Advertisement

ಮಾತಿನ ಮತ, ಸಂದರ್ಶನ

01:34 PM Apr 09, 2018 | Team Udayavani |

ಕಾಂಗ್ರೆಸ್‌ ಪಕ್ಷದ ವಕ್ತಾರನಾಗಿಯೇ ದುಡಿಯುವೆ

Advertisement

ಕಳೆದ ಚುನಾವಣೆಯಲ್ಲಿ ನಿಮ್ಮ ಸೋಲಿಗೆ ಕಾರಣ ?
ಕಳೆದ ಚುನಾವಣೆಯಲ್ಲಿ ನಾನು ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆ. ಆರಂಭದಲ್ಲಿ ಪಕ್ಷಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತ್ತು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿಯೂ ಇತರ ಪಕ್ಷಗಳಿಗಿಂತ ಅಧಿಕ ಸಂಖ್ಯೆಯಲ್ಲಿ ಜನಬೆಂಬಲ ಇತ್ತು. ಆದರೆ ಅದು ಮತವಾಗಿ ಪರಿವರ್ತನೆ ಆಗದಿರುವುದೇ ಸೋಲಿಗೆ ಕಾರಣ ಅನ್ನಬಹುದು.

ಈ ಬಾರಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದೀರಲ್ವಾ?
ಹೌದು. ನಾನು ಕಾಂಗ್ರೆಸ್‌ ಪಕ್ಷದ ತಾಲೂಕು ವಕ್ತಾರ. ನಾನು ಮೂಲತಃ ಕಾಂಗ್ರೆಸ್‌ ಪಕ್ಷದವನೇ. ಕಾಂಗ್ರೆಸ್‌ ಪಕ್ಷದ ಪ್ರಭಾವಿ ಮುಖಂಡರಾಗಿದ್ದ ಪುಡ್ಕಜೆ ಭಾಸ್ಕರ್‌ ರೈ ಅವರು ನನ್ನ ರಾಜಕೀಯ ಗುರು. ಅಂಚೆ ಇಲಾಖೆ ನೌಕರನಾಗಿ ಸುಳ್ಯ ವಿಧಾನಸಭಾ ಕ್ಷೇತ್ರ ಬಹುತೇಕ ಅಂಚೆಕಚೇರಿಗಳಲ್ಲಿ 30 ವರ್ಷ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದರಿಂದ 2004ರಲ್ಲಿ ನನಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವ ಅವಕಾಶ ಇತ್ತು. ಅದಕ್ಕಾಗಿ ಸರಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಆದರೆ ಕೊನೇ ಕ್ಷಣದಲ್ಲಿ ಕೈ ತಪ್ಪಿತ್ತು. ಮತ್ತೆ ಅಂಚೆ ಇಲಾಖೆಗೆ ಸೇರಿಕೊಂಡೆ. 2013ರಲ್ಲಿ ಸ್ವಯಂ ನಿವೃತ್ತಿ ಪಡೆದು ಕಾಂಗ್ರೆಸ್‌ನಲ್ಲಿ ಸಕ್ರಿಯನಾಗಿದ್ದೆ. ಆಗ ಕಾಂಗ್ರೆಸ್‌ನಲ್ಲಿ ಟಿಕೇಟ್‌ ಸಿಗಲಿಲ್ಲ. ಜೆಡಿಎಸ್‌ನಿಂದ ಸ್ಪರ್ಧಿಸಿದ್ದೆ. ಈಗ ಮರಳಿ ಮಾತೃಪಕ್ಷದಲ್ಲಿಯೇ ಸಕ್ರಿಯನಾಗಿದ್ದೇನೆ.

ಈ ಬಾರಿಯೂ ನೀವು ಸ್ಪರ್ಧಾಕಾಂಕ್ಷಿ ಆಗಿದ್ದೀರಾ?
ಆರಂಭದಲ್ಲಿ ಸ್ಪರ್ಧಿಸುವ ಬಗ್ಗೆ ಪ್ರಯತ್ನ ಮಾಡಿದ್ದೆ. 2004ರ ಚುನಾವಣೆಯಿಂದಲೂ ಇಲ್ಲಿನ ಕಾಂಗ್ರೆಸ್‌ ಮುಖಂಡರು ನನ್ನನ್ನು ಅಭ್ಯರ್ಥಿ ಸ್ಥಾನಕ್ಕೆ ನಿಲ್ಲಿಸಲು ಆಸಕ್ತಿ ಹೊಂದಿದ್ದರು. ಹಾಗಾಗಿ ಈ ಬಾರಿ ಟಿಕೇಟ್‌ಗೆ ಆಕಾಂಕ್ಷಿಯಾಗಿದ್ದೆ. ಆದರೆ ಈ ಬಾರಿ ಡಾ| ರಘು ಅವರಿಗೆ ಅವಕಾಶ ಕೊಡುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ. ನಾನು ಪಕ್ಷದ ವಕ್ತಾರನಾಗಿದ್ದು, ಪಕ್ಷದ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಪಕ್ಷದ ಗೆಲುವಿನ ವಾತಾವರಣ ಹೇಗಿದೆ ?
ಈ ಬಾರಿ ಗೆಲುವಿನ ಎಲ್ಲ ವಾತಾವರಣ ಇದೆ. ಬ್ಲಾಕ್‌ ಅಧ್ಯಕ್ಷರು ಅತ್ಯುತ್ತಮ ಸಂಘಟಕರಾಗಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಾರೆ. ಎಲ್ಲ ಮುಖಂಡರು, ಕಾರ್ಯಕರ್ತರು ಒಂದಾಗಿ ಗೆಲುವಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 228 ವ್ಯಾಪ್ತಿಯ ಬೂತ್‌ಗಳಲ್ಲಿ ಒಂದು ಹಂತದ ಪ್ರಚಾರ ಕಾರ್ಯ ಈಗಾಗಲೇ ಆಗಿದೆ. ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಸರಕಾರದ ಸಾಧನೆ, ಸುಳ್ಯಕ್ಕೆ ಕಾಂಗ್ರೆಸ್‌ ಕೊಡುಗೆಗಳ ಬಗ್ಗೆ ಜನರ ಮುಂದಿರಿಸಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಒಲವಿದೆ.

Advertisement

 ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next