Advertisement

ಫಿಂಚ್‌ ಮದುವೆ: ಮೊದಲ ಐಪಿಎಲ್‌ ಪಂದ್ಯಕ್ಕಿಲ್ಲ

06:40 AM Feb 16, 2018 | Team Udayavani |

ಮೆಲ್ಬರ್ನ್: 2018ರ ಐಪಿಎಲ್‌ ವೇಳಾಪಟ್ಟಿ ಬಿಡುಗೊಂಡ ಬೆನ್ನಲ್ಲೇ ಆಸ್ಟ್ರೇಲಿಯದ ಇಬ್ಬರು ಕ್ರಿಕೆಟಿಗರು ಮೊದಲ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇವರೆಂದರೆ ಆರನ್‌ ಫಿಂಚ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌. ಕಾರಣ, ಫಿಂಚ್‌ ಮದುವೆ!

Advertisement

ಹೌದು, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಸದಸ್ಯನಾಗಿರುವ ಫಿಂಚ್‌ ಎಪ್ರಿಲ್‌ 7ರಂದು ಗೆಳತಿ ಆ್ಯಮಿ ಗ್ರಿಫಿತ್‌ ಜತೆ ವಿವಾಹ ಬಂಧಕ್ಕೊಳಗಾಗಲಿದ್ದಾರೆ. ಈ ಕಾರಣಕ್ಕಾಗಿ ಎ. 8ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಡೆಲ್ಲಿ ಡೇರ್‌ಡೆವಿಲ್ಸ್‌ ವಿರುದ್ಧದ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಗುತ್ತದೆ.

ಇನ್ನು ಡೆಲ್ಲಿ ತಂಡದ ಆಟಗಾರ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹೊರಗುಳಿಯುವುದೇಕೆ ಗೊತ್ತೇ? ಗೆಳೆಯ ಫಿಂಚ್‌ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು!

“ನಾನು ಇಂದು ಬೆಳಗ್ಗೆ ಐಪಿಎಲ್‌ ವೇಳಾಪಟ್ಟಿಯನ್ನು ನೋಡಿದೆ. ನನ್ನ ಮದುವೆಯನ್ನು ಮಿಸ್‌ ಮಾಡಿಕೊಳ್ಳುವ ಸಾಧ್ಯತೆಯೇ ಇಲ್ಲ. ಆ್ಯಮಿಯನ್ನು ಬಿಟ್ಟಿರುವುದು ಕಷ್ಟ….’ ಎಂದು ಫಿಂಚ್‌ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

“ನಮ್ಮ ಮುಂದಿನ ಪಂದ್ಯ ನಡೆಯುವುದು ಎ. 13ಕ್ಕೆ. ಮದುವೆ ಸಮಾರಂಭಕ್ಕೆ ಇಷ್ಟು ಅವಧಿ ಧಾರಾಳ. ಅದೃಷ್ಟವಶಾತ್‌ ನಾನು ಒಂದೇ ಐಪಿಎಲ್‌ ಪಂದ್ಯವನ್ನು ತಪ್ಪಿಸಿಕೊಳ್ಳುತ್ತಿದ್ದೇನೆ…’ ಎಂದಿದ್ದಾರೆ ಫಿಂಚ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next