Advertisement
ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ ಅವರೆಲ್ಲ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಮುಂದು ವರಿಯಲಿದ್ದಾರೆ. ಆದರೆ ನಾಯಕ ಗೌತಮ್ ಗಂಭೀರ್ ಅವರನ್ನು ಕೆಕೆಆರ್ ಕೈಬಿಟ್ಟಿರುವುದು ಅಚ್ಚರಿ ಯಾಗಿ ಕಂಡಿದೆ. ರಾಬಿನ್ ಉತ್ತಪ್ಪ ಕೂಡ ಕೆಕೆಆರ್‌ನಿಂದ ಹೊರ ಬಿದ್ದಿದ್ದಾರೆ. ಇದೇ ವೇಳೆ ರಿಕಿ ಪಾಂಟಿಂಗ್ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಪ್ರಧಾನ ಕೋಚ್ ಆಗಿ ನೇಮಿಸಲಾಗಿದೆ ಎಂದು ಡಿಡಿ ಸಿಇಒ ಹೇಮಂತ್ ದುವಾ ಹೇಳಿದ್ದಾರೆ. ಎಲ್ಲ ಫ್ರಂಚೈಸಿಗಳ ಉಳಿಕೆಯ ಮೊತ್ತ ನಿಗದಿಯಾಗಿದ್ದು, ಮುಂದಿನ ಹರಾಜಿನಲ್ಲಿ ಇದೇ ಮೊತ್ತಕ್ಕೆ ಉಳಿದ ಆಟಗಾರರನ್ನು ಖರೀದಿಸಬೇಕಿದೆ.
ಫ್ರಾಂಚೈಸಿಗಳು ಉಳಿಸಿಕೊಂಡಿರುವ ಆಟಗಾರರ ಪೈಕಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 17 ಕೋಟಿ ರೂ. ಮೊತ್ತ ನೀಡಲಾಗಿದೆ. ಇದೇ ಗರಿಷ್ಠ ಮೊತ್ತ. ಧೋನಿ ಮತ್ತು ರೋಹಿತ್‌ಗೆ ತಲಾ 15 ಕೋ.ರೂ., ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅವರಿಗೆ ತಲಾ 12 ಕೋ.ರೂ. ನೀಡಲಾಗಿದೆ.ರೈನಾ 11 ಕೋ.ರೂ. ಪಡೆದಿದ್ದಾರೆ. ತಂಡಗಳು ಉಳಿಸಿಕೊಂಡ ಆಟಗಾರರ ಯಾದಿ
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ.
ಉಳಿದ ಮೊತ್ತ: 47 ಕೋ. ರೂ.
ಡೆಲ್ಲಿ ಡೇರ್ ಡೆವಿಲ್ಸ್: ಕ್ರಿಸ್ ಮಾರಿಸ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್.
ಉಳಿದ ಮೊತ್ತ: 47 ಕೋ.ರೂ.
ಆರ್‌ಸಿಬಿ: ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಸಫìರಾಜ್ ಖಾನ್.
ಉಳಿದ ಮೊತ್ತ: 49 ಕೋ.ರೂ.
ಚೆನ್ನೈ ಸೂರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜ.
ಉಳಿದ ಮೊತ್ತ: 47 ಕೋ. ರೂ.
ರಾಜಸ್ಥಾನ್ ರಾಯಲ್ಸ್: ಸ್ಮಿತ್.
ಉಳಿದ ಮೊತ್ತ: 67.5 ಕೋ.ರೂ.
ಕಿಂಗ್ಸ್ ಇಲೆವೆನ್ ಪಂಜಾಬ್: ಅಕ್ಷರ್ ಪಟೇಲ್. ಉಳಿದ ಮೊತ್ತ: 67.5 ಕೋ.ರೂ.
ಕೆಕೆಆರ್: ಸುನೀಲ್ ನಾರಾಯಣ್, ಆಂಡ್ರೆ ರಸೆಲ್.
ಉಳಿದ ಮೊತ್ತ: 67.5 ಕೋ.ರೂ.
ಸನ್‌ರೈಸರ್ ಹೈದರಾಬಾದ್: ವಾರ್ನರ್, ಭುವನೇಶ್ವರ್ ಕುಮಾರ್.
ಉಳಿದ ಮೊತ್ತ: 67.5 ಕೋ.ರೂ.