Advertisement

ಸಾಹಿತ್ಯಅಧ್ಯಯನದಿಂದ ಸಂಸ್ಕೃತಿ ಪರಿಚಯ: ನಾರಾಯಣ ಗಟ್ಟಿ

07:34 PM Jul 16, 2019 | sudhir |

ಕಾಸರಗೋಡು: ವ್ಯಕ್ತಿತ್ವವು ಆತ ಬಳಸುವ ಭಾಷೆಯಿಂದ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಆಡುವ ಭಾಷೆಯೂ ಸಮಾಜದಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ನಾಡಿನ ಸಂಸ್ಕೃತಿಯು ಅವಲಂಬಿತವಾಗಿರುತ್ತದೆ. ಕನ್ನಡ ಸಾಹಿತ್ಯದ ಅಧ್ಯಯನದಿಂದ ಸಂಸ್ಕೃತಿ ಪರಿಚಯವಾಗುತ್ತದೆ ಎಂಬುದಾಗಿ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಗಟ್ಟಿ ಹೇಳಿದರು.

Advertisement

ಅವರು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಭಾರತೀಯ ಭಾಷಾ ಅಧ್ಯಯನಾಂಗ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ ಕಣ್ಣೂರು ವಿವಿಯ ಚಾಲ ಕ್ಯಾಂಪಸ್‌ನ ಕನ್ನಡ ವಿಭಾಗದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಸಾಹಿತ್ಯ ಸಂಸ್ಕೃತಿ ಕುರಿತು ಮಾತನಾಡಿದರು.

ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ.ಭಟ್‌ ಅಧ್ಯಕ್ಷತೆ ವಹಿಸಿ, ಗಡಿನಾಡು ಕಾಸರಗೋಡಿನಲ್ಲಿ ಕಸಾಪ ಘಟಕವು ಹಲವು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆ ಸಂಸ್ಕೃತಿಯ ಉಳಿವಿಗಾಗಿ ನಿರಂತರ ಶ್ರಮಿಸಿದೆ. ಅದರೊಂದಿಗೆ ಜಿಲ್ಲೆಯ ಕನ್ನಡಿಗರ ಆನೇಕ ಬೇಡಿಕೆಗಳಿಗಾಗಿ ನಡೆಯುವ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುವುದಾಗಿ ಅವರು ಹೇಳಿದರು.

ತುಳು-ಕನ್ನಡ ಭಾಷಾ ಬಾಂಧವ್ಯ ವಿಷಯದಲ್ಲಿ ಉಪನ್ಯಾಸ ನೀಡಿದ ಕಾಸರಗೋಡು ಸರಕಾರಿ ಕಾಲೇಜಿನ ಸಹ ಪ್ರಾಧ್ಯಾಪಕ, ಕವಿ ಡಾ|ರಾಧಾಕೃಷ್ಣ ಬೆಳ್ಳೂರು ಅವರು ನೆಲದ ಮೂಲ ಭಾಷೆಯಾಗಿರುವ ತುಳು ಭಾಷೆಯು ರಾಜಕೀಯ ಆಡಳಿತ ಕೊರತೆಯಿಂದ ಮುಖ್ಯವಾಹಿನಿಯಿಂದ ಹಿಂದೆ ಸರಿದಿದೆ.

ಮುದ್ರಣ ಮಾಧ್ಯಮಗಳೂ ಕೂಡಾ ಅದನ್ನು ಕೈಬಿಟ್ಟ ಕಾರಣದಿಂದ ತುಳುಲಿಪಿ ಬಳಕೆಯಿಂದ ದೂರ ಸರಿಯಿತು. ಕನ್ನಡ ಅದಕ್ಕೆ ಪೋಷಕವಾಗಿ ನಿಂತು ಭಾಷೆಯ ಸುಸ್ಥಿರತೆಗೆ ಕಾರಣವಾಯಿತು ಎಂದು ಹೇಳಿದರು.

Advertisement

ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಕಣ್ಣೂರು ವಿವಿ ಭಾರತೀಯ ಅಧ್ಯಯನಾಂಗ ಕನ್ನಡ ವಿಭಾಗದ ನಿರ್ದೇಶಕ ಡಾ|ರಾಜೇಶ್‌ ಬೆಜ್ಜಂಗಳ ಸ್ವಾಗತಿಸಿದರು. ಕಸಾಪ ಕೇರಳ ಗಡಿನಾಡ ಘಟಕ ಗೌರವ ಕಾರ್ಯದರ್ಶಿ ಎಂ.ಎಸ್‌.ನವೀನಚಂದ್ರ ಅವರು ವಂದಿಸಿದರು. ವಿದ್ಯಾರ್ಥಿ- ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಜೈನರ ಕೊಡುಗೆ ಅಪಾರವಾದದ್ದು: ಡಾ|ಯು.ಮಹೇಶ್ವರಿ
ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಿಕೆ, ಹಿರಿಯ ಕವಯತ್ರಿ ಡಾ|ಯು.ಮಹೇಶ್ವರಿ ಅವರು ಕನ್ನಡ ಪ್ರಾಚೀನ ಸಾಹಿತ್ಯದಲ್ಲಿ ಜೈನರ ಕೊಡುಗೆ ಅಪಾರವಾದದ್ದು. ಕನ್ನಡವನ್ನು ಒಂದು ಮಾಧ್ಯಮವಾಗಿಸಿ ಕಾವ್ಯರಚನೆಗಳು, ಸಾಹಿತ್ಯ ರಚನೆಯಲ್ಲಿ ಜೈನರು ತೊಡಗಿಸಿಕೊಂಡರಲ್ಲದೇ, ಧರ್ಮ ಮತ್ತು ಕಾವ್ಯ ಧರ್ಮಗಳ ಮೂಲಕ ಕನ್ನಡ ಕವಿಗಳ ಸಮನ್ವಯಗೊಳಿಸಿ ಮೆರೆದಿದ್ದಾರೆ. ಜೈನ ಪರಂಪರೆಯು ಬಹಳ ವಿಸ್ತಾರವಾದದ್ದು. ಕಾಸರಗೋಡಿನಲ್ಲಿ ಜೈನರ ಪರಂಪರೆಯ ಇತಿಹಾಸಕ್ಕೆ ತಳಂಗರೆಯ ಶಾಸನ ಸಾಕ್ಷಿಯಾಗಿದೆ ಎಂದರು. ಎಂ. ಕೆ. ಜಿನಚಂದ್ರನ್‌ ದತ್ತಿ ಉಪನ್ಯಾಸ ಕೊಡುಗೆಯನ್ನು ಚಂದ್ರಪ್ರಭಾ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಎಂ.ಜಿ.ವಿಜಯಪದ್ಮನ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next