Advertisement

ಬಿಜೆಪಿಯಿಂದಲೇ ಅವ್ಯವಹಾರ ತನಿಖೆ

01:10 AM Feb 14, 2019 | Team Udayavani |

ವಿಧಾನಪರಿಷತ್‌: ಶುದ್ಧ  ಕುಡಿಯುವ ನೀರಿನ ಘಟಕಗಳ ನಿರ್ಮಾಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಸ್ವತಃ ಬಿಜೆಪಿ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧರಿಸಿದೆ. ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ಅವ್ಯವಹಾರದ ತನಿಖೆಗೆ ಸದನ ಸಮಿತಿ ರಚನೆಗೆ ಒತ್ತಾಯಿಸಿ ಬಾವಿಗಿಳಿದು ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ಮುಂದು ವರಿಸಿದರು. ಆದರೆ, ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ  ಸಚಿವರು ಮಂಗಳವಾರವೇ ಸ್ಪಷ್ಟಪಡಿ ಸಿದ್ದಾರೆ. “ನಿಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕು ಎಂದು ಬಯಸುವುದು ತಪ್ಪು. ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಬೇಕು’ ಎಂದು ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಹೇಳಿದರು.

Advertisement

ಆಗ ಪ್ರತಿಕ್ರಿಯಿಸಿದ ಕೋಟ ಶ್ರೀನಿವಾಸ ಪೂಜಾರಿ, “ಸುಮಾರು 1,800 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಅಂದಾಜು 18 ಸಾವಿರ ಘಟಕಗಳ ಪೈಕಿ ಅರ್ಧ ಕ್ಕರ್ಧ ಕಾರ್ಯನಿರ್ವಹಿಸುತ್ತಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಆದರೆ, ತನಿಖೆ ನಡೆಸಲು ಸರ್ಕಾರಕ್ಕೆ ಇಷ್ಟವಿಲ್ಲ. ಹಾಗಂತ, ನಾವು ಇದನ್ನು ಕೈಬಿಡುವುದಿಲ್ಲ. ಸಾರ್ವಜನಿಕರ ಹಿತಾಸಕ್ತಿಯಿಂದ ಸ್ವತಃ ಬಿಜೆಪಿಯಿಂದಲೇ ಹಳ್ಳಿ-ಹಳ್ಳಿಗೆ ತೆರಳಿ ತನಿಖೆ ನಡೆಸಿ, ವರದಿಯನ್ನು ಸರ್ಕಾರದ ಮುಖಕ್ಕೆ ಹಿಡಿಯುತ್ತೇವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next