Advertisement

ಟೆನ್ ಟೆನ್ ಟೆನ್

09:37 PM Sep 04, 2019 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.
2. ಅವರು ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಯಾಗಿದ್ದವರು.
3. ರಾಷ್ಟ್ರಪತಿಯಾದ ಅವಧಿಯಲ್ಲಿ ರಾಧಾಕೃಷ್ಣನ್‌ರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಜನ ಮುಂದಾದಾಗ, “ನನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ನನಗೆ ಹೆಚ್ಚು ಸಂತೋಷ’ ಎಂದರು.
4. ರಾಧಾಕೃಷ್ಣನ್‌ ಹುಟ್ಟಿದ್ದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ.
5. ತಂದೆಗೆ ಮಗ ಇಂಗ್ಲಿಷ್‌ ಕಲಿಯುವುದರ ಬದಲು, ಅರ್ಚಕ/ ಪುರೋಹಿತನಾಗಲಿ ಎಂಬ ಆಸೆಯಿತ್ತಂತೆ. ಆದರೆ, ಓದಿನಲ್ಲಿ ಜಾಣನಾಗಿದ್ದ ರಾಧಾಕೃಷ್ಣನ್‌ ವಿದ್ಯಾಭ್ಯಾಸ ಮುಂದುವರಿಸಿದರು.
6. 1931ರಲ್ಲಿ ಇಂಗ್ಲೆಂಡಿನ ಪ್ರತಿಷ್ಟಿತ “ನೈಟ್‌’ ಪದವಿ ಸಿಕ್ಕಾಗ ಅವರು ತಮ್ಮ ಹೆಸರಿನ ಜೊತೆ “ಸರ್‌’ ಎಂದು ಸೇರಿಸಿಕೊಳ್ಳಲು ನಿರಾಕರಿಸಿದರು.
7. ಅಧ್ಯಾಪಕರಾಗಿ ಅವರು ಮಕ್ಕಳಿಗೆ ಎಷ್ಟು ಪ್ರಿಯರಾಗಿದ್ದರೆಂದರೆ, ರಾಧಾಕೃಷ್ಣನ್‌ರವರು ಮೈಸೂರು ವಿಶ್ವವಿದ್ಯಾಲಯವನ್ನು ತೊರೆದು ಅಂದಿನ ಕಲ್ಕತ್ತಾಗೆ ಹೊರಟಾಗ ಪುಷ್ಪಾಲಂಕೃತ ಸಾರೋಟನ್ನು ವಿದ್ಯಾರ್ಥಿಗಳೇ ಎಳೆದು ಬೀಳ್ಕೊಟ್ಟಿದ್ದರು!
8. ಅಮೆರಿಕದ ಶಿಕ್ಷಣತಜ್ಞ ಪಾಲ್‌ ಆರ್ಥರ್‌, ರಾಧಾಕೃಷ್ಣನ್‌ರನ್ನು ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವಿನ ಜೀವಂತ ಸೇತುವೆ ಎಂದು ಕರೆದಿದ್ದರು. ಯಾಕೆಂದರೆ, ಅವರು ಭಾರತೀಯ ಚಿಂತನೆಗಳ ಶ್ರೇಷ್ಠತೆಯನ್ನು ಪಾಶ್ಚಿಮಾತ್ಯರಿಗೆ ಸಾರಿದವರು.
9. ರಾಜ್ಯಸಭೆಯ ಕಲಾಪಗಳಲ್ಲಿ ಅವರು ಸಂಸ್ಕೃತದ ಶ್ಲೋಕಗಳನ್ನು, ಬೈಬಲ್‌ನ ಸಾಲುಗಳನ್ನು ಹೇಳಿ, ಎಂಥದ್ದೇ ವಿಷಮ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲವರಾಗಿದ್ದರು.
10. 1975ರಲ್ಲಿ ಅವರಿಗೆ ಸಿಕ್ಕಿದ ಟೆಂಪಲ್ಟನ್‌ ಪ್ರಶಸ್ತಿಯ ಸಂಪೂರ್ಣ ಮೊತ್ತವನ್ನು ಅವರು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯಕ್ಕೆ ದೇಣಿಗೆಯಾಗಿ ಕೊಟ್ಟುಬಿಟ್ಟರು. ಈಗಲೂ ರಾಧಾಕೃಷ್ಣನ್‌ ಸ್ಮರಣಾರ್ಥ ಆಕ್ಸ್‌ಫ‌ರ್ಡ್‌ ವಿ.ವಿ.ಯಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಸಂಗ್ರಹ: ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next