Advertisement
1. ತಂತ್ರಜ್ಞಾನ ಕ್ಷೇತ್ರದ ದಿಗ್ಗಜರಲ್ಲಿ ಕಾರ್ ಕಂಪನಿ, ಬಾಹ್ಯಾಕಾಶ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಮುಂಚೂಣಿಯಲ್ಲಿ ನಿಲ್ಲುತ್ತಾರೆ.2. ಬಾಲ್ಯದಲ್ಲಿ ದಿನಕ್ಕೆ 10 ಗಂಟೆಗಳ ಕಾಲ ಓದುತ್ತಿದ್ದ ಎಲಾನ್, 9ನೇ ವರ್ಷದಲ್ಲೇ ಎನ್‌ಸೈಕ್ಲೋಪಿಡಿಯಾವನ್ನು ಪೂರ್ತಿ ಓದಿದ್ದ
3. ಸಣ್ಣವನಿದ್ದಾಗ ಎಲಾನ್‌ನ ಮೆಚ್ಚಿನ ಆಟ, ರಾಕೆಟ್ ತಯಾರಿಸುವುದಾಗಿತ್ತು!
4. ಆತ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿತಿದ್ದು 9ನೇ ವಯಸ್ಸಿನಲ್ಲಿ. ಅದೂ ಕೂಡಾ ಯಾರ ನೆರವಿಲ್ಲದೆ!
5. 12ನೇ ವಯಸ್ಸಿನಲ್ಲಿ, ಬಾಹ್ಯಾಕಾಶದ ಪರಿಕಲ್ಪನೆಯಲ್ಲಿ, “ಬ್ಲಾಸ್ಟಾರ್’ ಎಂಬ ಕಂಪ್ಯೂಟರ್ ಗೇಮ್ ಸೃಷ್ಟಿಸಿದ. ನಂತರ ಅದನ್ನು ಕಂಪ್ಯೂಟರ್ ಮ್ಯಾಗಜಿನ್ ಒಂದಕ್ಕೆ 500 ಡಾಲರ್‌ಗೆ ಮಾರಾಟ ಮಾಡಿದ್ದ.
6. ಸ್ಟಾನ್‌ಫೋರ್ಡ್ ವಿ.ವಿ.ಯಲ್ಲಿ, ಭೌತಶಾಸ್ತ್ರದಲ್ಲಿ ಪಿಎಚ್.ಡಿಗೆ ಸೇರಿದ್ದ ಎಲನ್, ಎರಡೇ ದಿನದಲ್ಲಿ ಓದನ್ನು ತೊರೆದು, ಜಿಪ್2 ಕಾರ್ಪೋರೇಷನ್ ಎಂಬ ಕಂಪನಿಯನ್ನು ತೆರೆದ.
7. 2016ರ “ಫೋರ್ಬ್ಸ್’ ನಿಯತಕಾಲಿಕೆಯ, “ಜಗತ್ತಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿ’ಗಳ ಪಟ್ಟಿಯಲ್ಲಿ ಎಲಾನ್‌ಗೆ 21ನೇ ಸ್ಥಾನ ಪಡೆದಿದ್ದಾನೆ.
8. ಜಗತ್ತಿನ 37ನೇ ಶ್ರೀಮಂತ ವ್ಯಕ್ತಿಯಾಗಿರುವ ಎಲನ್‌ನ ಒಟ್ಟು ಆಸ್ತಿಯ ಮೌಲ್ಯ 21.8 ಬಿಲಿಯನ್ ಡಾಲರ್
9. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ತೋರಿಸಿದ್ದ ಸಬ್‌ಮರೈನ್ ಕಾರ್‌ಅನ್ನು ಎಲಾನ್ ಖರೀದಿಸಿದ್ದಾನೆ
10. ಸೂಪರ್ ಹೀರೋಗಳ ದೊಡ್ಡ ಅಭಿಮಾನಿಯಾಗಿರೋ ಎಲನ್, ತನ್ನ ಕಂಪನಿಯ ರೋಬೋಟ್‌ಗಳಿಗೆ ಸೂಪರ್‌ಹೀರೋಗಳ ಹೆಸರನ್ನಿಟ್ಟಿದ್ದಾನೆ.