Advertisement
ಈ ಕುರಿತು ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
Related Articles
- ಕೌಶಲ ಅಭಿವೃದ್ಧಿ ಅಡಿಯಲ್ಲಿ ಜರ್ಮನ್ ಟೆಕ್ನಾಲಜಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ಗೆ ಕಟ್ಟಡ ನಿರ್ಮಾಣಕ್ಕೆ ಮಂಗಳೂರಿನಲ್ಲಿ23 ಕೋಟಿ ಮತ್ತು ಬೆಳಗಾವಿಯಲ್ಲಿ 16 ಕೋ.ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ.
- ನೇತ್ರಾವತಿಗೆ ಅಡ್ಡಲಾಗಿ ದಕ್ಷಿಣಕನ್ನಡ ಜಿಲ್ಲೆ ಬೆಳ್ತಂಗಡಿಯಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 66 ಕೋ. ರೂ.ಗೆ ಅನುಮೋದನೆ.
- ಗದಗ ಪಶು ಸಂಗೋಪನ ಕಾಲೇಜಿನ ಎರಡನೇ ಹಂತ ಕಾಮಗಾರಿಗೆ 30 ಕೋ.ರೂ. ಹೆಚ್ಚುವರಿ ಅನುದಾನಕ್ಕೆ ಒಪ್ಪಿಗೆ.
- ದೇವದುರ್ಗ ಎಂಜನಿಯರಿಂಗ್ ಕಾಲೇಜಿಗೆ 58 ಕೋ. ರೂ. ಬಿಡುಗಡೆಗೆ ತೀರ್ಮಾನ.
- ಕೆ.ಎಸ್.ಎಫ್.ಸಿ. ಕಟ್ ಬಾಕಿ ಆಗಿರುವವರಿಗೆ ಅನುಕೂಲ ಕಲ್ಪಿಸಲು ಕ್ರಮ.
- ಕಾರಾಗೃಹ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ತೀರ್ಮಾನ.
- 139 ಕೈದಿಗಳನ್ನು ಸನ್ನಡತೆ ಅಧಾರದ ಮೇಲೆ ಬಿಡುಗಡೆಗೆ ಶಿಫಾರಸು ಮಾಡಲು ಒಪ್ಪಿಗೆ.
- 2019ರಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆ ಕಳೆದುಕೊಂಡವರಿಗೆ ಪರಿ ಹಾರ ನೀಡಲು ಅನುಮೋದನೆ.
- ಕಂದಾಯ ಇಲಾಖೆಯಲ್ಲಿ ವಿವಿಧ ವೃಂದದ ಸಿಬಂದಿಗೆ ಸಾಮಾನ್ಯ ಹಿರಿತನ ಆಧಾರದಲ್ಲಿ ಭಡ್ತಿ ನೀಡಲು ಅನುಮತಿ. 3,059 ಎಸ್‌ಡಿಎ, 9,843 ವಿಎ ಹಾಗೂ 2,450 ಎಫ್ಡಿಎ ಹುದ್ದೆಗಳಿವೆ.
- ಬಳ್ಳಾರಿಯ ಶಿರಗುಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸಲು46 ಕೋ.ರೂ. ಬಿಡುಗಡೆ.
- ರಾಣೆಬೆನ್ನೂರಿನ 18 ಕೆರೆಗಳನ್ನು ತುಂಬಿಸಲು 206 ಕೋ.ರೂ. ಯೋಜನೆಗೆ ಒಪ್ಪಿಗೆ.
Advertisement
ಜೆಒಸಿ-ಪಿಯುಸಿ ತತ್ಸಮಾನ ಕೋರ್ಸ್:
ಜೆಒಸಿ ಕೋರ್ಸ್ ಅನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಬೇಕೆಂಬ ದೀರ್ಘ ಕಾಲದ ಆಗ್ರಹಕ್ಕೆ ಸರಕಾರ ಒಪ್ಪಿಗೆ ಸೂಚಿಸಿದೆ. ಇನ್ನು ಮುಂದೆ ಜೆಒಸಿ ಕೋರ್ಸ್ ಪೂರೈಸಿದವರು ಸರಕಾರಿ ಉದ್ಯೋಗಕ್ಕೆ ಅರ್ಜಿ
ಸಲ್ಲಿಸಲು ಅವಕಾಶ ಸಿಗಲಿದೆ. ವೃತ್ತಿ ಶಿಕ್ಷಣ (ಜಾಬ್ ಓರಿಯೆಂಟೆಡ್ ಕೋರ್ಸ್- ಜೆಒಸಿ) ಎಸೆಸೆಲ್ಸಿ ಬಳಿಕ 2 ವರ್ಷಗಳ ಕೋರ್ಸ್ ಆಗಿತ್ತು. 2010ರಲ್ಲಿ ಸರಕಾರ ಜೆಒಸಿಯನ್ನು ರದ್ದು ಮಾಡಿತ್ತು. ಅದರಂತೆ 2011ರಲ್ಲಿ ಜೆಒಸಿ ಕೋರ್ಸ್ ರಾಜ್ಯದಲ್ಲಿ ಸಂಪೂರ್ಣ ರದ್ದಾ ಗಿತ್ತು. ಪಿಯುಸಿಗೆ ತತ್ಸಮಾನ ಕೋರ್ಸ್ ಎಂದೇ ಕರೆಯಲಾಗುತ್ತಿತ್ತು. ಆದರೂ ಸರಕಾರಿ ಉದ್ಯೋಗಕ್ಕೆ ಜೆಒಸಿ ಅಭ್ಯರ್ಥಿಗಳನ್ನು ಪರಿಗಣಿಸುತ್ತಿರಲಿಲ್ಲ.
ಯೋಜನೆಗಳಿಗೆ ಹಣಕಾಸಿನ ಕೊರತೆ ಇಲ್ಲ :
ಪ್ರತಿ ಸಂಪುಟ ಸಭೆಯಲ್ಲೂ ಸಾವಿರಾರು ಕೋ. ರೂ. ಯೋಜನೆ ಗಳಿಗೆ ಅನುಮತಿ ದೊರೆ ಯುತ್ತಿದೆ. ಸರಕಾರದಲ್ಲಿ ಅಷ್ಟೊಂದು ಹಣ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿ ಯೊಂದು ಯೋಜನೆಯೂ ಸಂಪುಟಕ್ಕೆ ಬರುವ ಮೊದಲು ಹಣಕಾಸು ಇಲಾಖೆಯ ಅನುಮತಿ ಪಡೆದಿರುತ್ತವೆ. ಅಲ್ಲದೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಿದ ಕೂಡಲೇ ಹಣ ಬಿಡುಗಡೆ ಮಾಡುತ್ತಿಲ್ಲ. ಕಾಮಗಾರಿ ಪೂರ್ಣಗೊಂಡ ಬಳಿಕ ಹಣ ಬಿಡುಗಡೆ ಮಾಡ ಲಾಗುವುದು. ಹೀಗಾಗಿ ಹಣಕಾಸಿನ ಲಭ್ಯತೆ ಆಧಾರದಲ್ಲೇ ಯೋಜನೆಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದರು.