Advertisement

Fraud ಷೇರುಗಳಲ್ಲಿ ಹೂಡಿಕೆ ಆಮಿಷ: 19.50 ಲ.ರೂ. ವಂಚನೆ

08:11 PM Jun 05, 2024 | Team Udayavani |

ಮಂಗಳೂರು: ಷೇರುಗಳಲ್ಲಿ ಹೂಡಿಕೆ ಮಾಡುವುದಾಗಿ ಹೇಳಿ ವ್ಯಕ್ತಿಯೋರ್ವರಿಗೆ 19.50 ಲ.ರೂ. ವಂಚಿಸಿದ ಘಟನೆ ಸಂಭವಿಸಿದ್ದು ಮಂಗಳೂರಿನ ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಆರೋಪಿ ಆಕಾಶ್‌ ವರ್ನಭಾನಿ ಕಳುಹಿಸಿದ ಲಿಂಕ್‌ನ ಮೂಲಕ ವ್ಯಕ್ತಿಯೋರ್ವರು “568 INDIAN SOCK LEADE’ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಕಳೆದ ಎ. 7ರಂದು ಸೇರ್ಪಡೆಗೊಂಡಿದ್ದರು. ಅನಂತರ ಆ ಗ್ರೂಪ್‌ನಲ್ಲಿ ಸಿಂಗ್‌ ಎಂಬಾತ ಹಣವನ್ನು ಕಂಪೆನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ವಿಚಾರ ತಿಳಿಸಿದ. ಅದರಂತೆ ದೂರುದಾರರು ಎ. 29ರಂದು 1 ಲ.ರೂ. ವರ್ಗಾವಣೆ ಮಾಡಿದ್ದರು. ಮತ್ತೆ ಮೇ 3ರಂದು 3 ಲ.ರೂ. ಮೊತ್ತ ವರ್ಗಾಯಿಸಿದರು. ಮೇ 10ರಂದು 1.50 ಲ.ರೂ., ಮೇ 17ರಂದು 4 ಲ.ರೂ. ಹೀಗೆ ಹಂತ ಹಂತವಾಗಿ 19.50 ಲ.ರೂ.ಗಳನ್ನು ವರ್ಗಾಯಿಸಿದರು. ಅನಂತರ ಹೂಡಿಕೆ ಮೊತ್ತವನ್ನು ವಾಪಸ್‌ ನೀಡುವಂತೆ ಕೇಳಿದಾಗ ಆರೋಪಿ ಅನೂಜ್‌ ಗುಪ್ತಾ ಹೆಚ್ಚುವರಿಯಾಗಿ 7.88 ಲ.ರೂ.ಗಳನ್ನು ಪಾವತಿಸುವಂತೆ ಸೂಚಿಸಿದ. ಆಗ ತಾನು ಮೋಸ ಹೋಗಿರುವುದು ದೂರುದಾರರಿರಿಗೆ ಗೊತ್ತಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next