Advertisement

iPhone: ಕೈತಪ್ಪಿ ಕಾಣಿಕೆ ಹುಂಡಿಗೆ ಬಿದ್ದ ಐಫೋನ್… ಇದು ದೇವರ ಸೊತ್ತು ಎಂದ ಸಿಬಂದಿ

12:52 PM Dec 21, 2024 | Team Udayavani |

ಚೆನ್ನೈ: ದೇವಸ್ಥಾನಕ್ಕೆ ಬರುವ ಭಕ್ತರಲ್ಲಿ ಹೆಚ್ಚಿನವರು ದೇವರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹರಕೆ ಹೇಳುತ್ತಾರೆ ಅದರಂತೆ ಮನಸ್ಸಿನಲ್ಲಿ ಎಣಿಸಿದ ಕಾರ್ಯ ಸಿದ್ಧಿಯಾಯಿತು ಎಂದಾದರೆ ತಾವು ಏನು ಹರಕೆ ಹೇಳಿಕೊಂಡಿದ್ದೇವೆ ಅದನ್ನು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ಒಪ್ಪಿಸುತ್ತಾರೆ, ಹಾಗೆಯೆ ಇಲ್ಲೊಂದು ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುವಾಗ ಹುಂಡಿಯಲ್ಲಿ ದುಬಾರಿ ಬೆಳೆಯ ಐಫೋನ್ ಪತ್ತೆಯಾಗಿದೆ. ಆದರೆ ಇದು ಭಕ್ತರು ಹರಕೆ ರೂಪದಲ್ಲಿ ಹಾಕಿದ್ದಲ್ಲ ಬದಲಾಗಿ ಹುಂಡಿಗೆ ಹಣ ಹಾಕುವ ವೇಳೆ ಆಯತಪ್ಪಿ ಹುಂಡಿಗೆ ಬಿದ್ದಿರುವುದು ಎಂದು ಬಳಿಕ ಗೊತ್ತಾಗಿದೆ.

Advertisement

ಅಂದಹಾಗೆ ಈ ಘಟನೆ ನಡೆದಿರುವುದು ಚೆನ್ನೈ ಸಮೀಪದ ತಿರುಪೋರೂರಿನ ಅರುಲ್ಮಿಗು ಕಂದಸ್ವಾಮಿ ದೇವಸ್ಥಾನದಲ್ಲಿ. ವಿನಯಗಾಪುರದ ದಿನೇಶ್ ಎಂಬ ವ್ಯಕ್ತಿ ತಿಂಗಳ ಹಿಂದೆ ಈ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದರು ಈ ವೇಳೆ ದೇವಸ್ಥಾನದ ಒಳಗೆ ಕಾಣಿಕೆ ಹುಂಡಿಗೆ ಹಣ ಹಾಕಲು ಶರ್ಟ್ ಕಿಸೆಯಿಂದ ಹಣ ತೆಗೆಯುವ ವೇಳೆ ಶರ್ಟ್ ಕಿಸೆಯಲ್ಲಿದ್ದ ದುಬಾರಿ ಬೆಲೆಯ ಐಫೋನ್ ಜಾರಿ ಕಾಣಿಕೆ ಡಬ್ಬದ ಒಳಗೆ ಬಿದ್ದಿದೆ ಕಾಣಿಕೆ ಹುಂಡಿ ದೊಡ್ಡದಾಗಿದ್ದರಿಂದ ಮೊಬೈಲ್ ಸುಲಭವಾಗಿ ಹುಂಡಿಯ ಒಳಗೆ ಬಿದ್ದಿದೆ, ಇದರಿಂದ ಗಾಬರಿಗೊಂಡ ದಿನೇಶ್ ದೇವಳದ ಸಿಬಂದಿಯನ್ನು ಸಂಪರ್ಕಿಸಿ ಹೀಗೀಗೆ ಕಾಣಿಕೆ ಹಾಕುವ ವೇಳೆ ನನ್ನ ಮೊಬೈಲ್ ಕೈತಪ್ಪಿ ಹುಂಡಿಯ ಒಳಗೆ ಬಿದ್ದಿದೆ ಎಂದು ಹೇಳಿಕೊಂಡಿದ್ದಾನೆ ಆದರೆ ಇದಕ್ಕೆ ಉತ್ತರಿಸಿದ ಸಿಬಂದಿ ಹುಂಡಿಗೆ ಬಿದ್ದ ವಸ್ತುಗಳು ದೇವರಿಗೆ ಸೇರಿದ್ದು ಹಾಗಾಗಿ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇವಳದ ಸಿಬಂದಿಯ ಮಾತು ಕೇಳಿ ದಂಗಾದ ದಿನೇಶ್ ಇನ್ನೇನು ಮಾಡುವುದು ಎಂದು ಚಿಂತಿಸಿ ಬಿಟ್ಟು ಬಿಡುವ ಎಂದರೆ ದುಬಾರಿ ಬೆಲೆಯ ಐಫೋನ್ ಅಲ್ಲದೆ ಅಗತ್ಯ ದಾಖಲೆಗಳು ಮೊಬೈಲ್ ನಲ್ಲೆ ಇರುವುದರಿಂದ ಬಿಟ್ಟು ಬಿಡುವ ಹಾಗಿಲ್ಲ ಎಂದು ಆಲೋಚಿಸಿ ಮತ್ತೆ ದೇವಸ್ಥಾನದ ಆಡಳಿತ ಕಚೇರಿಗೆ ತೆರಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ ಆದರೆ ಅದಕ್ಕೆ ಆಡಳಿತ ಮಂಡಳಿಯವರು ಒಮ್ಮೆ ಹುಂಡಿಗೆ ಬಿದ್ದ ಸೊತ್ತನ್ನು ಮತ್ತೆ ವಾಪಸ್ಸು ನೀಡಲಾಗುವುದಿಲ್ಲ ಅದು ದೇವರಿಗೆ ಸಂದಾಯವಾದ ಹಾಗೆ ಎಂದು ಹೇಳಿದ್ದಾರೆ, ಅಲ್ಲದೆ ದೇವಳದ ಹುಂಡಿಯನ್ನು ಬೇಕೆಂದಾಗ ತೆರೆಯಲಾಗದು ಅದನ್ನು ಪ್ರತಿ ಎರಡು ತಿಂಗಳಿಗೊಮ್ಮೆ ಮಾತ್ರ ತೆರೆಯಲಾಗುತ್ತದೆ ಅವಾಗ ಬನ್ನಿ ದೇವಳದ ಇತರ ಹಿರಿಯ ಅಧಿಕಾರಿಗಳು ಅಂದು ಇರುತ್ತಾರೆ ಅವರ ಬಳಿ ಕೇಳಿನೋಡಿ ಅವರು ಏನು ಹೇಳುತ್ತಾರೆ ನೋಡಿ ಎಂದಿದ್ದರು.

ಅದರಂತೆ ಶುಕ್ರವಾರ(ಡಿ.20) ರಂದು ದೇವಳದ ಹುಂಡಿ ತೆರೆಯಲಾಗಿದ್ದು ಅದರಂತೆ ದಿನೇಶ್ ದೇವಸ್ಥಾನಕ್ಕೆ ಬಂದಿದ್ದಾರೆ, ಹುಂಡಿ ತೆರೆದಾಗ ಅದರಲ್ಲಿ ಐಫೋನ್ ಕೂಡ ಸಿಕ್ಕಿದೆ ಆದರೆ ಅಧಿಕಾರಿಗಳು ಮಾತ್ರ ಭಕ್ತನಿಗೆ ಫೋನ್ ನೀಡಲು ನಿರಾಕರಿಸಿದ್ದಾರೆ, ಜೊತೆಗೆ ಅದರಲ್ಲಿರುವ ಸಿಮ್ ಕಾರ್ಡ್, ಜೊತೆಗೆ ಅದರಲ್ಲಿರುವ ದಾಖಲೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ ಆದರೆ ಮೊಬೈಲ್ ಮಾತ್ರ ದೇವರ ಸೊತ್ತು ಆಗಿರುವುದರಿಂದ ವಾಪಸ್ಸು ಕೊಡಲು ಸಾಧ್ಯವಿಲ್ಲ ಮೊಬೈಲ್ ನಮ್ಮ ಆಡಳಿತ ಕಚೇರಿಯಲ್ಲೇ ಇರಲಿದೆ ಎಂದು ಹೇಳಿದ್ದಾರೆ.

ಇದಾದ ಬಳಿಕ ದಿನೇಶ್ ಬರಿಗೈಯಲ್ಲೇ ಮನೆಗೆ ವಾಪಸ್ಸಾಗಿದ್ದಾರೆ.

Advertisement

ಇದನ್ನೂ ಓದಿ: Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Advertisement

Udayavani is now on Telegram. Click here to join our channel and stay updated with the latest news.

Next