Advertisement
ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ದೇಶ-ವಿದೇಶಗಳ ಉದ್ಯಮಿಗಳಿಗೆ ನೀಡಿದ ತುಂಬು ಹೃದಯದ ಆಹ್ವಾನ ಹಾಗೂ ಉದ್ಯಮಾ ಕರ್ಷಣೆ ಭರವಸೆ. ಸರ್‌ಎಂ.ವಿಶ್ವೇಶ್ವರಯ್ಯ ಅವರ ಉದ್ಯಮದ ಧ್ಯೇಯ ವಾಕ್ಯವೇ ನಮ್ಮ ಸರ್ಕಾರದ ಪ್ರಮುಖ ಆರ್ಥಿಕ ಅಂಶವಾಗಿರಿಸಿಕೊಂಡಿದ್ದೇವೆ ಎಂದರು.
Related Articles
Advertisement
ಬೆಂಗಳೂರು ಹೊರಗಡೆ ಇದೇ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮ್ಮೇಳನ ನಡೆಯು ತ್ತಿದ್ದು, ರಾಜ್ಯದ ಇತಿಹಾಸದಲ್ಲಿಯೇ ಇದೊಂದು ದಾಖಲೆ ಕಾರ್ಯಕ್ರಮವಾಗಿದೆ. ನಿರೀಕ್ಷೆಗೂ ಮೀರಿ ಉದ್ಯಮಿಗಳು ಆಗಮಿಸಿರುವುದು ಸಂತಸದ ವಿಚಾರ. ಈ ಸಮ್ಮೇಳನದಲ್ಲಿ ಸಾಂಕೇತಿಕವಾಗಿ ಕೈಗೊಂಡ ಒಡಂಬಡಿಕೆಯಲ್ಲಿಯೇ ಸುಮಾರು 1 ಲಕ್ಷ ಕೋಟಿಗೂ ಅಧಿಕ ಬಂಡವಾಳ ಹೂಡಿಕೆ ಒಪ್ಪಂದ ಆಗಿರುವುದು ಸಂತಸದ ವಿಚಾರ ಎಂದರು.
ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾಗವಹಿಸಿ ವಿಶ್ವದ ವಿವಿಧ ಸುಮಾರು 40ಕ್ಕೂ ಹೆಚ್ಚು ಖ್ಯಾತ ಉದ್ಯಮದಾರರೊಂದಿಗೆ ಸಂವಾದ ನಡೆಸಿದ್ದೆ. ರಾಜ್ಯದಲ್ಲಿ ಹೂಡಿಕೆಗೆ ಮುಂದಾ ಗುವಂತೆ ಮನವಿ ಮಾಡಿದ್ದೆ. ಅಲ್ಲಿ ಸಂವಾದ ನಡೆಸಿದ ಕೆಲವೊಂದು ಉದ್ಯಮದಾರರು ಈ ಸಮ್ಮೇಳನದಲ್ಲಿ ಭಾಗಿಯಾಗಿರುವುದು ಸಂತಸ ಮೂಡಿಸಿದೆ ಎಂದರು.
ವಿವಿಧ ಕ್ಲಸ್ಟರ್‌ಗಳ ಅಭಿವೃದ್ಧಿ: ಕರ್ನಾಟಕ ಮಾಹಿತಿ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ರಫ್ತಿನಲ್ಲಿ ಪ್ರಮುಖ ರಾಜ್ಯವಾಗಿ ವಿಶ್ವದ ಗಮನ ಸೆಳೆದಿದೆ. ಏರೋಸ್ಪೇಸ್, ಆಟೋಮೊಬೈಲ್, ಎಲೆಕ್ಟ್ರಿಕ್, ಜೈವಿಕ ತಂತ್ರಜ್ಞಾನ ಕ್ಷೇತ್ರ ಗಳಲ್ಲಿ ದೇಶದಲ್ಲಿಯೇ ಖ್ಯಾತಿ ಪಡೆದಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕದಲ್ಲಿ ವಿವಿಧ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಕೊಪ್ಪಳ ಜಿಲ್ಲೆ ಯಲ್ಲಿ ಆಟಿಕೆ ಸಾಮಾನು, ಗೊಂಬೆಗಳ ತಯಾರಿಕೆ ಕ್ಲಸ್ಟರ್, ಬಳ್ಳಾರಿ ಜಿಲ್ಲೆಯಲ್ಲಿ ಜವಳಿ, ಧಾರವಾಡ ಜಿಲ್ಲೆ ಯಲ್ಲಿ ಎಫ್ಎಂಸಿಜಿ, ಕಲಬುರಗಿಯಲ್ಲಿ ಸೋಲಾರ, ಬೀದರಲ್ಲಿ ಅಗ್ರಿಕಲ್ಚರ್ ಕ್ಲಸ್ಟರ್ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದಗೌಡ, ಸುರೇಶ ಅಂಗಡಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ ಸೇರಿ ಅನೇಕ ಸಂಸದರು, ಶಾಸಕರು, ಉದ್ಯಮಿಗಳು ಪಾಲ್ಗೊಂಡಿದ್ದರು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ ಸ್ವಾಗತಿಸಿದರು.