Advertisement

ಟಿಕ್‌ಟಾಕ್‌ನಲ್ಲಿ ಪರಿಚಯ ಜೋಡಿ ವಿವಾಹ ಬಂಧನಕ್ಕೆ

01:10 AM Jun 21, 2019 | Sriram |

ಹುಣಸೂರು: ಟಿಕ್‌ಟಾಕ್‌ನಲ್ಲಿ ಪರಿಚಯವಾದ ಯುವ ಜೋಡಿ ಪರಸ್ಪರ ಪ್ರೀತಿಸಿ, ಅಂತರ್ಜಾತಿ ವಿವಾಹ ಮಾಡಿಕೊಂಡಿರುವ ಅಪರೂಪದ ಪ್ರಕರಣ ಇದು.

Advertisement

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಪ್ರಿಯಾಂಕ ಹಾಗೂ ಹುಣಸೂರು ತಾಲೂಕಿನ ಉಯಿಗೊಂಡನಹಳ್ಳಿಯ ಕುಮಾರ್‌ ಉಪನೋಂದಣಾಧಿಕಾರಿಗಳ ಮುಂದೆ ಹಾರ ಬದಲಾಯಿಸಿಕೊಳ್ಳುವ ಮೂಲಕ ಹಿರಿಯ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ವರ್ಷಗಳ ಹಿಂದೆ ಕುಮಾರ್‌ನ ಹಾಡುಗಳು ಟಿಕ್‌ಟಾಕ್‌ನಲ್ಲಿ ಹರಿದಾಡುತ್ತಿತ್ತು. ಇದನ್ನು ಲೈಕ್‌ ಮಾಡಿದ್ದ ಪ್ರಿಯಾಂಕ ನಂತರ ಆತನ ನಂಬರ್‌ ಪಡೆದು ಸಂಪರ್ಕಿಸಿದ್ದಳು. ಈ ವೇಳೆ ಕುಮಾರ್‌ ಹಾಗೂ ಪ್ರಿಯಾಂಕ ನಡುವೆ ಪ್ರೇಮಾಂಕುರವಾಗಿತ್ತು. ಬಡ ಕುಟುಂಬದ ಯುವತಿಯ ತಂದೆ ತಾಯಿ ವೃದ್ಧರಾಗಿದ್ದು, ಕುಮಾರ್‌ ಕುಟುಂಬದವರು ಮದುವೆಗೆ ಸಮ್ಮತಿಸಿದರು. ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಸಂಪರ್ಕಿಸಿ ನೆರವು ಪಡೆದು ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next