Advertisement
ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದೀರಿ, ಈ ಬಾರಿ…?ಈ ಬಾರಿ ಕೆಜೆಪಿ ಬಿಜೆಪಿಯೊಂದಿಗೆ ವಿಲೀನಗೊಂಡಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಸುರತ್ಕಲ್ ನನ್ನ ಸ್ವಕ್ಷೇತ್ರ ಆಗಿರುವುದರಿಂದ ಅಲ್ಲಿ ನನಗೆ ಹೆಚ್ಚಿನ ಮತ ಲಭಿಸುವ ನಿರೀಕ್ಷೆಯಿದೆ. ಅವಕಾಶ ಸಿಕ್ಕಿದರೆ ಗೆಲ್ಲುವ ಸಂಪೂರ್ಣ ಭರವಸೆ ನನಗಿದೆ.
ಪ್ರಧಾನಿ ಮೋದಿಯವರ ನಾಲ್ಕು ವರ್ಷಗಳ ಸಾಧನೆಯಿಂದ ಪ್ರಭಾವಿತನಾಗಿದ್ದೇನೆ. ಕರಾವಳಿಯಲ್ಲಿ ಬಿಜೆಪಿ ಪಕ್ಷ ಸಂಘಟನೆ ಉತ್ತಮ ರೀತಿಯಲ್ಲಿ ಆಗಿದೆ. ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಸುರತ್ಕಲ್ ಮೊಗವೀರರ ಪ್ರಬಲ ಕ್ಷೇತ್ರ. 1989ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದೆ. ಇದಕ್ಕೂ
ಮೊದಲು ಮೀನುಗಾರರಿಗೆ ಅವಕಾಶ ಸಿಕ್ಕಿದೆ. ಬಳಿಕ ಕುಂಬ್ಳೆ ಸುಂದರ ರಾವ್, ಕೃಷ್ಣ ಜೆ. ಪಾಲೆಮಾರ್ ಅಲ್ಲಿ ಸ್ಪರ್ಧಿಸಿದ್ದರು. ಅನಂತರ ಮೀನುಗಾರರಿಗೆ ಅವಕಾಶ ನೀಡಿಲ್ಲ. ಮೀನುಗಾರರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಯಾವುದಾದರೂ ಕ್ಷೇತ್ರದಲ್ಲಿ ನಮ್ಮ ಸ್ಪರ್ಧೆ ಅಗತ್ಯವಾಗಿದೆ. ಟಿಕೇಟ್ ಸಿಗಬಹುದೆಂಬ ನಿರೀಕ್ಷೆ ಇದೆಯಾ?
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ನಾನೂ ಸೇರಿ ನಾಲ್ವರು ಆಕಾಂಕ್ಷಿಗಳಾಗಿದ್ದೇವೆ. ನನಗೇ ಸಿಗುತ್ತದೆಂಬ ಖಾತರಿ ಇಲ್ಲ. ಟಿಕೇಟ್ ಸಿಕ್ಕಿದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬಹುದೆಂಬ ಹಂಬಲದೊಂದಿಗೆ ಅವಕಾಶ ಕೋರಿದ್ದೇನೆ. ಸಿಕ್ಕಿದರೆ ಗೆಲ್ಲುವೆನೆಂಬ ಭರವಸೆ ಇದೆ.
Related Articles
ನಾನೊಬ್ಬ ಬರಹಗಾರನಾಗಿ, ಪರಿಸರ ಹೋರಾಟಗಾರನಾಗಿ ಅನೇಕ ಹೋರಾಟಗಳನ್ನು ಸಂಘಟಿಸಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅರ್ಹತೆ ಇದ್ದರೂ ಲಭ್ಯವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನೊಬ್ಬ ಆದರ್ಶ ಶಾಸಕನಾಗಬೇಕೆಂಬ ಆಶಯ ನನ್ನದು. ಜಿಲ್ಲೆಯ ರಾಜಕೀಯದಲ್ಲಿ ಸ್ವತ್ಛತೆ, ಶಿಸ್ತು ಅಗತ್ಯವಾಗಿ ಬೇಕು. ಆ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಜನರನ್ನು ಪ್ರೀತಿ ಮತ್ತು ಗೌರವದಿಂದ ಕಾಣುವುದರೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
Advertisement
ಹಿಂದಿನ ಚುನಾವಣೆಯಲ್ಲಿ ನಿರೀಕ್ಷೆ ಏನಿತ್ತು?ಕೆಜೆಪಿಯಿಂದ ಸ್ಪರ್ಧಿಸುವ ಆಸಕ್ತಿ ನನಗಿರಲಿಲ್ಲ. ಸ್ಪರ್ಧೆ ಮಾಡಲ್ಲ ಎಂದಿದ್ದೆ. ಆದರೆ ಹೊಸ ಪಕ್ಷವಾದ್ದರಿಂದ ನೀವು ನಿಂತರೆ ಪಕ್ಷಕ್ಕೆ ತೂಕ ಬರುತ್ತದೆ ಎಂದು ಪಕ್ಷದ ಮುಖಂಡರು ಹೇಳಿದ್ದರು. ಅದಕ್ಕಾಗಿ ಸ್ಪರ್ಧಿಸಿದ್ದೆ. ಆದರೂ ಮೂರು ಸಾವಿರ ಮತಗಳನ್ನು ಪಡೆದಿದ್ದೆ. ಧನ್ಯಾ ಬಾಳೆಕಜೆ