ಬೆಂಗಳೂರು: ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯ ಮೂರನೇ ದಿನ ದಸ್ಸಾ ಸಿಸ್ಟಮ್ಸ್, ಅರ್ಸೆಲಾರ್ ಮಿತ್ತಲ್, ಭಾರತ್ ಫೋರ್ಜ್, ಲಾಕಿಡ್ ಮಾರ್ಟಿನ್, ಲುಲು ಸಮೂಹ ಹಾಗೂ ನೋವೋ ನಾರ್ಡಿಸ್ಕ್ ಸೇರಿದಂತೆ ಹಲವು ಕಂಪನಿಗಳಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಸಿಎಂ ಯಡಿಯೂರಪ್ಪ ಆಹ್ವಾನ ನೀಡಿದರು.
ತಮ್ಮನ್ನು ಭೇಟಿಯಾದ ಹೂಡಿಕೆದಾರರೊಂದಿಗೆ ಚರ್ಚಿಸಿದ ಯಡಿಯೂರಪ್ಪ, ಕರ್ನಾಟಕ ಸರ್ಕಾರ ಸುಗಮ ಕೈಗಾರಿಕೋದ್ಯಮಕ್ಕೆ ಅಡೆತಡೆಗಳಿದ್ದರೆ ಅವುಗಳನ್ನು ನಿವಾರಿಸಲಿದೆ. ಅಧಿಕಾರಿಗಳು ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ತೋರಿ ಹೂಡಿಕೆಗೆ ಸೂಕ್ತ ನೆರವು ನೀಡಲಿದ್ದಾರೆ ಎಂದು ಹೇಳಿದರು. ಇದಕ್ಕೆ ದಸ್ಸಾ ಸಿಸ್ಟಮ್ಸ್ 3ಡಿಎಸ್ ಸಂಸ್ಥೆ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಒಂದು ದಶಲಕ್ಷ ಯುರೋ ಹೂಡಿಕೆ: ಕಂಪನಿಯ ಉಪಾಧ್ಯಕ್ಷ ಫ್ಲಾರೆನ್ಸ್ ವರ್ಜುಲೆನ್, ಬೆಂಗಳೂರು ಸೇರಿದಂತೆ ಎರಡು ಕಡೆ ಉತ್ಕೃಷ್ಠತಾ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿ ಕೇಂದ್ರದಲ್ಲಿ ತಲಾ 2,000 ಯುವಕರಿಗೆ ತರಬೇತಿ ನೀಡಿ ದೊಡ್ಡ ಕಂಪನಿ ಗಳಲ್ಲಿ ಕೌಶಲ್ಯಪೂರ್ಣ ಉದ್ಯೋಗ ಪಡೆಯಲು ಅರ್ಹ ರ ನ್ನಾಗಿ ರೂಪಿಸಲಾಗುವುದು. ಸ್ಮಾರ್ಟ್‌ಸಿಟಿ ಯೋಜನೆಗ ಳಲ್ಲೂ ಯುವಜನತೆಗೆ ತರಬೇತಿ ಕೊಡಲು ಆಸಕ್ತಿ ಇದೆ. ಎಂಜಿನಿಯರಿಂಗ್ ಪದವೀಧರರಿಗೂ ತರಬೇತಿ ನೀಡ ಲಾ ಗುವುದು. ಈ ಕೇಂದ್ರಗಳ ಸ್ಥಾಪನೆಗೆ ಒಂದು ದಶಲಕ್ಷ ಯುರೋ ಹೂಡಿಕೆ ಮಾಡಲಾಗುವುದು ಎಂದರು.
ಲಕ್ಷ್ಮೀ ಮಿತ್ತಲ್ ಭೇಟಿ: ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಉದ್ಯಮಿ ಲಕ್ಷ್ಮೀ ಎನ್. ಮಿತ್ತಲ್ ಅವರು, ತಮ್ಮ ಕಂಪನಿ ಈಗಾಗಲೇ ಬಳ್ಳಾರಿ ಯಲ್ಲಿ 3,000 ಎಕರೆ ಭೂಮಿ ಹೊಂದಿದೆ. 2010ರಲ್ಲಿ ತಾವು ಮುಖ್ಯಮಂತ್ರಿಗಳಾಗಿದ್ದಾಗಲೇ ಉಕ್ಕು ತಯಾರಿ ಕಾ ಘಟಕ ಸ್ಥಾಪನೆಗೆ ಅನುಮತಿ ನೀಡಲಾಗಿತ್ತು. ಕಾರಣಾಂತರಗಳಿಂದ ಕೆಲ ಅಡಚಣೆಗಳು ಉಂಟಾ ಗಿದ್ದು ಅವುಗಳನ್ನು ನಿವಾರಿಸಬೇಕು ಎಂದು ಮನವಿ ಮಾಡಿದರಲ್ಲ ದೇ ಸೌರ ವಿದ್ಯುತ್ ಸ್ಥಾವರಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದರು.