ನವ ದೆಹಲಿ : ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಎಲ್ ಐ ಸಿ ‘ಜೀವನ್ ಶಾಂತಿ ಯೋಜನೆ’ ಎಂಬ ಒಂದು ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಎಲ್ ಐ ಸಿ ಯ ಜೀವನ್ ಶಾಂತಿ ಯೋಜನೆ :
ಎಲ್ ಐಸಿ ಹೊಸದಾಗಿ ಜಾರಿಗೆ ತಂದಿರುವ ಜೀವನ್ ಶಾಂತಿ ಯೋಜನೆರಯಲ್ಲಿ ನೀವು ಒಮ್ಮೆಲೆ ಹಣ ಹೂಡಿಕೆ ಮಾಡಬಹುದಾಗಿದ್ದು, ಪಿಂಚಣಿ ಸೌಲಭ್ಯವನ್ನು ಕೂಡ ಈ ಯೋಜನೆ ಒದಗಿಸುತ್ತಿದೆ.
ಎಷ್ಟು ಹೂಡಿಕೆಗೆ ಎಷ್ಟು ಪಿಂಚಣಿ ?
Related Articles
ಈ ಯೋಜನೆಯನ್ನು ತೆಗೆದುಕೊಳ್ಳುವವರು 45 ವರ್ಷ ವಯಸ್ಸಾಗಿರಬೇಕು. ನೀವು ಈ ಜೀವನ್ ಶಾಂತಿ ಯೋಜನೆಯಲ್ಲಿ 10 ಲಕ್ಷ ರೂ. ಹೂಡಿಕೆ ಮಾಡಿದರೆ, ನಿಮಗೆ ವಾರ್ಷಿಕವಾಗಿ 74,300 ರೂ ಪಿಂಚಣಿ ದೊರಕುತ್ತದೆ. 5 , 10, 15 ಅಥವಾ 20 ವರ್ಷಗಳ ನಂತರವೂ ನೀವು ಪಿಂಚಣಿಯನ್ನು ಪಡೆಯಬಹುದಾಗಿದೆ. ನೀವು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಕೂಡ ಲಾಭವನ್ನು ಸಹ ಪಡೆಯಬಹುದಾಗಿದೆ.
ಓದಿ : ಕೋವಿಡ್ 19 : ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಇಂದು ಸೋನಿಯಾ ಸಭೆ
ಜೀವನ್ ಶಾಂತಿ ಯೋಜನೆಯನ್ನು ಆನ್ ಲೈನ್ / ಆಫ್ ಲೈನ್ ನಲ್ಲಿ ಪಡೆಯಬಹುದಾಗಿದೆ :
ಎಲ್ ಐ ಸಿ ಜೀವನ್ ಶಾಂತಿ ಯೋಜನೆಯನ್ನು ನೀವು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಪಡೆಯಬಹುದಾಗಿದೆ. ಈ ಯೋಜನೆಯು ಸಮಗ್ರ ವಾರ್ಷಿಕ ಯೋಜನೆಯಾಗಿದ್ದು, ಇದರಲ್ಲಿ ವ್ಯಕ್ತಿ ಮತ್ತು ಅವರ ಕುಟುಂಬ ಕೂಡ ಪ್ರಯೋಜನ ಪಡೆಯುವುದಕ್ಕೆ ಅವಕಾಶವಿದೆ.
ಎಲ್ ಐ ಸಿಯ ಈ ಜೀವನ್ ಶಾಂತಿ ಯೋಜನೆಯನ್ನು ಭಾರತೀಯ ನಾಗರಿಕರಾಗಿರುವ ಯಾರಾದರೂ ಪಡೆಯಬಹದು, ಅವರ ವಯಸ್ಸು 30 ವರ್ಷಕ್ಕಿಂತ ಹೆಚ್ಚು ಮತ್ತು 85 ವರ್ಷಕ್ಕಿಂತ ಕಡಿಮೆ ಆಗಿರಬೇಕು. ಈ ಪಾಲಿಸಿಯಲ್ಲಿ ನೀವು ಸಾಲವನ್ನು ಸಹ ಪಡೆಯಬಹುದಾಗಿದ್ದು, ಈ ಯೋಜನೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ, ನೀವು 3 ತಿಂಗಳ ನಂತರ ಯಾವುದೇ ಸಮಯದಲ್ಲಿ ವಿಥ್ ಡ್ರಾ ಮಾಡಬಹುದಾಗಿದೆ.