Advertisement

iPhone ಹ್ಯಾಕ್‌: ತನಿಖೆಗೆ ಆದೇಶ – ಸರಕಾರದಿಂದಲೇ ಹ್ಯಾಕಿಂಗ್‌ ಎಂದು ವಿಪಕ್ಷಗಳ ಆರೋಪ

10:46 PM Oct 31, 2023 | Pranav MS |

ಹೊಸದಿಲ್ಲಿ: “ನಿಮ್ಮ ಐಫೋನ್‌ಗಳನ್ನು ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಆ್ಯಪಲ್‌ ಕಂಪೆನಿಯು ತನ್ನ ಬಳಕೆದಾರರಿಗೆ ಕಳುಹಿಸಿರುವ ಸಂದೇಶವು ಮಂಗಳವಾರ ರಾಜಕೀಯ ಮಟ್ಟದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

Advertisement

ಕೇಂದ್ರ ಸರಕಾರವು ವಿಪಕ್ಷ ನಾಯಕರ ಐಫೋನ್‌ಗಳನ್ನು ಹ್ಯಾಕ್‌ ಮಾಡುತ್ತಿದೆ ಎಂದು ಸಂಸದರಾದ ಶಶಿ ತರೂರ್‌, ಮಹುವಾ ಮೊಹಿತ್ರಾ, ಪ್ರಿಯಾಂಕಾ ಚತುರ್ವೇದಿ, ಪವನ್‌ ಖೇರಾ ಮತ್ತಿತರರು ಆರೋಪಿಸಿದ್ದಾರೆ. ಕೇಂದ್ರ ಸರಕಾರ ವಿಪಕ್ಷ ಗಳ ಮೇಲೆ ಕಣ್ಣಿಟ್ಟಿದೆ, ಬೇಕಾ ದರೆ ನನ್ನ ಫೋನ್‌ ಕೊಡಲು ಸಿದ್ಧ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಈ ಆರೋಪ ಕೇಳಿಬಂದ ಬೆನ್ನಲ್ಲೇ ಕೇಂದ್ರ ಐಟಿ ಸಚಿವ ಅಶ್ವಿ‌ನಿ ವೈಷ್ಣವ್‌ ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ.

ವಿಪಕ್ಷಗಳ ಆರೋಪವನ್ನು ಅವರು ತಳ್ಳಿಹಾಕಿದ್ದು, ಆ್ಯಪಲ್‌ ಕಂಪೆನಿಯು 150 ದೇಶಗಳಲ್ಲಿರುವ ತನ್ನ ಬಳಕೆದಾರರಿಗೆ ಇಂಥ ಸಂದೇಶ ರವಾನಿಸಿದೆ. ಅವುಗಳು ಅಪೂರ್ಣ, ಅಸಮರ್ಪಕ ದತ್ತಾಂಶವನ್ನು ಆಧರಿಸಿ ಕಳುಹಿಸಿರುವ ಸಂದೇಶವೂ ಆಗಿರಬಹುದು. ಕೆಲವು ಸುಳ್ಳೂ ಆಗಿರಬಹುದು ಎಂದಿದ್ದಾರೆ.

ಕೆಲವು ತಿಂಗಳುಗಳ ಹಿಂದಷ್ಟೇ ಇಸ್ರೇಲ್‌ನ ಪೆಗಾಸಸ್‌ ತಂತ್ರಜ್ಞಾನವನ್ನು ಬಳಸಿಕೊಂಡು ನಮ್ಮ ಮೊಬೈಲ್‌ಗ‌ಳನ್ನು ಕೇಂದ್ರ ಸರಕಾರ ಹ್ಯಾಕ್‌ ಮಾಡುತ್ತಿವೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next