Advertisement

ಮಾಸ್ಕ್ ಧರಿಸಿ ಫೇಸ್ ಐಡಿ ಲಾಕ್ ತೆಗೆಯಲು ಕಷ್ಟವೇ..? ಐಫೋನ್ ತಂದಿದೆ ಹೊಸ ಫೀಚರ್

04:15 PM Jan 28, 2022 | Team Udayavani |

ಈಗೇನಿದ್ದರೂ ಸ್ಮಾರ್ಟ್ ಫೋನ್ ಯುಗ. ಪ್ರತಿಯೊಂದು ಸ್ಮಾರ್ಟ್ ಫೋನ್ ಗಳನ್ನು ತೆರೆಯಲು ಲಾಕ್ ಗಳಿರುತ್ತದೆ. ಪಾಸ್ ಕೋಡ್ ಲಾಕ್, ಥಂಬ್ ಲಾಕ್, ಫೇಸ್ ಲಾಕ್ ಹೀಗೆ ಹಲವು ಬಗೆಯ ಲಾಕ್ ಸಿಸ್ಟಮ್ ಗಳು ಸ್ಮಾರ್ಟ್ ಫೋನ್ ಗಳಲ್ಲಿದೆ. ಗ್ರಾಹಕರ ಮೊಬೈಲಿನ ಗೌಪ್ಯತೆ ಕಾಪಾಡಲು ಈ ಲಾಕ್ ಗಳು ಸಹಾಯ ಮಾಡುತ್ತದೆ.

Advertisement

ಇತ್ತೀಚೆಗೆ ಬಂದ ಹೆಚ್ಚಿನ ದರ್ಜೆಯ ಮೊಬೈಲ್ ಗಳು ಫೇಸ್ ಐಡಿಯನ್ನು ತನ್ನ ಲಾಕ್ ಗಳಾಗಿ ಹೊಂದಿದೆ. ಬಳಕೆದಾರ ತನ್ನ ಮುಖವನ್ನು ಸ್ಕ್ರೀನ್ ಎದುರು ಹಿಡಿದಾಗ ಲಾಕ್ ಓಪನ್ ಆಗುತ್ತಿದೆ. ಆದರೆ ಕೋವಿಡ್ ಸಾಂಕ್ರಾಮಿಕ ಆಕ್ರಮಿಸಿದ ಬಳಿಕ ಮುಖಕ್ಕೆ ಮಾಸ್ಕ್ ಧಾರಣೆ ಕಡ್ಡಾಯವಾಗಿದೆ. ಹೀಗಾಗಿ ಜನರಿಗೆ ಮಾಸ್ಕ್ ಹಾಕಿಕೊಂಡು ಫೋನ್ ಲಾಕ್ ತೆಗೆಯುವುದೇ ಕಷ್ಟವಾಗಿದೆ.

ಮಾಸ್ಕ್ ಹಾಕಿದರೆ ಫೇಸ್ ಲಾಕ್ ಗಳು ಮುಖವನ್ನು ಗುರುತು ಹಿಡಿಯುವುದಿಲ್ಲ. ಆಗ ಒಂದಾ ಮಾಸ್ಕ್ ತೆಗೆಯಬೇಕು ಅಥವಾ ಎರಡನೇ ಆಯ್ಕೆಯಾದ ಪಾಸ್ ಕೋಡ್ ಮೂಲಕ ಲಾಕ್ ತೆಗೆಯಬೇಕು. ಇದು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಬಳಕೆದಾರರ ದೂರು.

ಆ್ಯಪಲ್ ಕಂಪನಿಯ ಐಫೋನ್ ಮೊಬೈಲ್ ಗಳಲ್ಲಿ ಈ ಫೇಸ್ ಐಡಿ ಲಾಕ್ ಬಳಸುವ ಕಾರಣ ಹಲವರು ಈ ಬಗ್ಗೆ ದೂರು ನೀಡಿದ್ದರು. ಇದೀಗ ಆ್ಯಪಲ್

ಐಒಸ್ 15.4, ಐಪಾಸ್ ಒಎಸ್ 15.4, ಮತ್ತು ಮ್ಯಾಕ್ ಒಎಸ್ ಮಾಂಟೆರೆ 12.3 ರ ಮೊದಲ ಡೆವಲಪರ್ ಬೀಟಾ ಬಿಡುಗಡೆಗಳನ್ನು ತಂದಿದೆ. ಐಒಎಸ್ 15.4 ರ ಇತ್ತೀಚಿನ ಬೀಟಾ ಬಿಡುಗಡೆಯಲ್ಲಿ ಈ ಅನ್ ಲಾಕ್ ಸಿಸ್ಟಮ್ ನವೀಕರಿಸಲಾಗಿದೆ.

Advertisement

ಮಾಸ್ಕ್ ನೊಂದಿಗೆ ಫೇಸ್ ಐಡಿಯನ್ನು ಬಳಸಿಕೊಂಡು ಐಫೋನ್ ಅನ್ಲಾಕ್ ಮಾಡುವ ಸಾಮರ್ಥ್ಯದೊಂದಿಗೆ, ಆ್ಯಪಲ್ ತನ್ನ ತಂತ್ರಜ್ಞಾನವನ್ನು ನವೀಕರಿಸಿದೆ.

ಇದನ್ನೂ ಓದಿ:ಇನ್ನು ಬೇಕಾಬಿಟ್ಟಿ ಗ್ರೂಪ್ ಚಾಟ್ ಮಾಡುವಂತಿಲ್ಲ..: ಅಡ್ಮಿನ್ ಗೆ ಹೊಸ ಆಯ್ಕೆ ನೀಡಿದ ವಾಟ್ಸಪ್

ಬಳಕೆದಾರರು ಐಒಎಸ್ 15.4 ಚಾಲನೆಯಲ್ಲಿರುವ ತಮ್ಮ ಐಫೋನ್ ಅನ್ನು ಮೊದಲ ಬಾರಿಗೆ ಬೂಟ್ ಮಾಡಿದಾಗ ಮಾಸ್ಕ್ ನೊಂದಿಗೆ ಫೇಸ್ ಐಡಿಯನ್ನು ಬಳಸಿಕೊಂಡು ಹೊಂದಿಸುವ ಆಯ್ಕೆಯನ್ನು ಪಡೆಯುತ್ತಾರೆ. ಪರ್ಯಾಯವಾಗಿ, ಐಒಎಸ್ 15.4 ನೊಂದಿಗೆ ಬೂಟ್ ಮಾಡಿದ ನಂತರ ಸೆಟ್ಟಿಂಗ್‌ಗಳು > ಫೇಸ್ ಐಡಿ ಮತ್ತು ಪಾಸ್‌ಕೋಡ್ ಅಡಿಯಲ್ಲಿ ಲಭ್ಯವಿರುವ ‘ಫೇಸ್ ಐಡಿ ವಿತ್ ಎ ಮಾಸ್ಕ್’ ಎಂಬ ಆಯ್ಕೆಯನ್ನು ಟಾಗಲ್ ಮಾಡುವ ಮೂಲಕ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಬಹುದು.

ಸಕ್ರಿಯಗೊಳಿಸುವಾಗ ನೀವು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ಮುಖ ಗುರುತಿಸುವಿಕೆ ತಂತ್ರಜ್ಞಾನಕ್ಕೆ ಎನ್ರೋಲ್ ಮಾಡುವಂತೆಯೇ ಇಲ್ಲೂ ಮಾಡಬಹುದು.

ಕನ್ನಡಕದೊಂದಿಗೆ ಕೆಲಸ ಮಾಡಲು ವೈಶಿಷ್ಟ್ಯವನ್ನು ಸಹ ಆ್ಯಪಲ್ ವಿನ್ಯಾಸಗೊಳಿಸಿದೆ. ಆದಾಗ್ಯೂ, ಮಾಸ್ಕ್‌ನೊಂದಿಗೆ ಫೇಸ್ ಐಡಿಯನ್ನು ಹೊಂದಿಸುವಾಗ ನಿಮ್ಮ ಕನ್ನಡಕಕ್ಕಾಗಿ ಪ್ರತ್ಯೇಕ ದಾಖಲಾತಿಯನ್ನು ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next