Advertisement

ಪಿಪಿಎಫ್ ಸ್ಕೀಮ್ : 150 ರೂಪಾಯಿ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ..!

10:37 AM Apr 23, 2021 | |

ನವ ದೆಹಲಿ :  ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಈಗ ನೀವು ಹೂಡಿಕೆ ಮಾಡಿದರೆ ನಿಮ್ಮ ಹೂಡಿಕೆ ಮೇಲೆ ವಾರ್ಷಿಕ 7.1% ಬಡ್ಡಿದರ ಸಿಗಲಿದೆ. ಅಲ್ಲದೆ ಇದರಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗಲಿದೆ. ಹಣದುಬ್ಬರ ಕೂಡಾ ಈ ಸ್ಕೀಮ್ ಮೇಲೆ ಪರಿಣಾಮ ಬೀರುವುದಿಲ್ಲ. ಇದರಲ್ಲಿ ನಿವ್ವಳ ಲಾಭ ಕೂಡಾ ಹೆಚ್ಚಾಗಿರುತ್ತದೆ.

Advertisement

ಹೌದು, 150 ರೂಪಾಯಿಯನ್ನು ನಾವು ಪ್ರತಿ ದಿನ ಹೂಡಿಕೆ ಮಾಡಿದ್ದಲ್ಲಿ ಅದು 15 ಲಕ್ಷವನ್ನಾಗಿ ಲಾಭ ಪಡೆಯಬಹುದಾದ ೀ ಸ್ಕೀಮ್ ನಲ್ಲಿ ಹಲವಾರು ಲಾಭಗಳಿವೆ.

ಹೂಡಿಕೆಯ ಮೇಲಿನ ಕಡಿತದ ಲಾಭ, ಬಡ್ಡಿಗೆ ಯಾವುದೇ ತೆರಿಗೆ ಪಾವತಿಸಲಾಗುವುದಿಲ್ಲ, ಮೆಚ್ಯುರಿಟಿ ಮೊತ್ತದ ಮೇಲೆ ಕೂಡಾ ತೆರಿಗೆ ವಿಧಿಸದೆ ಮೂರು ಹಂತಗಳಲ್ಲಿ ಹೂಡಿಕೆದಾದರರು ಪ್ರಯೋಜನವನ್ನು ಪಡೆಯಬಹುದಾಗಿದೆ.

ಓದಿ : ಲೆಕ್ಕಾಚಾರ ಉಲ್ಟಾಪಲ್ಟಾ: ಚೇತರಿಕೆಯ ಮೊದಲೇ ಸಿನಿ ಮಂದಿಯ ಕನಸು ನುಂಗಿದ ಕೊರೋನಾ

ನೀವು ಪಿಪಿಎಫ್ ಯೋಜನೆಯಲ್ಲಿ ಪ್ರತಿ ತಿಂಗಳು 4,500 ರೂ ಅಥವಾ ಪ್ರತಿದಿನ 150 ರೂಗಳನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ, ಮೆಚ್ಯುರಿಟಿ ವೇಳೆ, ಪ್ರಸ್ತುತ ಬಡ್ಡಿದರದ ಪ್ರಕಾರ, ನಿಮಗೆ 14 ಲಕ್ಷ 84 ಸಾವಿರ ರೂ. ಸಿಗಲಿದೆ. ಒಟ್ಟು 8,21,250 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, 15 ವರ್ಷಗಳ ನಂತರ ನಿಮಗೆ 14.84 ಲಕ್ಷ ರೂಪಾಯಿಗಳ ಲಾಭ ಪಡೆದುಕೊಳ್ಳಬಹುದು.

Advertisement

ಇನ್ನು, ಪಿಪಿಎಫ್ ಪ್ರತಿ ತಿಂಗಳ 5ನೇ ತಾರೀಕಿನಂದು ಅಕೌಂಟ್ ನಲ್ಲಿರುವ ಮೊತ್ತಕ್ಕೆ ಬಡ್ಡಿ ವಿಧಿಸಲಾಗುತ್ತದೆ. ಹಾಗಾಗಿ ಪ್ರತಿ ತಿಂಗಳು 5 ನೇ ತಾರೀಕಿನಂದು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ.

ಇನ್ನು, ಹೂಡಿಕೆ ಮಾಡುವಾಗ ಒಂದು ದಿನ ಹೆಚ್ಚಾದರೂ, ಇಡೀ 25 ದಿನಗಳಿಗೆ ಬಡ್ಡಿ ಸಿಗುವುದಿಲ್ಲ. ಪ್ರತಿ ತಿಂಗಳು ಈ ತಪ್ಪು ಮಾಡಿದರೆ, 365 ದಿನಗಳಲ್ಲಿ 300 ದಿನಗಳವರೆಗೆ ಬಡ್ಡಿ ಸೌಲಭ್ಯಗಳು ಲಭ್ಯವಿರುವುದಿಲ್ಲ.

ಈ ಯೋಜನೆಯಡಿ ಗರಿಷ್ಠ ಒಂದೂವರೆ ಲಕ್ಷ ರೂಪಾಯಿ ಮತ್ತು ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬಹುದು. ಸೆಕ್ಷನ್ 80 ಸಿ ಅಡಿಯಲ್ಲಿಡಿಡೆಕ್ಷನ್ ಲಾಭ ಕೂಡ ಸಿಗಲಿದೆ.

ಓದಿ : ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಅವಕಾಶ ನೀಡಿ: ಕುಮಾರಸ್ವಾಮಿ ಸಲಹೆ

Advertisement

Udayavani is now on Telegram. Click here to join our channel and stay updated with the latest news.

Next