Advertisement

ದಿಲ್ಲಿಯ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರ ದಂಪತಿಗೆ ಆಹ್ವಾನ

12:04 AM Jul 08, 2023 | Team Udayavani |

ಸಿದ್ದಾಪುರ: ದಿಲ್ಲಿಯಲ್ಲಿ ಆ. 15ರಂದು ನಡೆಯುವ ಸ್ವಾತಂತ್ರೋತ್ಸವದ ಧ್ವಜಾರೋಹಣ ಸಮಾರಂಭಕ್ಕೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ದಾಪುರದ ಕೆಳಪೇಟೆ ಸೂರ ಪೂಜಾರಿ ಮತ್ತು ಗಿರಿಜಾ ಪೂಜಾರಿ ದಂಪತಿಯನ್ನು ಕೇಂದ್ರ ಸರಕಾರದ ಪ್ರಧಾನಮಂತ್ರಿ ಸಚಿವಾಲಯ ಆಮಂತ್ರಿಸಿದೆ.

Advertisement

ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಅಮೃತ ಸರೋವರ ಯೋಜನೆಯಲ್ಲಿ ಸಿದ್ದಾಪುರ ಗ್ರಾಮದ ಬ್ರಹ್ಮಕೆರೆಯನ್ನು 100 ದಿನ ಮಾನವ ಶ್ರಮದ ಮೂಲಕ ಹೂಳೆತ್ತುವ ಕಾರ್ಯವನ್ನು ಇವರು ಮಾಡಿದ್ದರು. ಅಮೃತ ಸರೋವರ ಯೋಜನೆಯ ಮೂಲಕ 100 ದಿನಕ್ಕೂ ಹೆಚ್ಚು ಕೂಲಿ ಕೆಲಸ ಮಾಡಿದ ದಂಪತಿಯನ್ನು ಸ್ವಾತಂತ್ರೋತ್ಸವದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರದಿಂದ ಆಮಂತ್ರಿಸಿದ್ದಾರೆ. ರಾಜ್ಯದ 34 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಿದ್ದು, 6 ದಂಪತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next