Advertisement
ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿ ಮಂಗಳವಾರ ಆರಂಭವಾಗಿರುವ 3 ದಿನಗಳ ಫ್ಯೂಚರ್ ಇನ್ವೆಸ್ಟ್‌ಮೆಂಟ್ ಇನಿಶಿ ಯೇಟಿವ್ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣದಲ್ಲಿ ಅವರು ಈ ವಿಚಾರ ಪ್ರಸ್ತಾವಿಸಿದ್ದಾರೆ. ಅನಿಲ, ಪೆಟ್ರೋಲಿಯಂ ಕ್ಷೇತ್ರಗಳಲ್ಲಿ 7.08 ಲಕ್ಷ ಕೋಟಿ ರೂ.ಗಳಷ್ಟು ಬಂಡವಾಳ ಹೂಡಿಕೆ ಮಾಡುವ ಗುರಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವ ಕಂಪೆನಿಗಳಿಗೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಕೌಶಲಯುಕ್ತ ಸಿಬಂದಿಯ ಅಗತ್ಯ ಪೂರೈಸಲು 40 ಕೋಟಿ ಮಂದಿಗೆ ತರಬೇತಿ ನೀಡಲಾಗುತ್ತದೆ. ಸೌದಿ ಅರೇಬಿಯಾದ ತೈಲ ಉತ್ಪಾದನ ಸಂಸ್ಥೆ ಅರಾಮೊRà ದೇಶದ ತೈಲೋತ್ಪಾದನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದು ಸಂತಸ ತಂದಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸ್ಟಾರ್ಟಪ್ ಮೂಲ ಸೌಕರ್ಯಕ್ಕಾಗಿ ವಿಶ್ವದಲ್ಲಿಯೇ 3ನೇ ಅತ್ಯಂತ ದೊಡ್ಡ ವ್ಯವಸ್ಥೆ ಭಾರತದಲ್ಲಿ ಇದೆ ಎಂದಿದ್ದಾರೆ.
ಚರಿತ್ರೆಯ ದಿನಗಳಿಂದಲೂ ಎರಡು ದೇಶಗಳು ಉತ್ತಮ ಸೌಹಾರ್ದಯುತ ಬಾಂಧವ್ಯ ಹೊಂದಿವೆ. ಹಾಲಿ ಕಾಲಘಟ್ಟದಲ್ಲಿಯೂ ವ್ಯೂಹಾತ್ಮಕ ಬಾಂಧವ್ಯ ಕಾಪಿಟ್ಟುಕೊಳ್ಳಲು ಆ ಉತ್ತಮ ತಳಹದಿ ನೆರವಾಗಿದೆ ಎಂದು ಮೋದಿ ಹೇಳಿದ್ದಾರೆ. 1.06 ಲ.ಕೋ.ರೂ. ಮೊತ್ತದ 23 ಒಪ್ಪಂದಗಳಿಗೆ ಸಹಿ
ರಿಯಾದ್‌ನಲ್ಲಿ ಮಂಗಳವಾರ ಆರಂಭವಾಗಿರುವ, ಮರುಭೂಮಿಯ ದಾವೋಸ್ ಆರ್ಥಿಕ ಶೃಂಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 3 ದಿನಗಳ ಶೃಂಗದಲ್ಲಿ 1.06 ಲಕ್ಷ ಕೋಟಿ ರೂ. ಮೌಲ್ಯದ 23 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಅದಕ್ಕೆ ಆಸಕ್ತಿ ವಹಿಸಿದ್ದಾರೆ. 2030ರ ಸೌದಿ ದಿಕ್ಸೂಚಿ ದಾಖಲೆಯ ಅನ್ವಯ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಸೇರಿದಂತೆ ಹಲವು ಮಂದಿ ಭಾರತದ ಮತ್ತು ಇತರ ದೇಶಗಳ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
Related Articles
ಕೋಟ್ಯಂತರ ಭಾರತೀಯರಿಗೆ ಸೌದಿ ಅರೇಬಿಯಾ ಎನ್ನುವುದು 2ನೇ ಮನೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. “ಅರಬ್ ನ್ಯೂಸ್’ ಜತೆಗೆ ಮಾತನಾಡಿದ ಅವರು, ಲಕ್ಷಾಂತರ ಮಂದಿ ಭಾರತೀಯರು ಪ್ರತಿ ವರ್ಷ ಹಜ್ ಮತ್ತು ಉಮ್ರಾ ಯಾತ್ರೆಗೆ ಸೌದಿಗೆ ಆಗಮಿಸುತ್ತಾರೆ ಎಂದಿದ್ದಾರೆ. ಸೌದಿಯಲ್ಲಿರುವ ಭಾರತೀಯರಿಗೆ ಸಂದೇಶ ನೀಡಿದ ಅವರು, ನಿಮ್ಮ ನಿಸ್ವಾರ್ಥ ಮತ್ತು ಕಠಿನ ದುಡಿಮೆಯಿಂದ ಈ ದೇಶವನ್ನು ಶ್ರೀಮಂತಗೊಳಿಸಿದ್ದೀರಿ. ಜತೆಗೆ ಎರಡೂ ದೇಶಗಳ ಬಾಂಧವ್ಯ ವೃದ್ಧಿಗೆ ಕಾರಣರಾಗಿದ್ದೀರಿ ಎಂದಿದ್ದಾರೆ.
Advertisement
ಹೊಸ ಶಕೆಯತ್ತಫೆಬ್ರವರಿಯಲ್ಲಿ 2 ದೇಶಗಳು ಸಹಿ ಹಾಕಿದ ವ್ಯೂಹಾತ್ಮಕ ಸಹಕಾರ ಮಂಡಳಿಯು ಮುಂದಿನ ದಿನಗಳಲ್ಲಿ ಹೊಸ ಮಾದರಿಯ ಸಹಕಾರ ಸ್ಥಾಪಿಸಿಕೊಳ್ಳಲು ನೆರವಾಗಲಿದೆ ಮತ್ತು ಅದರಿಂದ ಎರಡೂ ದೇಶಗಳ ನಡುವಣ ಬಾಂಧವ್ಯದಲ್ಲಿ ವಿಶೇಷ ಅಧ್ಯಾಯ ಆರಂಭವಾಗಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜತೆಗೆ ಸೌದಿ ಅರೇಬಿಯಾದ 2030ರ ದಿಕ್ಸೂಚಿ ದಾಖಲೆಯಲ್ಲಿನ ಅಂಶಗಳಿಗೆ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ. ವ್ಯೂಹಾತ್ಮಕ ಸಹಕಾರ ಒಪ್ಪಂದ
ಸೌದಿ ಜತೆಗೆ ವ್ಯೂಹಾತ್ಮಕ ಬಾಂಧವ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ವ್ಯೂಹಾತ್ಮಕ ಸಹಕಾರ ಮಂಡಳಿ ಸ್ಥಾಪನೆಗೆ ಒಪ್ಪಂದ ಮಾಡಿ ಕೊಂಡಿದ್ದಾರೆ. ಇದರಿಂದ ಉಡುಪಿ ಬಳಿಯ ಪಾದೂರಿನ ಭೂಗತ ತೈಲ ಸಂಗ್ರಹಾಗಾರದಲ್ಲಿ ಕಚ್ಚಾ ತೈಲ ಸಂಗ್ರಹಕ್ಕೆ ಅನುಕೂಲವಾಗಲಿದೆ. ರುಪೇ ಕಾರ್ಡ್ ಅನ್ನು ಸೌದಿ ಅರೇಬಿಯಾದಲ್ಲಿ ಆರಂಭಿಸುವ ಬಗ್ಗೆ, ಸೌದಿಯ ಅಲ್ ಜೀರಿ ಕಂಪೆನಿ ಮತ್ತು ಐಒಸಿ ಜತೆಗೆ ಜಂಟಿ ಉದ್ದಿಮೆ ಸ್ಥಾಪಿಸುವ ಬಗ್ಗೆಯೂ ಸಹಿ ಹಾಕಲಾಗಿದೆ.