Advertisement

ಆಯ್ಕೆಗಾರ ಹುದ್ದೆಗೆ ಇಂದು ಸಂದರ್ಶನ: ಪ್ರಸಾದ್‌,ಜೋಶಿ ಸಹಿತ ಐವರ ಆಯ್ಕೆ

09:12 AM Mar 05, 2020 | Team Udayavani |

ಹೊಸದಿಲ್ಲಿ/ಮುಂಬಯಿ: ಕರ್ನಾಟಕದ ವೆಂಕಟೇಶ್‌ ಪ್ರಸಾದ್‌ ಮತ್ತು ಸುನೀಲ್‌ ಜೋಶಿ ಸಹಿತ ಐವರು ಅಭ್ಯರ್ಥಿಗಳು ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ಸ್ಪರ್ಧೆಯಲ್ಲಿದ್ದಾರೆ. ಈ ಐವರು ಬುಧವಾರ ಮುಂಬಯಿಯಲ್ಲಿ ನಡೆಯುವ ಸಂದರ್ಶನದಲ್ಲಿ ಹಾಜರಾಗಲಿದ್ದಾರೆ. ಮಾಜಿ ವೇಗದ ಬೌಲರ್‌ ಅಜಿತ್‌ ಅಗರ್ಕರ್‌ ಹೆಸರನ್ನು ಹಠಾತ್‌ ಬೆಳವಣಿಗೆಯಲ್ಲಿ ಕಿರು ಪಟ್ಟಿಯಿಂದ ಬಿಸಿಸಿಐ ಸಲಹಾ ಸಮಿತಿ ಕೈ ಬಿಟ್ಟಿದ್ದು ಅಚ್ಚರಿ ಮೂಡಿಸಿತು.

Advertisement

ಮಾಜಿ ಸ್ಪಿನ್ನರ್‌ಗಳಾದ ಎಲ್‌.ಎಸ್‌. ಶಿವರಾಮಕೃಷ್ಣನ್‌, ರಾಜೇಶ್‌ ಚೌಹಾಣ್‌ ಮತ್ತು ಮಧ್ಯಮ ವೇಗಿ ಹರ್ವಿಂದರ್‌ ಸಿಂಗ್‌ ಅವರನ್ನು ಕೂಡ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಸಂದರ್ಶನವು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ.

ಮದನ್‌ಲಾಲ್‌, ಆರ್‌ಪಿ ಸಿಂಗ್‌ ಮತ್ತು ಸುಲಕ್ಷಣ ನಾೖಕ್‌ ಅವರನ್ನು ಒಳಗೊಂಡ ಕ್ರಿಕೆಟ್‌ ಸಲಹಾ ಸಮಿತಿಯು ಆಯ್ಕೆ ಸಮಿತಿಯಿಂದ ಹೊರಹೋಗುತ್ತಿರುವ ಎಂಎಸ್‌ಕೆ ಪ್ರಸಾದ್‌ ಮತ್ತು ಗಗನ್‌ ಖೋಡ ಅವರ ಜಾಗಕ್ಕೆ ಈ ಐವರು ಮಾಜಿ ಆಟಗಾರರನ್ನು ಅರ್ಜಿ ಪರಿಶೀಲಿಸಿ ಆಯ್ಕೆ ಮಾಡಿದೆ.

ಎರಡು ಹುದ್ದೆಗೆ 44 ಅರ್ಜಿಗಳು ಬಂದಿದ್ದವು. ಮಾಜಿ ವೇಗಿ ಅಜಿತ್‌ ಅಗರ್ಕರ್‌, ನಯನ್‌ ಮೊಂಗಿಯ ಕೂಡ ಅರ್ಜಿ ಸಲ್ಲಿಸಿದ್ದರು. ಆರಂಭದಿಂದಲೂ ಹುದ್ಧೆಗೆ ಅಗರ್ಕರ್‌ ಹೆಸರು ಮುಂಚೂಣಿಯಲ್ಲಿತ್ತು. ಅಂತಿಮ ಕ್ಷಣದಲ್ಲಿ ಅಗರ್ಕರ್‌ ಹೆಸರನ್ನು ವಲಯವಾರು ಕಾರಣಗಳಿಂದ ಕೈ ಬಿಡಲಾಗಿದೆ ಎಂದು ಸಲಹಾ ಸಮಿತಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next