರಿಷಬ್‌ ಪಂತ್‌ ಕ್ರೀಸ್‌ನಲ್ಲಿದ್ದರು. ಅವರು ಸಿಡಿಯಲು ಆರಂಭಿಸಿದರೂ 13 ಎಸೆತಗಳಲ್ಲಿ 25 ರನ್‌ ಗಳಿಸಿ ಪೆವಿಲಿಯನ್‌ ಸೇರಬೇಕಾಯಿತು. ನಾಯಕ ಶ್ರೇಯಸ್‌ ಅಯ್ಯರ್‌ (18) ಹೆಚ್ಚು ಪ್ರಯೋಜನಕಾರಿ ಆಗಲಿಲ್ಲ.

ಸ್ಕೋರ್‌ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಫ‌ೃಥ್ವಿ ಶಾ ಸಿ ವ್ಯಾಟ್ಸನ್‌ ಬಿ ಚಹರ್‌ 24
ಶಿಖರ್‌ ಧವನ್‌ ಸಿ ಶಾರ್ದುಲ್‌ ಬಿ ಬ್ರಾವೊ 51
ಶ್ರೇಯಸ್‌ ಅಯ್ಯರ್‌ ಎಲ್‌ಬಿಡಬ್ಲ್ಯುಬಿ ತಾಹಿರ್‌ 18
ರಿಷಬ್‌ ಪಂತ್‌ ಸಿ ಶಾರ್ದುಲ್‌ ಬಿ ಬ್ರಾವೊ 25
ಕಾಲಿನ್‌ ಇನ್‌ಗಾಮ್‌ ಸಿ ರೈನಾ ಬಿ ಬ್ರಾವೊ 2
ಕೀಮೊ ಪೌಲ್‌ ಬಿ ಜಡೇಜ 0
ಅಕ್ಷರ್‌ ಪಟೇಲ್‌ ಔಟಾಗದೆ 9
ರಾಹುಲ್‌ ತೆವಾಟಿಯ ಔಟಾಗದೆ 11

ಇತರ 7
ಒಟ್ಟು (6 ವಿಕೆಟ್‌ಗೆ) 147
ವಿಕೆಟ್‌ ಪತನ: 1,36, 2-79, 3-120, 4-122, 5-123, 6-127.

ಬೌಲಿಂಗ್‌
ದೀಪಕ್‌ ಚಹಾರ್‌ 4-0-20-1
ಶಾರ್ದುಲ್‌ ಠಾಕೂರ್‌ 2-0-19-0
ಹರ್ಭಜನ್‌ ಸಿಂಗ್‌ 4-0-30-0
ರವೀಂದ ಜಡೇಜ 4-0-23-1
ಇಮ್ರಾನ್‌ ತಾಹಿರ್‌ 2-0-20-1
ಡ್ವೇನ್‌ ಬ್ರಾವೊ 4-0-33-3

Advertisement

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವ್ಯಾಟ್ಸನ್‌ ಸ್ಟಂಪ್ಡ್ ಪಂತ್‌ ಬಿ ಮಿಶ್ರಾ 44
ಅಂಬಾಟಿ ರಾಯುಡು ಸಿ ಅಯ್ಯರ್‌ ಬಿ ಇಶಾಂತ್‌ 5
ಸುರೇಶ್‌ ರೈನಾ ಸಿ ಪಂತ್‌ ಬಿ ಮಿಶ್ರಾ 30
ಕೇದಾರ್‌ ಜಾದವ್‌ ಸಿ ಪಂತ್‌ ಬಿ ರಬಾಡ 27
ಎಂ. ಎಸ್‌. ಧೋನಿ ಔಟಾಗದೆ 32
ಡ್ವೇನ್‌ ಬ್ರಾವೊ ಔಟಾಗದೆ 4

ಇತರ 8
ಒಟ್ಟು (19.4 ಓವರ್‌ಗಳಲ್ಲಿ 4 ವಿಕೆಟಿಗೆ) 150
ವಿಕೆಟ್‌ ಪತನ: 1-21, 2-73, 3-98, 4-146.

ಬೌಲಿಂಗ್‌:
ಇಶಾಂತ್‌ ಶರ್ಮ 3-0-28-1
ಅಕ್ಷರ್‌ ಪಟೇಲ್‌ 4-0-16-0
ಕಾಗಿಸೊ ರಬಾಡ 3.4-0-26-1
ಅಮಿತ್‌ ಮಿಶ್ರಾ 4-0-32-2
ರಾಹುಲ್‌ ತೆವಾಟಿಯ 2-0-20-0
ಕಿಮೋ ಪೌಲ್‌ 3-0-20-0

Advertisement

Udayavani is now on Telegram. Click here to join our channel and stay updated with the latest news.

Next