Advertisement

ಎಸ್‌ಐಟಿಯಿಂದಲೇ ತನಿಖೆ: ಸಿಎಂ 

06:35 AM Sep 13, 2017 | |

ಬಳ್ಳಾರಿ: “ರಾಜ್ಯ ಪೊಲೀಸರ ವಿಶೇಷ ತನಿಖಾ ದಳವೇ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆನ್ನುವ ನಿಯಮವಿಲ್ಲ. ಸಿಬಿಐಗೆ ವಹಿಸುವಂತೆ ಯಾರಿಂದಲೂ ಬೇಡಿಕೆಯೂ ಬಂದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,”ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ್‌ ಹತ್ಯೆ ನಡೆದು ಎರಡೂವರೆ ವರ್ಷಗಳಾದವು. ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಆದರೆ ಈವರೆಗೂ ಅರೋಪಿಗಳ ಪತ್ತೆಯಾಗಿಲ್ಲ. ಯಾವುದೇ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಿದ ಕೂಡಲೇ ಆರೋಪಿಗಳು ಪತ್ತೆಯಾಗುವು ದಿಲ್ಲ’ ಎಂದು ಎಸ್‌ಐಟಿ ರಚನೆ ಕುರಿತು ಸಮರ್ಥಿಸಿಕೊಂಡರು.

ಗೌರಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವುದೇ ಇಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ಗೌರಿ ಅವರ ಕುಟುಂಬದ
ಸದಸ್ಯರು ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿಲ್ಲ. ಈಗಾಗಲೇ ತನಿಖೆ ಸಾಕಷ್ಟು ಪ್ರಗತಿಯಲ್ಲಿದೆ. ಸಂಶೋಧಕ ಎಂ.ಎಂ. ಕಲುಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಶೀಘ್ರವೇ ಆರೋಪಿಗಳ ಪತ್ತೆ ಹಚ್ಚಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next