Advertisement
ಮಂಗಳವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 238 ಸರಕಾರಿ ಶಾಲೆಗಳಿದ್ದು, ಅಲ್ಲಿ ಬಿಸಿಯೂಟ ಯೋಜನೆಯಲ್ಲಿ ಖರ್ಚಾಗುವ ಅಕ್ಕಿ ಎಷ್ಟು? ಉಳಿಕೆ ಅಕ್ಕಿ, ಇತರ ಆಹಾರ ಪದಾರ್ಥಗಳನ್ನು ಏನು ಮಾಡ ಲಾಗುತ್ತದೆ? ಎಂದು ತನಿಖೆ ನಡೆಸು ವಂತೆ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಅಕ್ಷರ ದಾಸೋಹ ಉಪ ನಿರ್ದೇಶಕರ ಕಚೇರಿ ಅಧಿಕಾರಿಗಳಿಗೆ ಸೂಚಿಸಿದರು.
Related Articles
ಕೆಎಸ್‌ಆರ್‌ಟಿ ಬಸ್ಸುಗಳು ಖಾಲಿ ಇದ್ದರೂ ವಿದ್ಯಾರ್ಥಿಗಳು ನೇತಾಡಿಕೊಂಡು ಹೋಗುತ್ತಾರೆ. ಈ ಕುರಿತು ಏನು ಕ್ರಮ ಎಂದು ತಾ.ಪಂ. ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಅಧಿಕಾರಿ, ಪೊಲೀಸ್ ಇಲಾಖೆ ಹಾಗೂ ಆರ್‌ಟಿಒ ಅಧಿಕಾರಿಗಳನ್ನು ಪ್ರಶ್ನಿಸಿದರು. ತಾವು ಸರಕಾರಿ ಬಸ್ಸುಗಳೆಂದು ಹಾಗೇ ಬಿಟ್ಟಿದ್ದೇವೆ. ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರೆ, ನಾವು ನಿರ್ವಾಹಕರಿಗೆ ಸ್ಪಷ್ಟ ಸೂಚನೆ ನೀಡುತ್ತೇವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಭರವಸೆ ನೀಡಿದರು.
Advertisement
ಕುಂಬ್ರದಲ್ಲಿ ಸ್ಟೇಜ್ ಇಲ್ಲಕುಂಬ್ರದಲ್ಲಿ ವೇಗದೂತ ಬಸ್ಸುಗಳನ್ನು ನಿಲುಗಡೆ ಮಾಡುವಂತೆ 2003ರಲ್ಲಿಯೇ ಆದೇಶವಾಗಿದ್ದರೂ, ಈಗಲೂ ಅಲ್ಲಿ ವೇಗದೂತ ಬಸ್ಸುಗಳು ನಿಲ್ಲುತ್ತಿಲ್ಲ ಯಾಕೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷರು ಕೆಎಸ್‌ಆರ್‌ಟಿಸಿ ಅಧಿಕಾರಿಯನ್ನು ಪ್ರಶ್ನಿಸಿದರು. ಪುತ್ತೂರು ಹಾಗೂ ಮಂಗಳೂರು ವಿಭಾಗದ ಬಸ್ಸುಗಳು ಅಲ್ಲಿ ನಿಲ್ಲುತ್ತವೆ. ಆದರೆ ಸ್ಟೇಜ್ ಇಲ್ಲ ಎನ್ನುವ ಕಾರಣಕ್ಕೆ ಮೈಸೂರು ವಿಭಾಗದ ಬಸ್ಸುಗಳು ನಿಲ್ಲುತ್ತಿಲ್ಲ. ಈ ವಿಚಾರವನ್ನು ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಸಭೆಗೆ ತಿಳಿಸಿದರು. ಕಕ್ಕೂರು ಕೊಲೆ: ಮಾಹಿತಿ ಇಲ್ಲ
2012ರ ಜೂನ್ ತಿಂಗಳಲ್ಲಿ ಬೆಟ್ಟಂಪಾಡಿಯ ಕಕ್ಕೂರಿನಲ್ಲಿ ಒಂದೇ ಮನೆಯ ನಾಲ್ವರ ಹತ್ಯೆ ನಡೆಸಿದ್ದು, ಮನೆಯ ಯಜಮಾನ ವೆಂಕಟರಮಣ ಭಟ್ಟರು ನಾಪತ್ತೆಯಾಗಿದ್ದರು. ಕೆಲ ಸಮಯದ ಬಳಿಕ ಅಲ್ಲಿ ಅಸ್ಥಿಪಂಜರ ಲಭ್ಯವಾಗಿದ್ದು, ಅದು ವೆಂಕಟರಮಣ ಭಟ್ಟರದು ಎಂದು ಹೇಳಲಾಗಿದ್ದರೂ, ತನಿಖೆಯಲ್ಲಿ ಅದು ಅವರದ್ದಲ್ಲ ಎಂದು ಸಾಬೀತಾಗಿತ್ತು. ಪ್ರಸ್ತುತ ಈ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ತಾ.ಪಂ. ಅಧ್ಯಕ್ಷರು ಪ್ರಶ್ನಿಸಿದರು. ಈ ಕುರಿತು ತಮ್ಮಲ್ಲಿ ಸದ್ಯಕ್ಕೆ ಮಾಹಿತಿಯಿಲ್ಲ. ತಿಳಿದುಕೊಂಡು ಹೇಳುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದರು. ನಿಡ್ಪಳ್ಳಿ ದೇವಸ್ಥಾನದ ವಠಾರದಲ್ಲಿ ಅಂಬೇಡ್ಕರ್ ಭವನಕ್ಕೆ ಮೀಸಲಿಟ್ಟ ಜಮೀನಿನಲ್ಲಿ ಅರಣ್ಯ ಇಲಾಖೆ ಗಿಡ ನೆಟ್ಟಿದೆ ಎನ್ನುವ ದೂರು ಬಂದಿದ್ದು, ಈ ಕುರಿತು ಪರಿಶೀಲಿಸುವಂತೆ ಅಧ್ಯಕ್ಷರು ಅರಣ್ಯ ಇಲಾಖೆ ಅಧಿಕಾರಿಗೆ ತಿಳಿಸಿದರು. ಉಪ್ಪಿನಂಗಡಿ ಹಾಸ್ಟೆಲ್ ಕಟ್ಟಡದ ಕುರಿತು ಮಾಹಿತಿ ಕೇಳಿದಾಗ, ಬೇರೆ ಕಟ್ಟಡವನ್ನು ನೋಡಲಾಗಿದ್ದು ಮುಂದೆ ಎಲ್ಲರ ಅನುಮತಿ ಪಡೆದು ಸ್ಥಳಾಂತರಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳಲ್ಲಿ ಪ.ಜಾತಿ ವಿದ್ಯಾರ್ಥಿಗಳ ಸೀಟು ಭರ್ತಿಯಾಗುತ್ತಿಲ್ಲ ಎಂದು ಅಧಿಕಾರಿ ಸಭೆಯ ಗಮನಕ್ಕೆ ತಂದರು. ತಾಲೂಕಿನಲ್ಲಿ 23 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಕಡಬ ಆಸ್ಪತ್ರೆಗೆ ಮಂಗಳೂರಿನ ಖಾಸಗಿ ವೈದ್ಯ ಕಾಲೇಜುಗಳಿಂದ ವೈದ್ಯರು ಆಗಮಿಸಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.