ಲಕ್ನೋ: ಉತ್ತರ ಪ್ರದೇಶದಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸೇಲ್ಸ್ ಮ್ಯಾನೇಜರ್ ಆಗಿದ್ದ ಕೋಲಾರ ಮೂಲದ ಎಸ್.ಮಂಜುನಾಥ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ಪೈಕಿ ಸನ್ನಡತೆ ಆಧಾರದಲ್ಲಿ ಒಬ್ಬನಿಗೆ ಜೈಲಿನಿಂದ ಬಿಡುಗಡೆಯಾಗಿದೆ.
ಐಐಎಂ ಲಕ್ನೋ ಪದವೀಧರರಾಗಿದ್ದ ಅವರು 2005ರಲ್ಲಿ ಲಖೀಂಪುರ್ ಖೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಲಬೆರಕೆ ಮಾಡುತ್ತಿರುವುದನ್ನು ಪತ್ತೆ ಹಚ್ಚಿದ್ದಕ್ಕಾಗಿ 2005ರ ನ.19ರಂದು ಹತ್ಯೆ ಮಾಡಲಾಗಿತ್ತು.
ವಿಚಾರಣೆ ಬಳಿಕ ಶಿವಕೇಶ್ ಗಿರಿ ಅಲಿಯಾಸ್ ಲಲ್ಲಾಗಿರಿ, ವಿವೇಕ್ ಶರ್ಮ, ಪವನ್ ಮಿತ್ತಲ್, ದೇವೇಶ್ ಅಗ್ನಹೋತ್ರಿ, ರಾಕೇಶ್ ಆನಂದ್ ಮತ್ತು ರಾಜೇಶ್ ವರ್ಮಾ ವಿರುದ್ಧ ಅರೋಪ ಸಾಬೀತಾಗಿ, ಪ್ರಸ್ತುತ ಬರೇಲಿ ಜೈಲಿನಲ್ಲಿ ಇದ್ದಾರೆ.
ವಿವೇಕ್ ಮತ್ತು ಲಲ್ಲಾಗಿರಿ ಅವರು 17 ವರ್ಷ ಕಾಲ ಜೈಲು ಶಿಕ್ಷೆ ಅನುಭವಿವಿಸಿದ್ದರು. ಇದೀಗ ಸನ್ನಡತೆ ಆಧಾರದಲ್ಲಿ ಲಲ್ಲಾ ಗಿರಿಯನ್ನು ಜ.8ರಂದು ಬಿಡುಗಡೆ ಮಾಡಲಾಗಿದೆ.