Advertisement
ಸಿಪಿಐ ವತಿಯಿಂದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ “ನೋಟು ಅಮಾನ್ಯದಿಂದ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯದ ಮೇಲಾಗುವ ಪರಿಣಾಮ’ಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು “ಭಷ್ಟ್ರಾಚಾರ ತಡೆ, ಕಪ್ಪು ಹಣ ನಿಯಂತ್ರಣ ಮತ್ತು ಭಯೋತ್ಪಾದನೆ ನಿಗ್ರಹಕ್ಕಾಗಿ 500, 1000 ರೂ. ಮುಖಬೆಲೆಯ ನೋಟು ರದ್ದು ಮಾಡಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಒಪ್ಪುವಂತಹದ್ದಲ್ಲ.
Related Articles
Advertisement
ಇಂದಿರಾ ಹಾದಿಯಲ್ಲಿ ಮೋದಿ: “ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತ ಇಂದಿರಾ ಗಾಂಧಿ ಅವರ ಹಾದಿಯಲ್ಲೇ ನಡೆಯುತ್ತಿದ್ದಾರೆ. ಅವರಂತೇ ಸರ್ವಾಧಿಕಾರ ಮನೋಭಾವ ಪ್ರದರ್ಶಿಸುತ್ತಿದ್ದಾರೆ. ತಾವು ನಡೆದ ದಾರಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ನಿರ್ಬಂಧವನ್ನು ದೇಶದ ಜನರ ಮೇಲೆ ಹೇರುತ್ತಿದ್ದಾರೆ. ಪಂಜಾಬ್, ಗೋವಾ, ಉತ್ತರಾಖಂಡ್, ಉತ್ತರಪ್ರದೇಶ ಹಾಗೂ ಮಣಿಪುರದ ಚುನಾವಣೆಗಳು ನೋಟು ರದ್ದತಿ ನಿರ್ಧಾರ ಸರಿಯೋ? ತಪ್ಪೊ ಎಂಬುದನ್ನು ತಿಳಿಸುತ್ತದೆ ಎಂದು ಪರಂಜಯ್ ಗುಹಾ ಠಾಖುರ್ತ ಹೇಳಿದ್ದಾರೆ.