Advertisement

Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ

11:14 PM Nov 27, 2024 | Team Udayavani |

ಮಂಗಳೂರು: ಫೇಸ್‌ಬುಕ್‌ ಮೂಲಕ ಸಂಪರ್ಕಿಸಿದ ಅಪರಿಚಿತ ಮಹಿಳೆಯೋರ್ವರು ಹೂಡಿಕೆಯ ಹೆಸರಿನಲ್ಲಿ ವ್ಯಕ್ತಿಯೋರ್ವರಿಂದ 56.64 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಅದಿತಿ ಕಪೂರ್‌ ಹೆಸರಿನ ಮಹಿಳೆಯೋರ್ವಳಿಂದ ದೂರುದಾರರ ಫೇಸ್‌ಬುಕ್‌ ಖಾತೆಗೆ ಜುಲೈಯಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ದೂರುದಾರರು ಅದಕ್ಕೆ ಅಕ್ಸೆಪ್ಟ್ ನೀಡಿ ಮೆಸೆಂಜರ್‌ ಮೂಲಕ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಬಳಿಕ ಮಹಿಳೆ ಮೆಸೆಂಜರ್‌ನಲ್ಲಿ +1 (623) 273-9277 ನಂಬರ್‌ ಕಳುಹಿಸಿ ಇದು ಪರ್ಸನಲ್‌ ನಂಬರ್‌. ಇದರಲ್ಲಿ ವಾಟ್ಸ್‌ಆ್ಯಪ್‌ ಇದೆ ಎಂದು ತಿಳಿಸಿದ್ದಳು.

ಅನಂತರ ದೂರುದಾರರು ವಾಟ್ಸಪ್‌ನಲ್ಲಿ ಆಕೆಯೊಂದಿಗೆ ಚಾಟ್‌ ಮಾಡಿಕೊಂಡಿದ್ದರು. ಕೆಲವು ಸಮಯದ ಅನಂತರ ಮಹಿಳೆ ದೂರುದಾರರಿಗೆ Century Global Gold Capital” ಎಂಬ ಇನ್‌ವೆಸ್ಟ್‌ಮೆಂಟ್‌ ಪ್ಲ್ರಾನ್‌ ಇದೆ. ಅದರಲ್ಲಿ ನಾನು ಕೂಡ ಹೂಡಿಕೆ ಮಾಡಿದ್ದೇನೆ. ಒಳ್ಳೆಯ ರಿಟರ್ನ್ಸ್ ಬರುತ್ತದೆ. ಹೂಡಿಕೆ ಮಾಡಿದ ಹಣವನ್ನು ಕೆಲವೇ ದಿನಗಳಲ್ಲಿ ಮೂರು ಪಟ್ಟು ಹೆಚ್ಚು ಮಾಡಿಸಿಕೊಡುತ್ತೇನೆ ಎಂದು ನಂಬಿಸಿದಳು. ಅನಂತರ ಲಿಂಕ್‌ ಕಳುಹಿಸಿ ರಿಜಿಸ್ಟ್ರೇಷನ್‌ ಮಾಡಲು ತಿಳಿಸಿದರು. ಅದರಂತೆ ದೂರುದಾರರು ಹೆಚ್ಚು ಲಾಭ ಪಡೆಯುವ ಆಸೆಯಿಂದ ನೋಂದಣಿ ಮಾಡಿಸಿದ್ದರು. ಬಳಿಕ ಅದಕ್ಕೆ ಹಣ ವರ್ಗಾವಣೆ ಮಾಡುವಂತೆ ಮಹಿಳೆ ತಿಳಿಸಿದ್ದು ಅದರಂತೆ ದೂರುದಾರರು ಮಹಿಳೆ ನೀಡಿದ ಬೇರೆ ಬೇರೆ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 56,64,000 ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಬಳಿತ ವಂಚನೆ ಆಗಿರುವುದು ತಿಳಿದು ನಗರದ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next