Advertisement

ಅಂತರಿಕ್ಷ, ರಕ್ಷಣಾ ವಲಯದಲ್ಲಿ ಹೂಡಿಕೆಗೆ ಆಹ್ವಾನ

11:05 AM Oct 18, 2021 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ವಿಪುಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಈ ಕ್ಷೇತ್ರದಲ್ಲಿ ಹೆಚ್ಚಿನ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಮಾಡಲು ಉದ್ದಿಮೆದಾರರಿಗೆ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮನವಿ ಮಾಡಿದ್ದಾರೆ.

Advertisement

ಭಾನುವಾರ ದುಬೈನಲ್ಲಿ ವಿಶ್ವ ದುಬೈಎಕ್ಸ್‌ ಪೋ – 2020ದಲ್ಲಿ ಪಾಲ್ಗೊಂಡ ಕರ್ನಾಟಕದಲ್ಲಿ ಅಂತರಿಕ್ಷೆ, ರಕ್ಷಣೆ ಹಾಗೂ ವೈಮಾನಿಕ ವಲಯದಲ್ಲಿರುವ ಅವಕಾಶಗಳು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈ ವಲಯದಲ್ಲಿ ರಾಜ್ಯವು ಸಾಧಿಸಿರುವ ‘ ಪ್ರಗತಿಯ ಚಿತ್ರಣವನ್ನು’ ತೆರೆದಿಟ್ಟರು.

ಈ ಕ್ಷೇತ್ರಗಳಲ್ಲಿ ರಾಜ್ಯವು ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ಕರ್ನಾಟಕವು ಭಾರತದ ಅತಿದೊಡ್ಡ ಅಂತರಿಕ್ಷ ಕ್ಲಸ್ಟರ್‌ ಆಗಿರುವುದಲ್ಲದೆ, ಭಾರತದಲ್ಲಿ ಬೃಹತ್‌ ಎಲೆಕ್ಟ್ರಿಕಲ್‌ ಯಂತ್ರಗಳ 2 ನೇ ಅತಿದೊಡ್ಡ ಉತ್ಪಾದನಾ ರಾಜ್ಯವಾಗಿದೆ ಎಂದು ಹೇಳಿದರು. ಭಾರತದಲ್ಲಿ ಸುಮಾರು ಶೇ.60 ಯಂತ್ರೋ ಪಕರಣಗಳನ್ನು ಉತ್ಪಾದಿಸಲಾಗುತ್ತದೆ.

ನಮ್ಮ ರಾಜ್ಯವು ದೇಶದ 2ನೇ ಅತಿದೊಡ್ಡ ಚಿಪ್‌ ವಿನ್ಯಾಸ ಕೇಂದ್ರವಾಗಿದೆ. ಉದ್ಯಮಕ್ಕೆ ಸಿದ್ಧವಾಗಿ ರುವ ಮಾನವ ಸಂಪನ್ಮೂಲವನ್ನು ಒದಗಿಸಲು ನಾವು ಡಸಾಲ್ಟ್ ಸಿಸ್ಟಮ್ಸ್ ಸಹಭಾಗಿತ್ವದಲ್ಲಿ ಸೆಂಟರ್‌ ಆಫ್ ಎಕ್ಸಲೆನ್ಸ್‌ ಅನ್ನು ಸ್ಥಾಪಿಸಿದ್ದೇವೆ ಎಂದು ಮಾಹಿತಿ ನೀಡಿದರು. ಅಂತರಿಕ್ಷ ಮತ್ತು ರಕ್ಷಣಾ ವಲಯಕ್ಕೆ ಸಹಾಯಕವಾಗುತ್ತಿರುವ ಸಣ್ಣ ಕೈಗಾರಿಕೆಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು, ಈ ಕ್ಷೇತ್ರಗಳನ್ನು ಮುನ್ನಡೆಸಲು ರಾಜ್ಯ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ;- ಕಾಪು : ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲೇ ಮಲಗಿದ ಭತ್ತದ ಪೈರುಗಳು ; ಅಪಾರ ಬೆಳೆ ಹಾನಿ

Advertisement

ಕರ್ನಾಟಕದಲ್ಲಿ ಸುಮಾರು 2000 ಎಸ್‌ ಎಂಇಗಳ ಪ್ರಬಲ ನೆಲೆಯನ್ನು ಹೊಂದಿದೆ, ಇದು ಅಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿರುವ ಉಪ- ಗುತ್ತಿಗೆ ಕೆಲಸಗಳನ್ನು ನಿರ್ವಹಿಸುತ್ತದೆ. ಈ ವಲಯಕ್ಕೆ ಸರ್ಕಾರ ಎಲ್ಲಾ ರೀತಿ ಯಲ್ಲೂ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟ ಪರಿಣಾಮ, ರಾಜ್ಯದಲ್ಲಿ ತಮ್ಮ ನೆಲೆ ಯನ್ನು ಸ್ಥಾಪಿಸುವುದರ ಜೊತೆಗೆ ವಿಸ್ತರಣೆ ಯನ್ನು ಮತ್ತಷ್ಟು ಹೆಚ್ಚಿಸಲು ಅನುಕೂಲವಾಗಿದೆ.

ಪರಿಣಾಮ ಹೆಚ್ಚು ಉದ್ಯಮೆದಾರರಿಗೆ ನಮ್ಮ ರಾಜ್ಯದ ಕಡೆ ಆಕರ್ಷಿತವಾಗಿದೆ ಎಂದು ನಿರಾಣಿ ಪ್ರಶಂಸಿದರು. ಭಾರತೀಯ ಸ್ಟಾರ್ಟ್‌ ಅಪ್‌ಗ್ಳು ಅನುಭವಗಳಿಂದ ಕಲಿಯುತ್ತಾರೆ. ಭವಿಷ್ಯದಲ್ಲಿ ಅವರ ನಿರ್ಧಾರಗಳಿಗೆ ಇದು ಮಾರ್ಗದರ್ಶನ ನೀಡಲು ಉತ್ತಮ ವೇದಿಕೆಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ದುಬೈ ಎಕ್ಸ್‌ಪೊ 2020 ಅನ್ನು ವಿವಿಧ ರಾಜ್ಯಗಳು, ಉದ್ದಿಮೆದಾರರು ಮತ್ತು ಇತರ ಪಾಲುದಾರರನ್ನು ಭೇಟಿಯಾಗಿ ಸಂವಾದಿಸಲು ಮತ್ತು ಸಹಯೋಗಿಸಲು ವೇದಿಕೆ ಒದಗಿಸಿದ್ದ ಕ್ಕಾಗಿ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next