Advertisement

ಬೀಜ ಮಾರಾಟ ಪರವಾನಗಿ ಪಡೆಯಲು ಅರ್ಜಿ ಆಹ್ವಾನ

03:51 PM May 29, 2021 | Team Udayavani |

ಬಳ್ಳಾರಿ: ತೋಟಗಾರಿಕೆ ಇಲಾಖೆಯಿಂದ ತೋಟಗಾರಿಕೆ ಬೀಜಗಳ ಮಾರಾಟ ಪರವಾನಿಗೆ ಪಡೆಯಲು ತೋಟಗಾರಿಕೆ ಬೀಜಗಳ ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ತೋಟಗಾರಿಕೆ ಬೆಳೆಗಳ (ಹೂವು, ಹಣ್ಣು ಮತ್ತು ತರಕಾರಿ) ಉತ್ಪಾದನೆಯಲ್ಲಿ ಉಪಯೋಗಿಸಲಾಗುವ ಬೀಜದ ಗುಣಮಟ್ಟ ಬಹಳ ಮುಖ್ಯವಾಗಿರುವುದರಿಂದ, ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಬೀಜಗಳನ್ನು ಮಾರಾಟ ಮಾಡುತ್ತಿರುವ ವಿತರಕರು (ಡೀಲರ್ಸ್‌) ತರಕಾರಿ ಬೀಜ ಮಾರಾಟ ಪರವಾನಗಿಯನ್ನು ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿದ್ದು, ವಿತರಕರು (ಡೀಲರ್ಸ್‌) ಕೂಡಲೇ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಕಚೇರಿಗಳಿಗೆ ಭೇಟಿ ನೀಡಿ, ಅರ್ಜಿಯನ್ನು ನೋಂದಣಿ ಮಾಡಿ ಮಾರಾಟ ಪರವಾನಗಿ ಪಡೆಯಬಹುದು. ಜಿಲ್ಲೆಯಲ್ಲಿ ಈಗಾಗಲೇ ಕಂಪನಿಯವರು ನಿಗದಿಪಡಿಸಿರುವ ದರಗಳಿಗಿಂತ ಹೆಚ್ಚಿನ ಬೆಲೆಗೆ ತರಕಾರಿ ಬೀಜ ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ರೈತರು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ವಿತರಕರ (ಡೀಲರ್ಸ್‌) ಬಗ್ಗೆ ದೂರು ನೀಡಿದ್ದಲಿ ಅಂತಹ ವಿತರಕರ (ಡೀಲರ್ಸ್‌) ಪರವಾನಗಿಯನ್ನು ರದ್ದುಪಡಿಸಿ, ಬೀಜ ನಿಯಂತ್ರಣ ಕಾಯ್ದೆ-1983 ಅನ್ವಯ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ಚಟುವಟಿಕೆಗಳು ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿದ್ದು, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕೆಂಪು ಮೆಣಸಿನಕಾಯಿ ಬೆಳೆಯ ಸಿಜೆಂಟಾ ಕಂಪನಿಯ ತಳಿಗಳಾದ 5531, 2043 ಬಿತ್ತನೆ ಬೀಜಗಳಿಗೆ ಪ್ರಸ್ತುತ ಉತ್ತಮ ಬೇಡಿಕೆಯಿದೆ. ವಿವಿಧ ಕಂಪನಿಯ ತಳಿಗಳು ಸಹ ಉತ್ತಮ ಇಳುವರಿ,ಗುಣಮಟ್ಟ ಹಾಗೂ ಉತ್ತಮ ಮಾರುಕಟ್ಟೆ ಮೌಲ್ಯವನ್ನು ಹೊಂದಿರುವುದರಿಂದ ರೈತರು ಆದ್ಯತೆ ಮೇರೆಗೆ ಬಿತ್ತನೆಗೆ ಉಪಯೋಗಿಸಬಹುದಾಗಿದೆ. ರೈತರಿಗೆ ಉತ್ತಮ ಬಿತ್ತನೆ ಬೀಜ ಒದಗಿಸುವ ಉದ್ದೇಶಕ್ಕಾಗಿ ಪ್ರಮಾಣಕ್ಕೆ ಅನುಗುಣವಾಗಿ ಬೀಜಗಳನ್ನು ನೀಡುತ್ತಿದ್ದು, ರೈತರು ಬಿಲ್ಲು ಸಮೇತ ಬೀಜ ಖರೀದಿಸಬೇಕು. ಈ ಕ್ರಮವನ್ನು ಅನುಸರಿಸದೇ ಖರೀದಿಸಿದಲ್ಲಿ ಮುಂದಿನ ದಿನಗಳಲ್ಲಿ ಯಾವುದಾದರೂ ಬೆಳೆ ನಷ್ಟ ಹಾಗೂ ಕಳಪೆ ಗುಣಮಟ್ಟದ ಬೀಜದ ಕುರಿತು ವರದಿಯಾದರೆ ರೈತರ ಪರಿಹಾರ ಧನ ಹಾಗೂ ಇತರೇ ಸೌಲಭ್ಯಗಳನ್ನು ನಿಯಮಾನುಸಾರ ಒದಗಿಸಲು ಕಷ್ಟವಾಗುತ್ತದೆ. ಹಾಗಾಗಿ ರೈತರು ಬಿಲ್ಲು ಸಮೇತ ಬೀಜಗಳನ್ನು ಖರೀದಿಸಿ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next