Advertisement
15 ವರ್ಷದ ಬಳಿಕ ಬಿಜೆಪಿಗೆ ಅಧಿಕಾರ:
Related Articles
Advertisement
ಪಾಲಿಕೆಯಲ್ಲಿ ಜನ ಕೆಲಸ ಆಗುವುದಿಲ್ಲ ಮಧ್ಯವರ್ತಿಗಳ ಹಾವಳಿ ಹೆಚ್ಚುತ್ತಿದೆ ಎನ್ನುವ ಮಾತಿದೆ ಇದನ್ನು ಹೇಗೆ ನಿಯಂತ್ರಿಸುವಿರಿ..?
ಪಾಲಿಕೆಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ತೊಂದರೆಯಾಗಬಾರದು ಇಲ್ಲಿ ಸಣ್ಣ ಕೆಲಸಗಳಿಗೆ ಬಂದು ಕೆಲಸ ಆಗದೇ ಹೋಗುತ್ತಿರುವುದು ನನ್ನ ಗಮನದಲ್ಲಿದೆ. ಮುಂದೆ ಆ ರೀತಿ ಆಗಬಾರದು ಎನ್ನುವುದು ನನ್ನ ಉದ್ದೇಶ. ಜನರ ಕೆಲಸ ಬೇಗ ಆಗಬೇಕು ಆ ರೀತಿ ಕ್ರಮಕೈಗೊಳ್ಳುತ್ತೇವೆ ಜನಸ್ನೇಹಿ ಆಡಳಿತ ನೀಡಬೇಕು ಎನ್ನುವುದು ನನ್ನ ಗುರಿ.
ನಿಮ್ಮ ಮೊದಲ ಉದ್ದೇಶ ಏನು..?
ನಾನು ಈ ಹಿಂದೆ ಹೇಳಿರುವಂತೆ ನನ್ನ ಮೊದಲ ಉದ್ದೇಶ ಸರಳೀಕರಣ ಆಡಳಿತ, ನಾನು ಮೇಯರ್ ಆದ ತಕ್ಷಣ ಕಲವು ನಾಗರಿಕರು ಹೇಳುತ್ತಿದ್ದರು. ಅವರಿಗೆ ತಿಳಿಸಿದೆ ನೀವು ಕಾದು ನೋಡಿ ಎಂದು ಹೇಳಿದ್ದೇನೆ, ನಾನು ಉತ್ತಮ ಆಡಳಿತ ನೀಡಿದರೆನನಗೆ, ನಮ್ಮ ಶಾಸಕರಿಗೆ ಸಂಸದರಿಗೆ ಹೆಸರು ಬರುತ್ತದೆ ಮುಂದೆ ಅನುಕೂಲವಾಗಲಿದೆ ಆದ್ದರಿಂದ ಆರೀತಿ ಕೆಲಸ ಮಾಡಬೇಕು ಎಂದು ಕೊಂಡಿದ್ದೇನೆ.
ನಗರದಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಯಾವರೀತಿ ಕ್ರಮ ಕೈಗೊಳ್ಳುತ್ತೀರಿ..?
ನಗರದಲ್ಲಿ ಸ್ವತ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಸ್ವಚ್ಛ ತುಮಕೂರು ಆಗಬೇಕು ಈಗಾಗಲೇ ನಮ್ಮ ನಗರ ಸ್ವಚ್ಛತೆಯಲ್ಲಿ ಉತ್ತಮ ಹೆಸರು ಪಡೆದಿದೆ, ಅದು ಮುಂದುವರೆಯಬೇಕು. ವಿಶೇಷವಾಗಿ ಹಸಿರೀಕರಣ ಆಗಬೇಕು ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇನೆ.
ಮೇಯರ್ ಆಗೆಂದು ಆಶೀರ್ವದಿಸಿದ್ದ ಶ್ರೀಗಳು : ನಾನು ಪಾಲಿಕೆಯ ಸದಸ್ಯ ಸ್ಥಾನಕ್ಕೆ ಚುನಾವಣೆ
ನಿಲ್ಲಲು ನಿರ್ಧರಿಸಿದೆ ಆ ವೇಳೆಯಲ್ಲಿ ನಾನು ಸಿದ್ಧಗಂಗಾ ಮಠದ ಹಿರಿಯ ಶ್ರೀಗಳಾದ ಕರ್ನಾಟಕ ರತ್ನ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆಯಲು ಹೋದಾಗ ಶ್ರೀಗಳು ಮೇಯರ್ ಆಗಬೇಕು ಎಂದು ಆಶೀರ್ವಾದ ಮಾಡಿದ್ದರು. ಅದು ಇಂದು ನನಗೆ ನೆರವೇರಿದೆ ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ ಸಂತಸ ವ್ಯಕ್ತ ಪಡಿಸುತ್ತಾ ನುಡಿದರು.
ನಗರದ ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು : ನಗರದಲ್ಲಿ ವಾಸಿಸುವ ಜನರಿಗೆ ಅಗತ್ಯವಾಗಿ ಬೇಕಾಗಿರುವ ಕುಡಿಯುವ ನೀರು, ಸ್ವತ್ಛತೆ, ಬೀದಿ ದೀಪದ ಅಳವಡಿಕೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಸಲು ಹೆಚ್ಚು ಒತ್ತು ನೀಡುತ್ತೇನೆ.ಪಾಲಿಕೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆತೆಗೆದುಕೊಂಡು ಶಾಸಕರು, ಸಂಸದರು ಇತರೆ ಮುಖಡರ ಸಲಹೆಗಳನ್ನು ಪಡೆದು ನಗರದ ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ ಎಂದು ನೂತನ ಮೇಯರ್ ಬಿ.ಜಿ.ಕೃಷ್ಣಪ್ಪ ತಿಳಿಸಿದರು.
– ಚಿ.ನಿ.ಪುರುಷೋತ್ತಮ್