Advertisement

ಹರ್ಷ ಗೊಯೆಂಕಾ ಮೇಲೆ ಧೋನಿ ಅಭಿಮಾನಿಗಳ ಬೌನ್ಸರ್‌

03:45 AM May 18, 2017 | Team Udayavani |

ಪುಣೆ: ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ ಅಭಿಮಾನಿಗಳು ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ಮಾಲಕನ ಸಹೋದರ ಹರ್ಷ ಗೊಯೆಂಕಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊದಲು ಧೋನಿಯನ್ನು ಗೌರವಿಸುವುದನ್ನು ಕಲಿಯಿರಿ, ನಾವು ಪುಣೆಯನ್ನು ಬೆಂಬಲಿಸುತ್ತಿರುವುದು ಧೋನಿಗಾಗಿ ಹೊರತು ನಿಮಗಾಗಿ ಅಲ್ಲ ಎಂದು ಅಭಿಮಾನಿಗಳು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

Advertisement

ಈ ಬಾರಿಯ ಐಪಿಎಲ್‌ನ ಮೊದಲ ಪಂದ್ಯದಲ್ಲೇ ನಾಯಕ ಸ್ಟೀವನ್‌  ಸ್ಮಿತ್‌ ನೆರವಿನಿಂದ ಪುಣೆ ಗೆದ್ದಿತ್ತು. ಆಗ ಸ್ಮಿತ್‌ ಅವರನ್ನು ಹೊಗಳಿದ್ದ ಹರ್ಷ, ಮಾಜಿ ನಾಯಕ ಧೋನಿಯನ್ನು ತೆಗಳಿದ್ದರು. ಅಲ್ಲಿಂದ ಶುರುವಾಗಿರುವ ಚಕಮಕಿ ಇನ್ನೂ ನಿಂತಿಲ್ಲ.

ಇದಕ್ಕೆಲ್ಲ ಕಾರಣವಾಗಿದ್ದು ಪುಣೆ-ಮುಂಬೈ 1ನೇ ಕ್ವಾಲಿಫ‌ಯರ್‌ ಪಂದ್ಯ. ಈ ಪಂದ್ಯದಲ್ಲಿ ಮುಂಬೈಯನ್ನು ಸೋಲಿಸಿ ಪುಣೆ ಫೈನಲ್‌ಗೇರಿದೆ. ಇದರಲ್ಲಿ ಧೋನಿಯ ಸ್ಫೋಟಕ ಬ್ಯಾಟಿಂಗ್‌ ನಿರ್ಣಾಯಕ ಪಾತ್ರ ವಹಿಸಿತ್ತು. ಧೋನಿ ಅವರ ಅದ್ಭುತ ಬ್ಯಾಟಿಂಗ್‌ ನೋಡಿದ  ಹರ್ಷ ಗೊಯೆಂಕಾ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ. ಟ್ವೀಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಆರಂಭಿಕ ಹಂತದಲ್ಲಿ ಬೈದು ಈಗ ಹೊಗಳುತ್ತಿರುವ ಅವರ ನಡೆ ಧೋನಿ ಅಭಿಮಾನಿಗಳಿಗೆ ಸಿಟ್ಟು ತರಿಸಿದ್ದು, ಟೀಕೆಗಳ ಸುರಿಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next