ಬೆಂಗಳೂರು: ಅಮಾನ್ಯಗೊಂಡಿರುವ ನೋಟು ಗಳನ್ನು ಅಮಾಯಕರಿಗೆ ಕೊಟ್ಟು ಅಕ್ರಮ ಚಲಾ ವಣೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಬನಶಂಕರಿ ಠಾಣೆ ಪೊಲೀ ಸರು, 88 ಲಕ್ಷ ರೂ. ಮೌಲ್ಯದ 500ರ ಮುಖ ಬೆಲೆಯ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಪದ್ಮನಾಭ ನಗರದ ಯೋಗಾನಂದಂ ಅಲಿಯಾಸ್ ಯೋಗೇಶ (30), ಆಂಧ್ರ ಪ್ರದೇಶ ಮೂಲದ ವೆಂಕಟನಾರಾಯಣ ಅಲಿಯಾಸ್ ರಾಜಣ್ಣ (60) ಮತ್ತು ಹರಿಪ್ರಸಾದ್ (53) ಬಂಧಿತರು. 88 ಲಕ್ಷ ರೂ. ಮುಖಬೆಲೆಯ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ತಮಿಳುನಾಡು ಮೂಲದ ವ್ಯಕ್ತಿ ಕಡೆಯಿಂದ 88 ಲಕ್ಷ ರೂ. ಮೊತ್ತದ ಹಳೆಯ 500 ರೂ. ಮುಖ ಬೆಲೆಯ ನೋಟುಗಳನ್ನು ಬಂಧಿತ ಆರೋಪಿಗಳು ತಂದಿದ್ದರು. ಬದಲಾವಣೆಗೆ ಅವಕಾಶ ಸಿಗದೆ ಇರುವ ಕಾರಣಕ್ಕೆ ಒಬ್ಬರಾದ ಮೇಲೆ ಒಬ್ಬರಂತೆ ಶೇ.2 ಕಮಿಷನ್ ಇಟ್ಟುಕೊಂಡು ಬದಲಾವಣೆಗೆ ಗಿರಾಕಿಗಳನ್ನು ಹುಡುಕಾಟ ನಡೆಸುತ್ತಿದ್ದರು. ಡಿ.28ರ ತಡರಾತ್ರಿ ಕದಿರೇನಹಳ್ಳಿ ಸೇತುವೆ ಬಳಿ ಕಾರಿನಲ್ಲಿ ಹಳೆ ನೋಟು ಚಲಾವಣೆಗೆ ಯತ್ನಿಸುತ್ತಿರುವ ವೇಳೆ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಬನಶಂಕರಿ ಠಾಣೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿ ಕಾರಿನಲ್ಲಿ ಕುಳಿತಿದ್ದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದರು. ಆ ವೇಳೆ ಕಾರಿನಲ್ಲಿ 40 ಲಕ್ಷ ರೂ. ಮೌಲ್ಯದ ಹಳೆಯ ನೋಟಗಳು ಪತ್ತೆಯಾಗಿವೆ. ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಉಳಿದ 48 ಲಕ್ಷ ರೂ. ಮೌಲ್ಯದ ನೋಟುಗಳು ಕಂಡು ಬಂದಿತ್ತು. ಈ ಎಲ್ಲ ಆರೋಪಿಗಳು ರಿಯಲ್ ಎಸ್ಟೇಟ್ ಬೋಕರ್ ಗಳಾಗಿದ್ದು, ಈ ದಂಧೆಯಲ್ಲಿ ಆರೋಪಿಗಳೊಂದಿಗೆ ಇನ್ನಷ್ಟು ಜನ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಇವರ ಸಹಚರರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗು ತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಟು ರದ್ದಾಗಿ 6 ವರ್ಷ ಕಳೆದರೂ ಚಲಾವಣೆ ಯತ್ನ!: ಕೇಂದ್ರ ಸರ್ಕಾರವು 2016ರಲ್ಲಿ ಹಳೆಯ 500 ರೂ. ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿ ಕೆಲ ತಿಂಗಳ ಕಾಲ ಹೊಸ ನೋಟಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿತ್ತು. ಇದಾಗಿ 6 ವರ್ಷಗಳಾದರೂ ಇನ್ನೂ ಕೆಲವರು ರದ್ದಾದ ನೋಟು ಬದಲಾವಣೆ ಮಾಡಿ ಕೊಡುವ ನೆಪದಲ್ಲಿ ಜನರಿಗೆ ಮೋಸ ಮಾಡುತ್ತಿರುವ ಆರೋಪಗಳು ಆಗಾಗ ಕೇಳಿ ಬರುತ್ತಿದ್ದವು. ಈ ಅಂಶಗಳಿಗೆ ಈ ಪ್ರಕರಣ ಪುಷ್ಠಿ ನೀಡುವಂತಿದೆ.