ಇಸ್ಲಮಾಬಾದ್: ಪಾಕಿಸ್ಥಾನದ ಮಾಜಿ ನಾಯಕ ಸರ್ಫರಾಜ್ ಅಹಮದ್ ಗೆ ನಾಯಕತ್ವದಲ್ಲಿ ಇನ್ನಷ್ಟು ಸಮಯ ನೀಡಬೇಕಿತ್ತು ಎಂದು ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಇಂಝಮಾಮ್ ಉಲ್ ಹಕ್ ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಹಕ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸರ್ಫರಾಜ್ ಅಹಮದ್ ಅವರು ತನ್ನ ನಾಯಕತ್ವದಲ್ಲಿ ಪಾಖ್ ತಂಡಕ್ಕೆ ಮುಖ್ಯ ಗೆಲುವುಗಳನ್ನು ತಂದಿದ್ದಾರೆ. ತನ್ನ ತಪ್ಪುಗಳಿಂದ ಕಲಿತಿದ್ದಾರೆ. ಆದರೆ ಆ ಅನುಭವ ಆಗುತ್ತಿದ್ದಂತೆ ಸರ್ಫರಾಜ್ ರನ್ನು ನಾಯಕತ್ವದಿಂದ ಕೆಳಗಿಳಿಸಲಾಯಿತು ಎಂದು ಇಂಝಮಾಮ್ ಹಕ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಒಂದು ಕಾಲದಲ್ಲಿ ಎದುರಾಳಿ ಬೌಲರ್ ಗಳಿಗೆ ಭೀತಿ ಹುಟ್ಟಿಸಿದ್ದ ಕ್ರಿಕೆಟಿಗ ಈಗ ದಿನಗೂಲಿ ನೌಕರ!
ಇಂಝಮಾಮ್ ಉಲ್ ಹಕ್ ಅವರು 2016ರಿಂದ 2019ರ ಏಕದಿನ ವಿಶ್ವಕಪ್ ವರೆಗೆ ಪಾಕ್ ಪುರುಷರ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದದ್ದರು. ಈ ಸಮಯದಲ್ಲಿ ಸರ್ಫರಾಜ್ ಅಹಮದ್ ಪಾಕ್ ತಂಡವನ್ನು ಮುನ್ನಡೆಸುತ್ತಿದ್ದರು. ಆದರೆ ನಂತರ ಮಿಸ್ಬಾಹ್ ಉಲ್ ಹಕ್ ಪಾಕ್ ಆಯ್ಕೆ ಸಮಿತಿ ಮುಖ್ಯಸ್ಥನಾಗುತ್ತಿದ್ದಂತೆ ಪಿಸಿಬಿ ಸರ್ಫರಾಜ್ ರನ್ನು ಮೂರು ಮಾದರಿಯ ನಾಯಕತ್ವದಿಂದ ಕೆಳಗಿಳಿಸಿತ್ತು.