Advertisement

ನ.3ರಿಂದ ಬಂಡವಾಳ ಹೂಡಿಕೆದಾರರ ಸಮಾವೇಶ

12:28 AM Jan 08, 2020 | mahesh |

ಬೆಂಗಳೂರು: ಹೂಡಿಕೆದಾರರನ್ನು ಕರ್ನಾಟಕದತ್ತ ಸೆಳೆಯುವ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ “ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕೈಗಾರಿಕ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

Advertisement

ಮಂಗಳವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ ನಡೆದ “ಸಂವಾದ’ದಲ್ಲಿ ಮಾತನಾಡಿ, ನವೆಂಬರ್‌ 3 ರಿಂದ 5ರ ವರೆಗೆ ಬೆಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದರು. ಜನವರಿಯಲ್ಲಿಯೇ ಈ ಸಮಾವೇಶ ನಡೆಯಬೇಕಾಗಿತ್ತು. ಆದರೆ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ತಯಾರಿ ನಡೆದಿರಲಿಲ್ಲ. ಆ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ನಡೆಸಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದರು.

ಸ್ವಿಡ್ಜರ್‌ಲ್ಯಾಂಡ್‌ನ‌ ದಾವೋಸ್‌ನಲ್ಲಿ ಜ.20ರಂದು “ಇಂಟರ್‌ ನ್ಯಾಷನಲ್‌ ಎಕನಾಮಿಕ್‌ ಫೋರಂ’ ನಡೆಯಲಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾಗವಹಿಸಲಿದ್ದು ಅಲ್ಲಿ ವಿಶ್ವ ಹೂಡಿಕೆದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದ್ದಾರೆ ಎಂದರು.

ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ: ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಹೂಡಿಕೆ ಪ್ರೋತ್ಸಾಹಿಸುವ ಭಾಗವಾಗಿ ಫೆ.14ರಂದು ಹುಬ್ಬಳ್ಳಿಯಲ್ಲಿ “ಇನ್‌ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ’ ಏರ್ಪಡಿಸಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರೊಂದಿಗೆ ಮುಂಬೈನಲ್ಲಿ ಈಗಾಗಲೇ ರೋಡ್‌ ಶೋ ನಡೆಸಲಾಗಿದೆ. ಹಿಂದುಜಾ, ಆನಂದ್‌ ಮಹೇಂದ್ರ ಸೇರಿ ಹಲವು ಉದ್ಯಮಿಗಳ ಜತೆಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದರು.

ಸರ್ಕಾರ ಶೀಘ್ರ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಿದೆ. ಈ ಸಂಬಂಧ ನಗರಾಭಿವೃದ್ಧಿ
ಇಲಾಖೆ ಸೇರಿ ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.
ಹಲವು ಕೈಗಾರಿಕೆಗಳು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದು ಇವುಗಳನ್ನು ಹೊರ ಜಿಲ್ಲೆಗಳಿಗೂ ತೆಗೆದು ಕೊಂಡು ಹೋಗಲಾಗುವುದು. ಕೈಗಾರಿಕೆಗಳ ಬೆಳವಣಿಗೆಗೆ ಪೂರಕವಾದ ನೀತಿ ರೂಪಿಸಲಾಗುವುದು ಎಂದರು.

Advertisement

ಎಫ್ಕೆಸಿಸಿಐ ಅಧ್ಯಕ್ಷ ಜನಾರ್ಧನ ಮಾತನಾಡಿ, ಕೈಗಾರಿಕಾ ಎಸ್ಟೇಟ್‌ಗಳ ನಿರ್ಮಾಣದತ್ತ ಸರ್ಕಾರ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದ ಕೈಗಾರಿಕೆಗಳಲ್ಲಿ ದುಡಿಯುವವರಿಗೂ ನಗರ ಪ್ರದೇಶದ ರೀತಿ ಕನಿಷ್ಠ ವೇತನ ನೀಡಲಾಗುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಕಾರ್ಯೋನ್ಮುಖವಾಗ
ಬೇಕೆಂದು ಮನವಿ ಮಾಡಿದರು. ಬಿಬಿಎಂಪಿ ವ್ಯಾಪ್ತಿ ಸೇರಿ ಹಲವೆಡೆ ಆಸ್ತಿ ತೆರಿಗೆ ನೀಡುವ ವಿಚಾರದಲ್ಲಿ ಹಲವು ರೀತಿಯ ನ್ಯೂನತೆಗಳಿವೆ. ಅವುಗಳನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದರು. ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್‌ ಕೃಷ್ಣನ್‌ ಹಾಗೂ ಎಫ್ಕೆಸಿಸಿಐನ ಹಿರಿಯ ಅಧಿಕಾರಿಗಳು
ಉಪಸ್ಥಿತರಿದ್ದರು.

ಕೈಗಾರಿಕಾ ಅದಾಲತ್‌ ಆಯೋಜನೆ
ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಕೈಗಾರಿಕೆಗೆ ಸಂಬಂಧಿಸಿದ ಸಾವಿರಾರು ಪ್ರಕರಣಗಳು ಬಗೆಹರಿಯದೆ ಹಾಗೇ ಉಳಿದಿವೆ. ಇದನ್ನು ‌ಪರಿಹರಿಸುವ ಸಂಬಂಧ ಕೈಗಾರಿಕಾ ಅದಾಲತ್‌ ನಡೆಸಲಾಗುವುದು ಎಂದರು. ತೆರಿಗೆ ವಿಚಾರದಲ್ಲಿ ಹಲವು
ಲೋಪಗಳಿವೆ. ಆ ಹಿನ್ನೆಲೆಯಲ್ಲಿ ಕಮರ್ಷಿಯಲ್‌, ರೆಸಿಡೆನ್ಸಿಯಲ್‌ ಹಾಗೂ ಉದ್ಯಮಿದಾರರಿಗಾಗಿ ಬೇರೆ ಬೇರೆ ತೆರಿಗೆ ಹಾಕುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಇಂಡಸ್ಟ್ರಿಯಲ್‌ ಟೌನ್‌ಶಿಪ್‌ ನಿರ್ಮಾಣದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಶೆಟ್ಟರ್‌ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next