Advertisement

ಅಪಾಯ ಆಹ್ವಾನಿಸುತ್ತಿದೆ ಕೋಡಿ ಲೈಟ್‌ಹೌಸ್‌!

10:23 PM May 09, 2019 | Team Udayavani |

ಕುಂದಾಪುರ: ಇದು ಬೇಸಗೆ ರಜಾ ಸಮಯವಾಗಿದ್ದು, ಕಡಲ ತೀರಗಳಿಗೆ ಎಲ್ಲ ಕಡೆಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಇದಕ್ಕೆ ಕೋಡಿ ಸಮುದ್ರ ತಡಿಯೂ ಹೊರತಲ್ಲ. ಇಲ್ಲಿನ ಲೈಟ್‌ಹೌಸ್‌, ಸೀವಾಕ್‌ನ ಆಸ್ವಾದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರೂ ಲೈಟ್‌ಹೌಸ್‌ ಮಾತ್ರ ನಿರ್ವಹಣೆಯಿಲ್ಲದೆ ಅಪಾಯ ಆಹ್ವಾನಿಸುತ್ತಿದೆ.

Advertisement

ಮಕ್ಕಳು ಸಹಿತ ಎಲ್ಲರಿಗೂ ಲೈಟ್‌ಹೌಸ್‌ ಹತ್ತಲು ಬಿಡುತ್ತಿದ್ದು, ಲೈಟ್‌ ಹೌಸ್‌ ಒಳಗಿನಿಂದ ಮೇಲೆರಬೇಕಾದರೆ ಹಲವು ಸುತ್ತು ಹಾಕಿ ಏಣಿಯ ಮೆಟ್ಟಿಲು ಹತ್ತಿ ತೆರಳಬೇಕು. ಆದರೆ ಏಣಿಯ ಮೆಟ್ಟಿಲುಗಳ ಅಂತರ ಹೆಚ್ಚಿರುವುದರಿಂದ ಮಕ್ಕಳು ಕೆಳಗೆ ಬೀಳ ಬಹುದಾದ ಅಪಾಯವಿದೆ. ಆದುದರಿಂದ ಸಿಬಂದಿ ನೇಮಿಸಿ, ಸರಿಯಾಗಿ ನಿರ್ವಹಣೆ ಮಾಡಿ ಸಂಭವನೀಯ ಅನಾಹುತಗಳನ್ನು ತಪ್ಪಿಸಬಹುದೆಂಬುದು ಪ್ರವಾಸಿಗರ ಅನಿಸಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next