Advertisement

ಮಾತಿನ ಮತ, ಸಂದರ್ಶನ: 

02:24 PM Mar 25, 2018 | |

ಅಭಿವೃದ್ಧಿ  ಕಾರ್ಯಗಳೇ ನಮ್ಮ  ಗೆಲುವಿಗೆ ಸಹಕಾರಿ

Advertisement

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ಯಾವ ರೀತಿ ಪ್ರಚಾರ ಕಾರ್ಯ ಆರಂಭಿಸಿದೆ ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇದುವೇ ಮುಂದಿನ ಚುನಾವಣೆಯಲ್ಲಿ ನಮಗೆ ಪ್ಲಸ್‌ ಆಗಲಿದೆ. ಮಾಡಿರುವ ಜನಪರ ಕಾರ್ಯಗಳನ್ನು ಜನರ ಮುಂದಿಟ್ಟು ಅವರ ಮನವೊಲಿಸುವ ಕಾರ್ಯ ಮಾಡಲಿದೆ. ಶೇ. 90ರಷ್ಟು ಮನೆ ಮನೆ ಭೇಟಿ ಕಾರ್ಯಕ್ರಮ ಪೂರ್ಣಗೊಂಡಿದೆ.

ರಾಹುಲ್‌ ಗಾಂಧಿ ಅವರ ಜಿಲ್ಲಾ ಭೇಟಿ ಕಾಂಗ್ರೆಸ್‌ ಗೆಲುವಿಗೆ ಯಾವ ರೀತಿ ಸಹಕಾರಿಯಾಗಲಿದೆ?
ರಾಹುಲ್‌ ಗಾಂಧಿ ಅವರ ಭೇಟಿ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. ಜನರಿಗೆ ಪಕ್ಷದ ಮೇಲಿನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದೆ. 

ಪ್ರಸ್ತುತ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಪ್ರಚಾರ ಕಾರ್ಯದಲ್ಲಿ ಯಾವ ರೀತಿ ಬಳಸಿಕೊಳ್ಳಲಾಗುತ್ತದೆ ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅನ್ನಭಾಗ್ಯ, ಶಾದಿಭಾಗ್ಯ, ಇಂದಿರಾ ಕ್ಯಾಂಟಿನ್‌ ನಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ವಿಯಾಗಿದೆ. ಇದರ ಬಗ್ಗೆ ಜನರಿಗೆ ಅರಿವಿದೆ. ಆದರೂ ಮನೆ ಮನೆ ಭೇಟಿ ಸಂದರ್ಭದಲ್ಲಿ ಅದನ್ನು ಜನರಿಗೆ ನೆನಪಿಸುವ ಕಾರ್ಯ ಮಾಡುತ್ತೇವೆ.

ಮೋದಿ ಅಲೆ, ಕಾಂಗ್ರೆಸ್‌ ಸಚಿವರುಗಳ ಮೇಲೆ ಕೇಳಿ ಬಂದ ಆರೋಪಗಳ ನಡುವೆ ಈ ಬಾರಿಯ ಚುನಾವಣೆಯನ್ನು ಎದುರಿಸಲು ಪಕ್ಷ ಯಾವ ರೀತಿ ಸನ್ನದ್ಧವಾಗಿದೆ?
ಕೇಂದ್ರ ಸರಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿ ಕೊಂಡು ರಾಜ್ಯದ ಸಚಿವರ ಮೇಲೆ ದಬ್ಟಾಳಿಕೆ ಮಾಡಿದೆ. ಅದಕ್ಕೆ ಜನಗಳೇ ಉತ್ತರಿಸಲಿದ್ದಾರೆ. ಇನ್ನೂ ಮೋದಿ ಅಲೆ ಅನ್ನುವ ವಿಚಾರವೇ ಇಲ್ಲ. ಅಭಿವೃದ್ಧಿ ಮಾಡುತ್ತೇವೆ ಎಂದು ಸಾಮಾನ್ಯ ಜನರ ಮೇಲೆ ಹೊರೆ ಬೀಳುವಂತೆ ಮಾಡಿದ ಕೇಂದ್ರ ಸರಕಾರದ ವಿರುದ್ಧ ಜನರಿಗೆ ನಂಬಿಕೆ ಹೋಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳಲ್ಲಿ ಶೇ. 99ರಷ್ಟು ಭರವಸೆಗಳನ್ನು ರಾಜ್ಯ ಕಾಂಗ್ರೆಸ್‌ ಪೂರೈಸಿದೆ.

Advertisement

ರಾಹುಲ್‌ ಭೇಟಿ ಹೇಗೆ ಪರಿಣಾಮ ಬೀರಿದೆ.?
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿಯಿಂದ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರ ಉತ್ಸಾಹ ಇಮ್ಮಡಿಗೊಂಡಿದೆ. ಶೀಘ್ರದಲ್ಲಿ ಅಭ್ಯರ್ಥಿಯ ಘೋಷಣೆ ನಡೆದು, ಪ್ರಚಾರ ಕಾರ್ಯವನ್ನೂ ಆರಂಭಿಸಲಿದ್ದೇವೆ.
„ ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next