ಬ್ಯಾರಿಕೇಡ್ ಭರಾಟೆ
ಉದ್ಯಾವರ ಬಲಾಯಿಪಾದೆ ಜಂಕ್ಷನ್, ಉದ್ಯಾವರ ಹಲೀಮಾ ಸಾಬುj ಸಭಾಭವನ (ಸಭಾಭವನದಲ್ಲಿ ಮದುವೆಯಿದ್ದಾಗ), ಉದ್ಯಾವರ ಜಂಕ್ಷನ್, ಕಟಪಾಡಿ ಜಂಕ್ಷನ್, ಪೊಲಿಪು ಮಸೀದಿ, ಉಚ್ಚಿಲ – ಪಣಿಯೂರು ಡೈವರ್ಷನ್ ಬಳಿ, ಎರ್ಮಾಳು ಡೈವರ್ಷನ್, ಪಡುಬಿದ್ರಿ ಮತ್ತು ಹೆಜಮಾಡಿಯಲ್ಲಿ ರಾ.ಹೆ. 66ರಲ್ಲಿ ವೇಗ ನಿಯಂತ್ರಣಕ್ಕಾಗಿ ಬ್ಯಾರಿಕೇಡ್‌ಗಳನ್ನು ಆಳವಡಿಸಲಾಗಿದೆ.
ಮುರಿದ ಬ್ಯಾರಿಕೇಡ್‌ಗಳಿಂದ ಅಪಘಾತ
ವೇಗವಾಗಿ ಬರುವ ವಾಹನ ಚಾಲಕರಿಗೆ ಬ್ಯಾರಿಕೇಡ್‌ಗಳ ಬಗ್ಗೆ ಸೂಚನೆ ಇಲ್ಲದೆ ಢಿಕ್ಕಿ ಹೊಡೆದು ಜಖಂಗೊಂಡು ನೆಲಕ್ಕುರಿಳಿದೆ. ಪೊಲೀಸರೂ ಕೆಲವೆಡೆ ಅಪಘಾತ ನಡೆದ ಸಂದರ್ಭ ಬ್ಯಾರಿಕೇಡ್‌ಗಳನ್ನು ಹಾಕುತ್ತಾರೆ. ಬಳಿಕ ತೆರವು ಮಾಡುವುದೂ ಇಲ್ಲ. ಬ್ಯಾರಿಕೇಡ್ ಅಪಘಾತಕ್ಕೆ ಬಲಿ ಯಾಗುವವರಲ್ಲಿ ದ್ವಿಚಕ್ರ ವಾಹನ ಸವಾರರು ಮತ್ತು ರಿಕ್ಷಾ ಚಾಲಕರೇ ಹೆಚ್ಚು.
Advertisement
ಅವೈಜ್ಞಾನಿಕ ಕಾಮಗಾರಿ ಸಮಸ್ಯೆ ರಾ.ಹೆ.66ರ ಕಾಮಗಾರಿ ಬಗ್ಗೆ ಆರಂಭ ದಿಂದಲೂ ಅಪಸ್ವರ ಕೇಳಿ ಬಂದಿತ್ತು. ತಂತ್ರಜ್ಞರು, ಸ್ಥಳೀಯರ ವಿರೋಧದ ನಡುವೆ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ಇದರಿಂದಾಗಿಯೇ ಹೆಚ್ಚಿನ ಅಪಘಾತಗಳು ಸಂಭವಿಸುವಂತಾಗಿದೆ. ನೀಲನಕ್ಷೆ ತಯಾರಿಸುವ ಸಂದರ್ಭದಲ್ಲೇ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಂಡಿದ್ದರೇ ಇಷ್ಟೊಂದು ಪ್ರಮಾಣದಲ್ಲಿ ಬ್ಯಾರಿಕೇಡ್ ಹಾಕ ಬೇಕೆಂದಿಲ್ಲ. ಜತೆಗೆ ಅಪಘಾತಗಳ ಪ್ರಮಾಣವನ್ನೂ ತಗ್ಗಿಸಬಹುದಿತ್ತು ಎನ್ನುವ ಅಭಿಪ್ರಾಯವಿದೆ.
ಚುನಾವಣೆ ಹಿನ್ನೆಲೆ, ಠಾಣಾ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ರಚನೆ ಮಾಡಲಾಗಿದ್ದು. ಈ ಚೆಕ್‌ಪೋಸ್ಟ್ ಗಳಲ್ಲಿ ಮತ್ತು ಅನತಿ ದೂರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಿರುವ ಕುರಿತು ಕನಿಷ್ಠ 100 ಮೀ. ದೂರದಲ್ಲಿ ಸೂಚನಾ ಫಲಕ ಅಳವಡಿಸಲು ವಾಹನ ಚಾಲಕರು ಆಗ್ರಹಿಸಿದ್ದಾರೆ. ಪ್ರಾಯೋಜಕತ್ವಕ್ಕೆ ಪೈಪೋಟಿ!
ಅಚ್ಚರಿ ಎಂದರೆ ರಸ್ತೆಯಲ್ಲಿ ಹಾಕುವ ಬ್ಯಾರಿಕೇಡ್‌ಗಳನ್ನು ಪ್ರಾಯೋಜಿಸಲು ದಾನಿಗಳು ತಾ ಮುಂದು ಎಂಬಂತೆ ಬರುತ್ತಿದ್ದಾರೆ. ರಸ್ತೆ ಮೇಲಿನ ಹೆಚ್ಚಿನ ಬ್ಯಾರಿಕೇಡ್‌ಗಳನ್ನು ಸ್ಥಳೀಯ ಉದ್ಯಮಿಗಳು, ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಪ್ರಾಯೋಜಿಸಿ, ಅವುಗಳಲ್ಲಿ ತಮ್ಮ ಜಾಹೀರಾತು ಪ್ರದರ್ಶಿಸುತ್ತಿವೆ. ಇದೇ ಕಾರಣಕ್ಕೆ ಬ್ಯಾರಿಕೇಟ್ ಪ್ರಾಯೋಜಕತ್ವಕ್ಕೆ ಪೈಪೋಟಿ ಇದೆ.
Related Articles
- ಬ್ಯಾರಿಕೇಡ್‌ಗಳಲ್ಲಿ ಸೂಕ್ತ ರೀತಿಯ ರಿಫ್ಲೆಕ್ಟರ್ ಬಳಸದೇ ಇರುವುದು
- ಬೀದಿ ದೀಪ ಇಲ್ಲದಲ್ಲಿ ಬ್ಯಾರಿಕೇಡ್ ಹಾಕಿರುವುದು
- ಚೆಕ್‌ಪೋಸ್ಟ್‌ಗಳ ರಚನೆ
- ಪ್ರವಾಸಿ ವಾಹನ ಚಾಲಕರಿಗೆ, ಘನ ವಾಹನ ಚಾಲಕರಿಗೆ ಗಮನಕ್ಕೆ ಬಾರದ ರೀತಿ ಅಳವಡಿಕೆ
Advertisement
ಸುಗಮ ಸಂಚಾರಕ್ಕೆ ಅಗತ್ಯರಾ.ಹೆ 66ರ ಅವೈಜ್ಞಾನಿಕ ಕಾಮಗಾರಿಯಿಂದ ಸಂಚಾರ ನಿಯಂತ್ರಣಕ್ಕೆ ಬ್ಯಾರಿಕೇಡ್ ಅಳವಡಿಸುವುದು ಅವಶ್ಯ. ಶಾಲೆ, ಚೆಕ್‌ಪೋಸ್ಟ್, ಅತಿ ಜನಸಂದಣಿ, ನಾಲ್ಕು ರಸ್ತೆ ಕೂಡುವ ಜಂಕ್ಷನ್‌ಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ.
– ನಿತ್ಯಾನಂದ ಗೌಡ, ಕಾಪು ಪಿಎಸ್‌ಐ. – ರಾಕೇಶ್ ಕುಂಜೂರು