Advertisement
1. ಆಟದ ವೇಳೆ ಒತ್ತಡ, ಉದ್ವೇಗಕ್ಕೊಳಗಾಗದ ಭಾರತ ಕ್ರಿಕೆಟ್ ತಂಡದ ಕಪ್ತಾನ ಮಹೇಂದ್ರ ಸಿಂಗ್ ಧೋನಿಯವರನ್ನು, “ಕ್ಯಾಪ್ಟನ್ ಕೂಲ್’ ಎಂದು ಕರೆಯುತ್ತಾರೆ.2. ಧೋನಿಗೆ 2011ರಲ್ಲಿ ಭಾರತೀಯ ಪ್ರಾದೇಶಿಕ ಸೇನೆಯಿಂದ ಲೆಫ್ಟಿನೆಂಟ್ ಕರ್ನಲ್ ಗೌರವ ಸಿಕ್ಕಿದೆ. ಕಪಿಲ್‌ದೇವ್ ನಂತರ ಈ ಗೌರವಕ್ಕೆ ಭಾಜನರಾದ ಎರಡನೇ ಭಾರತೀಯ ಅವರು.
3. ಕ್ರೀಡಾರಂಗಕ್ಕೆ ಬರುವ ಮುನ್ನ ಧೋನಿ, ಖರಗಪುರ ರೈಲ್ವೆ ಸ್ಟೇಷನ್‌ನಲ್ಲಿ 2 ವರ್ಷ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡಿದ್ದರು
4. ಹೆಲಿಕಾಪ್ಟರ್ ಶಾಟ್‌ಗೆ ಹೆಸರಾಗಿರೋ ಧೋನಿ, ಅದನ್ನು ಕಲಿತಿದ್ದು ಜಾರ್ಖಂಡ್ ಕ್ರಿಕೆಟಿಗ ಸಂತೋಷ್ ಲಾಲ್ ಅವರಿಂದ.
5. ಧೋನಿ ಶ್ವಾನ ಪ್ರೇಮಿಯೂ ಆಗಿದ್ದಾರೆ. ಅವರ ಮುದ್ದಿನ ನಾಯಿಗಳ ಹೆಸರು ಝಾರ ಮತ್ತು ಸ್ಯಾಂ.
6. ಧೋನಿಗೆ ಹಳೆಯ ಹಿಂದಿ ಹಾಡುಗಳನ್ನು ಕೇಳುವುದು ಇಷ್ಟದ ಹವ್ಯಾಸ. ಅವರು ಗಾಯಕ ಕಿಶೋರ್ ಕುಮಾರ್ ಅವರ ದೊಡ್ಡ ಅಭಿಮಾನಿ.
7. ಕ್ರಿಕೆಟ್ ಅಷ್ಟೇ ಅಲ್ಲ, ಫುಟ್‌ಬಾಲ್ ಮತ್ತು ಬ್ಯಾಡ್ಮಿಂಟನ್‌ನಲ್ಲೂ ಧೋನಿ ಪರಿಣತರು.
8. ಧೋನಿಯ ಫುಟ್‌ಬಾಲ್ ಗೋಲ್ ಕೀಪಿಂಗ್‌ನ ಶೈಲಿಯನ್ನು ಗಮನಿಸಿದ ಕೋಚ್ ಕೇಶವ್ ಬ್ಯಾನರ್ಜಿ, ಕ್ರಿಕೆಟ್ ಆಡುವಂತೆ ಒತ್ತಾಯಿಸಿದರು.
9. ಬಾಂಗ್ಲಾದ ವಿರುದ್ಧ ಏಕದಿನ ಪಂದ್ಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧೋನಿ, ಆ ಪಂದ್ಯದಲ್ಲಿ ಮೊದಲ ಬಾಲ್‌ಗೇ ರನ್‌ಔಟ್ ಆಗಿದ್ದರು.
10. ಧೋನಿ ಬಳಿ ಮೋಟಾರ್ ಬೈಕ್‌ಗಳ ದೊಡ್ಡ ಸಂಗ್ರಹವೇ ಇದೆ