Advertisement

ಐಪಿಎಲ್‌-2009: ಮೊದಲ ಟೈ ರೋಮಾಂಚನ: ಸೂಪರ್‌ ಓವರ್‌ನಲ್ಲಿ ರಾಜಸ್ಥಾನಕ್ಕೆ ಜಯ

02:36 AM May 10, 2022 | Team Udayavani |

ಐಪಿಎಲ್‌ ಇತಿಹಾಸದ ಟೈ ಪಂದ್ಯಗಳ ರೋಮಾಂಚನ ಗರಿಗೆದರುವುದು 2009ನೇ ಲೀಗ್‌ ಮೂಲಕ. ಈ ಕೂಟ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಎ. 23ರಂದು ಕೇಪ್‌ಟೌನ್‌ನಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳ ನಡುವಿನ ಪಂದ್ಯ ಅತ್ಯಂತ ರೋಚಕವಾಗಿ ಸಾಗಿ, ಕೊನೆಗೆ ಸಮಬಲದಲ್ಲಿ ಅಂತ್ಯಗೊಂಡಿತು. ಸೂಪರ್‌ ಓವರ್‌ನಲ್ಲಿ ಶೇನ್‌ ವಾರ್ನ್ ಸಾರಥ್ಯದ ರಾಜಸ್ಥಾನ್‌ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 6 ವಿಕೆಟಿಗೆ 150 ರನ್‌ ಗಳಿಸಿದರೆ, ಕೆಕೆಆರ್‌ ಕೂಡ 8 ವಿಕೆಟ್‌ ಕಳೆದುಕೊಂಡು 150 ರನ್‌ ಪೇರಿಸಿತು. 4 ವಿಕೆಟ್‌ ಕೈಲಿದ್ದರೂ ಕಮ್ರಾನ್‌ ಖಾನ್‌ ಎಸೆದ ಅಂತಿಮ ಓವರ್‌ನಲ್ಲಿ 7 ರನ್‌ ಹೊಡೆಯಲು ಕೆಕೆಆರ್‌ಗೆ ಸಾಧ್ಯವಾಗದೇ ಹೋಯಿತು. ಆಗಲೇ 26 ಎಸೆತಗಳಿಂದ 45 ರನ್‌ ಗಳಿಸಿ ಸೆಟ್ಲ ಆಗಿದ್ದ ನಾಯಕ ಸೌರವ್‌ ಗಂಗೂಲಿ ಕ್ರೀಸ್‌ನಲ್ಲಿದ್ದರು. ಜತೆಯಲ್ಲಿದ್ದವರು ಅಜಿತ್‌ ಅಗರ್ಕರ್‌.
ಕಮ್ರಾನ್‌ ಎಸೆದ ಮೊದಲ ಎಸೆತ ವೈಡ್‌. ಬಳಿಕ ಗಂಗೂಲಿ ಮತ್ತು ಅಗರ್ಕರ್‌ ಸಿಂಗಲ್ಸ್‌ ತೆಗೆದರು. ಮುಂದಿನದು ಡಾಟ್‌ ಬಾಲ್‌. ಬಳಿಕ 2 ಲೆಗ್‌ಬೈ. 5ನೇ ಎಸೆತದಲ್ಲಿ ಗಂಗೂಲಿ ಔಟ್‌. ಅಂತಿಮ ಎಸೆತದಲ್ಲಿ ಇಶಾಂತ್‌ ಶರ್ಮ ಔಟ್‌. ಸ್ಕೋರ್‌ ಸಮಬಲ!

ಸೂಪರ್‌ ಓವರ್‌
ರಾಜಸ್ಥಾನ್‌ ಪರ ಕಮ್ರಾನ್‌ ಖಾನ್‌ ಅವರೇ ಸೂಪರ್‌ ಓವರ್‌ ಎಸೆದರು. ಗೇಲ್‌-ಮೆಕಲಮ್‌ ಸೇರಿಕೊಂಡು ಒಂದು ವಿಕೆಟಿಗೆ 15 ರನ್‌ ಬಾರಿಸಿದರು.

ಕೆಕೆಆರ್‌ ತಂಡದ ಸೂಪರ್‌ ಓವರ್‌ ಬೌಲರ್‌ ಅಜಂತ ಮೆಂಡಿಸ್‌. ಬ್ಯಾಟರ್‌ ಯೂಸುಫ್ ಪಠಾಣ್‌. ಅವರೊಬ್ಬರೇ 6, 2, 6, 4 ರನ್‌ ಬಾರಿಸಿ ನಾಲ್ಕೇ ಎಸೆತಗಳಲ್ಲಿ ರಾಜಸ್ಥಾನ್‌ ಗೆಲುವನ್ನು ಸಾರಿದರು.

ರಾಜಸ್ಥಾನ್‌ ಸರದಿಯಲ್ಲಿ ಯೂಸುಫ್ ಪಠಾಣ್‌ ಅವರದೇ ಸರ್ವಾಧಿಕ ಗಳಿಕೆಯತಾಗಿತ್ತು. ಅವರು 21 ಎಸೆತಗಳಿಂದ 42 ರನ್‌ ಬಾರಿಸಿದ್ದರು.

Advertisement

ಐಪಿಎಲ್‌ ಟೈ ಮ್ಯಾಚ್‌-1
ರಾಜಸ್ಥಾನ್‌ ರಾಯಲ್ಸ್‌
ಗ್ರೇಮ್‌ ಸ್ಮಿತ್‌ ಸಿ ಗೇಲ್‌ ಬಿ ಮೆಂಡಿಸ್‌ 15
ಪಾಲ್‌ ವಲ್ತಾಟಿ ಸಿ ಇಶಾಂತ್‌ ಬಿ ಅನುರೀತ್‌ 5
ರಾಬ್‌ ಕ್ವೆ„ನಿ ಸಿ ಗೇಲ್‌ ಬಿ ಇಶಾಂತ್‌ 6
ಯೂಸುಫ್ ಪಠಾಣ್‌ ಸಿ ಯಶ್ಪಾಲ್‌ ಬಿ ಮೆಂಡಿಸ್‌ 42
ರವೀಂದ್ರ ಜಡೇಜ ಸಿ ಯಶ್ಪಾಲ್‌ ಬಿ ಇಶಾಂತ್‌ 22
ಡಿಮಿಟ್ರಿ ಮಸ್ಕರೇನಸ್‌ ಬಿ ಅನುರೀತ್‌ 27
ಅಭಿಷೇಕ್‌ ರಾವತ್‌ ಔಟಾಗದೆ 21
ಶೇನ್‌ ವಾರ್ನ್ ಔಟಾಗದೆ 2
ಇತರ 10
ಒಟ್ಟು (6 ವಿಕೆಟಿಗೆ) 150
ವಿಕೆಟ್‌ ಪತನ: 1-8, 2-14, 3-70, 4-73, 5-112, 6-125.
ಬೌಲಿಂಗ್‌:
ಇಶಾಂತ್‌ ಶರ್ಮ 4-0-36-2
ಅನುರೀತ್‌ ಸಿಂಗ್‌ 4-0-35-2
ಅಜಿತ್‌ ಅಗರ್ಕರ್‌ 1-0-14-0
ಅಜಂತ ಮೆಂಡಿಸ್‌ 4-0-19-2
ಸೌರವ್‌ ಗಂಗೂಲಿ 3-0-23-0
ಕ್ರಿಸ್‌ ಗೇಲ್‌ 4-0-20-0

* ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಗೇಲ್‌ ಸಿ ಜಡೇಜ ಬಿ ವಾರ್ನ್ 41
ಬ್ರೆಂಡನ್‌ ಮೆಕಲಮ್‌ ಸಿ ಕಮ್ರಾನ್‌ ಬಿ ಮಸ್ಕರೇನಸ್‌ 3
ಲಕ್ಷ್ಮೀರತನ್‌ ಶುಕ್ಲ ಸಿ ರಾವತ್‌ ಬಿ ಕಮ್ರಾನ್‌ 13
ಬ್ರಾಡ್‌ ಹಾಜ್‌ ಸಿ ರಾವತ್‌ ಬಿ ಪಟೇಲ್‌ 5
ಸೌರವ್‌ ಗಂಗೂಲಿ ಸಿ ರಾವತ್‌ ಬಿ ಕಮ್ರಾನ್‌ 46
ಸಂಜಯ್‌ ಬಂಗಾರ್‌ ಸಿ ಸ್ಮಿತ್‌ ಬಿ ಕಮ್ರಾನ್‌ 2
ಯಶ್ಪಾಲ್‌ ಸಿಂಗ್‌ ಸಿ ರಾವತ್‌ ಬಿ ವಾರ್ನ್ 20
ಅಜಿತ್‌ ಅಗರ್ಕರ್‌ ಔಟಾಗದೆ 1
ಇಶಾಂತ್‌ ಶರ್ಮ ರನೌಟ್‌ 1
ಇತರ 18
ಒಟ್ಟು (8 ವಿಕೆಟಿಗೆ) 150
ವಿಕೆಟ್‌ ಪತನ: 1-25, 2-60, 3-67, 4-71, 5-94, 6-143, 7-149. 8-150.
ಬೌಲಿಂಗ್‌:
ಯೂಸುಫ್ ಪಠಾಣ್‌ 4-0-27-0
ಡಿಮಿಟ್ರಿ ಮಸ್ಕರೇನಸ್‌ 4-1-29-1
ಶೇನ್‌ ವಾರ್ನ್ 4-0-25-2
ಕಮ್ರಾನ್‌ ಖಾನ್‌ 4-0-18-3
ಮುನಾಫ್ ಪಟೇಲ್‌ 3-0-26-1
ರವೀಂದ್ರ ಜಡೇಜ 1-0-7-0
ಪಂದ್ಯಶ್ರೇಷ್ಠ: ಯೂಸುಫ್ ಪಠಾಣ್‌

Advertisement

Udayavani is now on Telegram. Click here to join our channel and stay updated with the latest news.

Next