Advertisement
ಅಂದಹಾಗೆ ಶುಕ್ರವಾರ ರೋಹಿತ್ ಪಡೆ ತೃತೀಯ ಸ್ಥಾನಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಹೋರಾಡಲಿದೆ. ಇದು ಪಂಜಾಬ್‌ನ 2ನೇ ತವರಾದ ಇಂದೋರ್‌ನಲ್ಲಿ ನಡೆಯುವ ಪ್ರಸಕ್ತ ಋತುವಿನ ಮೊದಲ ಪಂದ್ಯ. ಪಂಜಾಬ್-ಮುಂಬೈ ನಡುವಿನ ಮೊದಲ ಲೀಗ್ ಪಂದ್ಯವೂ ಹೌದು.
3 ಬಾರಿಯ ಐಪಿಎಲ್ ಚಾಂಪಿಯನ್ ಎಂಬ ಖ್ಯಾತಿಯ ಮುಂಬೈ ಇಂಡಿಯನ್ಸ್ ಈ ಬಾರಿ ಏಕೋ ಬಹಳ ಮಂಕಾಗಿದೆ. ಆಡಿದ 8 ಪಂದ್ಯಗಳಲ್ಲಿ ಕೇವಲ ಎರಡನ್ನಷ್ಟೇ ಗೆದ್ದು ಅಂತಿಮ ಸ್ಥಾನಕ್ಕೆ ಕುಸಿದಿದೆ. ಪ್ಲೇ-ಆಫ್ ತಲುಪಬೇಕಾದರೆ ಕನಿಷ್ಠ 7 ಗೆಲುವು (14 ಅಂಕ) ಅಗತ್ಯ ಎಂಬುದೊಂದು ಲೆಕ್ಕಾಚಾರ. ಮುಂಬೈ ಇನ್ನೂ 6 ಪಂದ್ಯಗಳನ್ನು ಆಡಬೇಕಿರುವುದರಿಂದ ಈ ಗುರಿ ತಲುಪಲು ಸಾಧ್ಯವಿದೆ. ಆದರೆ ಈಗಿನ ತೀವ್ರ ಒತ್ತಡದ ಸ್ಥಿತಿಯಲ್ಲಿ ಸತತ ಗೆಲುವನ್ನು ಕಾಣುತ್ತ ಹೋಗುವುದು ಸುಲಭವಲ್ಲ. ಅಕಸ್ಮಾತ್ ಇದನ್ನು ಸಾಧಿಸಿದರೆ ಇದೊಂದು ಪವಾಡವಾಗಲಿದೆ. ಇದಕ್ಕೆ ಶುಕ್ರವಾರದಿಂದಲೇ ಗೆಲುವಿನ ಆಭಿಯಾನ ಆರಂಭಿಸುವುದು ಅಗತ್ಯ. ಪಂಜಾಬ್ ಫೇವರಿಟ್, ಆದರೆ…
ಅನುಮಾನವೇ ಇಲ್ಲ, ಈ ಮುಖಾಮುಖೀಯಲ್ಲಿ ಪಂಜಾಬ್ ತಂಡವೇ ಫೇವರಿಟ್. ಅಲ್ಲದೇ ಒಂದು ವಾರದ ಸುದೀರ್ಘ ವಿಶ್ರಾಂತಿಯ ಬಳಿಕ ಪಂಜಾಬ್ ಕಣಕ್ಕಿಳಿಯಲಿದೆ. ಕ್ರಿಸ್ ಗೇಲ್, ಕೆ.ಎಲ್. ರಾಹುಲ್ ಅವರಿಗೆಲ್ಲ ತಮ್ಮ ಬ್ಯಾಟಿಂಗ್ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಲು ಈ ಅವಧಿ ಧಾರಾಳ. “ಯುನಿವರ್ಸ್ ಬಾಸ್’ ಗೇಲ್ ಪಂಜಾಬ್ ತಂಡ ಸೇರಿಕೊಂಡ ಬಳಿಕ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸುತ್ತಿರುವುದೊಂದು ಬೋನಸ್. ಜಮೈಕನ್ ದೈತ್ಯ ಈಗಾಗಲೇ 252 ರನ್ ಪೇರಿಸಿದ್ದಾರೆ. ಐಪಿಎಲ್‌ನಲ್ಲಿ ಶರವೇಗದ ಅರ್ಧ ಶತಕ ದಾಖಲಿಸಿರುವ ರಾಹುಲ್ 268 ರನ್ ಪೇರಿಸಿ ಅಗ್ರಸ್ಥಾನದಲ್ಲಿದ್ದಾರೆ.
Related Articles
Advertisement
ಕೈಕೊಡುತ್ತಿರುವ ಓಪನಿಂಗ್ಮುಂಬೈ ಸೂರ್ಯಕುಮಾರ್ ಯಾದವ್ (283 ರನ್), ಎವಿನ್ ಲೆವಿಸ್ (194 ರನ್), ರೋಹಿತ್ ಶರ್ಮ (196) ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಕೆಳ ಕ್ರಮಾಂಕದಲ್ಲಿ ಪಾಂಡ್ಯ ಸೋದರರನ್ನು ನಂಬಿಕೊಳ್ಳಬಹುದು. ಬುಮ್ರಾ ಜತೆಗೆ ಹಾರ್ದಿಕ್ ಪಾಂಡ್ಯ ಕೂಡ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಯುವ ಲೆಗ್ ಸ್ಪಿನ್ನರ್ ಮಾಯಾಂಕ್ ಮಾರ್ಕಂಡೆ ಮ್ಯಾಚ್ ವಿನ್ನರ್ ಆಗಬಲ್ಲ ಛಾತಿ ಹೊಂದಿದ್ದಾರೆ.
ಆದರೆ ಆರಂಭಿಕ ವಿಕೆಟಿಗೆ ರನ್ ಹರಿದು ಬಾರದಿರುವುದು ಮುಂಬೈಗೆ ಎದುರಾಗಿರುವ ಗಂಭೀರ ಸಮಸ್ಯೆ. ಈವರೆಗಿನ 8 ಇನ್ನಿಂಗ್ಸ್ ಗಳಲ್ಲಿ ಮೊದಲ ವಿಕೆಟಿಗೆ ಮುಂಬೈ ಗಳಿಸಿದ ರನ್ ಗಮನಿಸಿ: 7, 11, 102, 0, 1, 12, 69, 5. ಡೆಲ್ಲಿ ವಿರುದ್ಧ ಮೊದಲ ವಿಕೆಟಿಗೆ 9 ಓವರ್‌ಗಳಿಂದ 102 ರನ್ ಪೇರಿಸಿತಾದರೂ ಈ ಪಂದ್ಯವನ್ನು ಅಂತಿಮ ಎಸೆತದಲ್ಲಿ ಕಳೆದುಕೊಂಡಿತು. ಸಾಧನೆ ಜತೆಗೆ ಅದೃಷ್ಟ ಕೂಡ ಮುಂಬೈ ಕೈಹಿಡಿಯಬೇಕಿದೆ.