ಉಡುಪಿ: ಪದ್ಮಶ್ರೀ ಪುರಸ್ಕಾರ ಪಡೆದ ಭಾರತದ ಎರಡನೇ ಮಂಗಳಮುಖಿ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಶನಿವಾರ(ಅಕ್ಟೋಬರ್ 16) ಸಂಜೆ 4ಗಂಟೆಗೆ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇಂದು ಮಧ್ಯಾಹ್ನ 3.30ಕ್ಕೆ ಉದಯವಾಣಿ ಪ್ರಧಾನ ಕಚೇರಿಗೆ ಆಗಮಿಸಲಿರುವ ಮಂಜಮ್ಮ ಜೋಗತಿ ಅವರು ನಂತರ ಫೇಸ್ ಬುಕ್ ಲೈವ್ ನಲ್ಲಿ ಪಾಲ್ಗೊಳ್ಳಲಿದ್ದು, ಮಂಗಳಮುಖಿಯಾಗಿ ರೂಪಾಂತರಗೊಂಡ ಬಗ್ಗೆ, ಅನುಭವಿಸಿದ ಅವಮಾನ, ಕಷ್ಟ, ಸುಖದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಓದುಗರು ತಪ್ಪದೇ 4ಗಂಟೆಗೆ ಲೈವ್ ವೀಕ್ಷಿಸಿ.
ಬಳ್ಳಾರಿಯ ಕಲ್ಲುಕಂಬದಲ್ಲಿ 1957ರಲ್ಲಿ ಜನಿಸಿದ್ದ ಮಂಜಮ್ಮ, ಜೋಗತಿ ವೃತ್ತಿಯನ್ನೇ ಬದುಕಿಗೆ ಆಧಾರ ಮಾಡಿಕೊಂಡು, ತಮ್ಮ 18ನೇ ವಯಸ್ಸಿನಿಂದಲೇ ಕಲಾಸೇವೆ ಮಾತುತ್ತಾ ಜಾನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ಮುಂತಾದ ವೇದಿಕೆಯಲ್ಲಿ ಈವರೆಗೆ ಸಾವಿರಾರು ಪ್ರದರ್ಶನ ನೀಡಿದ್ದಾರೆ.
ಮಂಜಮ್ಮ ಜೋಗತಿ ಅವರ ಕಲಾಸೇವೆ ಗುರುತಿಸಿ ಭಾರತ ಸರ್ಕಾರ 2021ರ ಜನವರಿಯಲ್ಲಿ ಪದ್ಮಶ್ರೀ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲ ಜಾನಪದ ಶ್ರೀ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿ ಸಂದಿದ್ದು, ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿದ್ದಾರೆ.