Advertisement

Arunachal Pradesh “ಮರು ನಾಮಕರಣ’ಕ್ಕೆ ತಿರಸ್ಕಾರ; ಚೀನಾಕ್ಕೆ ಕೇಂದ್ರ ಖಡಕ್‌ ತಿರುಗೇಟು

12:35 PM Apr 05, 2023 | Shreeram Nayak |

ನವದೆಹಲಿ:ಅರುಣಾಚಲ ಪ್ರದೇಶದ ಕೆಲವು ಸ್ಥಳಗಳ ಹೆಸರುಗಳನ್ನು ಚೀನಾ ಬದಲಾಯಿಸಿದೆ ಎಂಬ ವರದಿಯನ್ನು ಭಾರತವು ಮಂಗಳವಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಜತೆಗೆ, ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದ್ದು, “ಹೆಸರು’ ಬದಲಾದೊಡನೆ ವಾಸ್ತವವನ್ನು ಬದಲಾಯಿಸಲು ಆಗದು ಎಂದೂ ಹೇಳಿದೆ.

Advertisement

ಸೋಮವಾರವಷ್ಟೇ ಇಲ್ಲಿನ 11 ಪ್ರದೇಶಗಳ ಹೆಸರುಗಳನ್ನು ಬದಲಿಸಿ ಚೀನೀ ಹೆಸರುಗಳನ್ನು ಇಟ್ಟಿರುವುದಾಗಿಯೂ ಬೀಜಿಂಗ್‌ ಘೋಷಿಸಿದೆ.

ಇದಕ್ಕೆ ಮಂಗಳವಾರ ಖಡಕ್‌ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ , “ನಾವು ವರದಿಗಳನ್ನು ಓದಿದ್ದೇವೆ. ಆದರೆ, ಚೀನದ ಇಂಥ ಕುತಂತ್ರ ಬುದ್ಧಿ ಇದೇ ಮೊದಲೇನಲ್ಲ. ಈ ಹಿಂದೆಯೂ ಅದು ಇಂಥ ಪ್ರಯತ್ನಗಳನ್ನು ನಡೆಸಿತ್ತು. ಆದರೆ, ಅರುಣಾಚಲ ಪ್ರದೇಶದಲ್ಲಿನ ಹೆಸರು ಬದಲಾವಣೆಯನ್ನು ನಾವು ಸಾರಾಸಗಟಾಗಿ ತಿರಸ್ಕರಿಸುತ್ತೇವೆ’ ಎಂದಿದ್ದಾರೆ.

ಕಾಂಗ್ರೆಸ್‌ ಕಳವಳ:
ಇದೇ ವೇಳೆ, ಚೀನದ ಈ ದುಷ್ಟ ನಡೆಯ ಬಗ್ಗೆ ಕಾಂಗ್ರೆಸ್‌ ತೀವ್ರ ಕಳವಳ ವ್ಯಕ್ತಪಡಿಸಿದೆ. ಅರುಣಾಚಲವು ಭಾರತದ ಅವಿಭಾಜ್ಯ ಅಂಗ. ಗಡಿಯಲ್ಲಿ ಚೀನ ಅಷ್ಟೊಂದು ಕ್ಯಾತೆ ತೆಗೆಯುತ್ತಿದ್ದರೂ ಪ್ರಧಾನಿ ಮೋದಿಯವರು ಚೀನಗೆ ಕ್ಲೀನ್‌ಚಿಟ್‌ ನೀಡಿದ್ದರು. ಚೀನದ ದುಸ್ಸಾಹಸದ ಕುರಿತು ಮೋದಿಯವರು ಅನುಸರಿಸಿದ ಮೌನವೇ ಈಗ ಚೀನ ಇಷ್ಟೊಂದು ಮುಂದುವರಿಯಲು ಕಾರಣ. ಪ್ರಧಾನಿಯವರೇ, ನೀವೇಕೆ ಚೀನಾ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ನಿಮಗೇಕೆ ಅಷ್ಟೊಂದು ಭಯ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next