Advertisement
ಚರಂಡಿಯ ಎಲ್ಲ ಭಾಗಕ್ಕೂ ಕಾಂಕ್ರೀಟ್ ಸ್ಲಾ ಬ್ ಅಳವಡಿಸಲಾಗಿದ್ದು, ಒಂದು ಬದಿಯಲ್ಲಿ ಮಳೆ ನೀರು ಚರಂಡಿಗೆ ಇಳಿಯಬೇಕು ಎನ್ನುವ ಕಾರಣಕ್ಕೆ ಕಬ್ಬಿಣದ ರಾಡ್ ಬಳಸಲಾಗಿದೆ. ಆದರೆ ವಾಹನದ ಒತ್ತಡದ ಪರಿಣಾಮ ಪ್ರಸ್ತುತ ರಾಡ್ ಬೆಂಡಾಗಿ ಚರಂಡಿಯ ಆಳಕ್ಕೆ ಇಳಿದಿದೆ. ಅಪಾಯಕಾರಿ ಅದನ್ನು ದುರಸ್ತಿ ಪಡಿಸದೆ ಮತ್ತೆ ವಾಹನಗಳು ಅದರ ಮೇಲೆಯೇ ಚಲಿಸಿದರೆ ರಾಡ್ ಪೂರ್ತಿ ಚರಂಡಿಗೆ ಇಳಿದು ವಾಹನಗಳು ಅಲ್ಲೇ ಬಾಕಿಯಾಗುವ ಅಪಾಯವೂ ಎದುರಾಗಿದೆ. ಜತೆಗೆ ಪಾದಚಾರಿಗಳು ಹೊಂಡವನ್ನು ಗಮನಿಸದೇ ತೆರಳಿದರೆ ಕಾಲು ಚರಂಡಿಗೆ ಸಿಲುಕುವ ಅಪಾಯವೂ ಇದೆ.
ಪುತ್ತೂರು ನಗರದಲ್ಲಿ ಇದೇ ರೀತಿ ಹಲವು ಕಡೆಗಳಲ್ಲಿ ಚರಂಡಿಗೆ ಅಳವಡಿಸಿರುವ ಸ್ಲಾéಬ್ ತುಂಡಾಗಿದ್ದು, ಅದನ್ನು ದುರಸ್ತಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಬಂಧಪಟ್ಟ ನಗರಸಭೆಗೆ ಇದನ್ನು ದುರಸ್ತಿ ಪಡಿಸುವುದು ದೊಡ್ಡ ವಿಚಾರವಲ್ಲ. ಆದರೆ ಅಧಿಕಾರಿಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.