Advertisement

Jaljeevan Mission: ಜಲಜೀವನ್‌ ಮಿಷನ್‌ನಲ್ಲಿ ಅವ್ಯವಹಾರ- ಚೆನ್ನೈ ಮೂಲದ ಸಂಸ್ಥೆಯಿಂದ ತನಿಖೆ

11:33 PM Sep 05, 2023 | Team Udayavani |

ಬೆಂಗಳೂರು: ಕೇಂದ್ರ ಸರಕಾರದ ಜಲ ಜೀವನ್‌ ಮಿಷನ್‌ ಯೋಜನೆಯಡಿ ರಾಜ್ಯದ ವಿವಿಧೆಡೆ ಅಕ್ರಮ ನಡೆದಿರುವ ದೂರುಗಳಿದ್ದು, ಈ ಹಿನ್ನೆಲೆಯಲ್ಲಿ 8.14 ಕೋಟಿ ರೂ. ವೆಚ್ಚದ ಇಲಾಖಾ ಅನುಮೋದನೆಯಲ್ಲಿ ಚೆನ್ನೈನ ಬ್ಯೂರೋ ವೆರೈಟಾಸ್‌ ಪ್ರೈ.ಲಿ. ಸಂಸ್ಥೆ ಮೂಲಕ ಮೂರನೇ ವ್ಯಕ್ತಿ ತಪಾಸಣೆ ನಡೆಸಲು ರಾಜ್ಯ ಸರಕಾರ ಆದೇಶಿಸಿದೆ.

Advertisement

ಸುಮಾರು 10,380 ಕೋಟಿ ರೂ. ಖರ್ಚು ಮಾಡಿ 69.33 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ನಲ್ಲಿ ಸಂಪರ್ಕ ಒದಗಿಸಲಾಗಿದೆ. ಇದಕ್ಕಾಗಿ ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರದ 33,248 ಕೋಟಿ ರೂ., ರಾಜ್ಯದಿಂದ 40,186 ಕೋಟಿ ರೂ. ಸೇರಿ ಒಟ್ಟು 73,4334 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಈ ಹಿಂದೆ ನಡೆದಿರುವ ಕಾಮಗಾರಿಗಳಲ್ಲಿ ಕಳಪೆ ಗುಣಮಟ್ಟದ ಕೊಳವೆ ಮಾರ್ಗ ಅಳವಡಿಸಿರುವುದು, ಸುಸ್ಥಿರ ಜಲಮೂಲಗಳನ್ನು ಖಾತ್ರಿ ಮಾಡಿಕೊಳ್ಳದೆ ನಳ್ಳಿ ಸಂಪರ್ಕ ಒದಗಿಸಿರುವುದರಿಂದ ಮೂಲ ಉದ್ದೇಶಕ್ಕೆ ಹಿನ್ನಡೆ ಆಗಿದೆ ಎಂಬ ಆರೋಪಗಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್‌ ಇಲಾಖೆ ಪ್ರಗತಿ ಪರಿಶೀಲನ ಸಭೆ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆ ಅವರೇ ಸಿಎಂ ಗಮನ ಸೆಳೆದಿದ್ದರು. ಅಲ್ಲದೆ, ಮೂರನೇ ವ್ಯಕ್ತಿಯಿಂದ ಇಡೀ ಕಾಮಗಾರಿಯ ಪರಿಶೀಲನೆ ಆಗಬೇಕೆಂಬ ಬೇಡಿಕೆ ಯನ್ನೂ ಇಟ್ಟಿದ್ದರು. ಇದಕ್ಕೆ ಸಿಎಂ ಸಹ ಅನುಮತಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next