Advertisement

ರಾಜಸ್ಥಾನ್‌ ರಾಯಲ್ಸ್‌ಗೆ ಸ್ಮಿತ್‌ ನಾಯಕ

06:30 AM Feb 25, 2018 | Team Udayavani |

ಹೊಸದಿಲ್ಲಿ: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್‌ಗೆ ಮರಳಿದ ರಾಜಸ್ಥಾನ್‌ ರಾಯಲ್ಸ್‌ ತಂಡ ಶನಿವಾರ ತನ್ನ ನಾಯಕನನ್ನು ಹೆಸರಿಸಿದೆ. ಆಸ್ಟ್ರೇಲಿಯದ ಸ್ಟೀವನ್‌ ಸ್ಮಿತ್‌ ಅವರಿಗೆ ತಂಡದ ಸಾರಥ್ಯ ಒಲಿದಿದೆ. 

Advertisement

ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಟೆಲಿವಿಷನ್‌ ಕಾರ್ಯಕ್ರಮವೊಂದರ ಮೂಲಕ ತಂಡದ ನಾಯಕನನ್ನು ಪ್ರಕಟಿಸಿದ್ದು ವಿಶೇಷವಾಗಿತ್ತು. ಮುಂದೆ ಕೆಕೆಆರ್‌ ಕೂಡ ಇದೇ ವಿಧಾನವನ್ನು ಅನುಸರಿಸಲಿದೆ.

2014 ಮತ್ತು 2015ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡಿದ ಸ್ಮಿತ್‌ ಕಳೆದ ವರ್ಷ ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ತಂಡದ ನಾಯಕತ್ವ ವಹಿಸಿದ್ದರು. ಪುಣೆ ತಂಡ ಫೈನಲ್‌ ತನಕ ಸಾಗಿತ್ತು.

ರಾಜಸ್ಥಾನ್‌ ತಂಡದ ನಾಯಕತ್ವಕ್ಕೆ ಅಜಿಂಕ್ಯ ರಹಾನೆ ಕೂಡ ರೇಸ್‌ನಲ್ಲಿದ್ದರು. ಆದರೆ ಕಳೆದ ವರ್ಷದ ಐಪಿಎಲ್‌ ಯಶಸ್ಸು ಹಾಗೂ ಅವರು ಆಸ್ಟ್ರೇಲಿಯ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದರಿಂದ ಸ್ಮಿತ್‌ಗೆ ನಾಯಕತ್ವ ಒಲಿಯಿತು.

Advertisement

Udayavani is now on Telegram. Click here to join our channel and stay updated with the latest news.

Next