Advertisement

ಮಾತಿನ ಮತ, ಸಂದರ್ಶನ:

01:04 PM Mar 26, 2018 | Team Udayavani |

ರಾಹುಲ್‌ ಭೇಟಿ; ಉತ್ಸಾಹ ಇಮ್ಮಡಿ

Advertisement

ನಿಮ್ಮ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಹೇಗೆ ನಡೆಯುತ್ತಿದೆ?
ಚುನಾವಣೆಗೆ ಉತ್ತಮ ರೀತಿಯ ತಯಾರಿ ಆರಂಭಗೊಂಡಿದೆ. ಈಗಾಗಲೇ ಮನೆ ಮನೆ ಭೇಟಿ ಮಾಡಿ ರಾಜ್ಯ ಸರಕಾರ, ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಲಾಗಿದೆ. ನಿರ್ದಿಷ್ಟ ಅವಧಿಯಲ್ಲಿ ಬ್ಲಾಕ್‌ ಮೀಟಿಂಗ್‌ ಗಳನ್ನು ಮಾಡಲಾಗುತ್ತಿದೆ. ಕಾರ್ಯಕರ್ತರ ಕಾರ್ಯಾಗಾರಗಳನ್ನೂ ನಡೆಸಲಾಗಿದೆ. ಜತೆಗೆ ವೋಟರ್‌ ಲಿಸ್ಟ್‌ಗಳ ಪರಿಶೀಲನೆಯನ್ನೂ ಮಾಡಲಾಗುತ್ತಿದೆ.

ರಾಹುಲ್‌ ಗಾಂಧಿ ಸುರತ್ಕಲ್‌ ಭೇಟಿ ನಿಮ್ಮ ಕ್ಷೇತ್ರಕ್ಕೆ ಹೇಗೆ ಪೂರಕವಾಗಿದೆ?
ಎಐಸಿಸಿ ಅಧ್ಯಕ್ಷರು ಸುರತ್ಕಲ್‌ಗೆ ಆಗಮಿಸಿದ ಸಂದರ್ಭದಲ್ಲಿ ಕಾರ್ಯಕರ್ತರು ಅಭೂತಪೂರ್ವ ಸ್ವಾಗತ ನೀಡಿದ್ದು, ಇದು ಕಾರ್ಯಕರ್ತರ ಉತ್ಸಾಹವನ್ನೂ ಹೆಚ್ಚಿಸಿದೆ. ಸುರತ್ಕಲ್‌ನಲ್ಲಿ ಇಷ್ಟರವರೆಗೆ ಇಷ್ಟು ಸಂಖ್ಯೆಯಲ್ಲಿ ಜನರು ಸೇರಿರಲಿಲ್ಲ. ರಾಹುಲ್‌ ಭೇಟಿ ಇಡೀ ಕರಾವಳಿಯಲ್ಲಿ ಕಾಂಗ್ರೆಸ್‌ ಅಲೆ ಇದೆ ಎಂಬುದನ್ನು ತೋರಿಸಿದೆ.

ಸುರತ್ಕಲ್‌ ಕ್ಷೇತ್ರದ ಅಭಿವೃದ್ಧಿಯ ಕುರಿತು ಜನ ಏನು ಹೇಳುತ್ತಾರೆ?
ನಾವು ಕ್ಷೇತ್ರದಲ್ಲಿ ಜನರನ್ನು ಮಾತನಾಡಿಸಿದ ಸಂದರ್ಭದಲ್ಲಿ ಇಷ್ಟರ ವರೆಗೆ ಆಗದ ಕಾಮಗಾರಿಗಳು ನಡೆದಿವೆ ಎಂಬ
ಮೆಚ್ಚುಗೆಯ ಅಭಿಪ್ರಾಯಗಳೇ ಬಂದಿವೆ. ನಾವು ಪಕ್ಷವನ್ನು ನೋಡದೆ ಉತ್ತಮ ಕೆಲಸ ಮಾಡಿದವರನ್ನು ಬೆಂಬಲಿಸುತ್ತೇವೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಜತೆಗೆ ಶಾಸಕ ಮೊಯಿದಿನ್‌ ಬಾವಾ ಅವರು ಎಲ್ಲ ವರ್ಗಗಳ ಜನರ ಪ್ರೀತಿಯನ್ನು ಗಳಿಸಿದ್ದು, ಖಂಡಿತವಾಗಿಯೂ ಜನತೆ ಕಾಂಗ್ರೆಸನ್ನು ಬೆಂಬಲಿಸುತ್ತಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಸಾಧನೆಗಳು ಕಾಂಗ್ರೆಸ್‌ ಗೆಲುವಿಗೆ ಪೂರಕವಾಗುತ್ತವೆ.

ಶಾಸಕರ ವಿವಾದಗಳು ಕಾಂಗ್ರೆಸ್‌ಗೆ ಹೊಡೆತ ನೀಡಲಿವೆಯೇ?
ಪಕ್ಷಕ್ಕೆ ಹೊಡೆತ ನೀಡುವ ಯಾವುದೇ ವಿವಾದಗಳು ಸುರತ್ಕಲ್‌ ನಲ್ಲಿ ನಡೆದಿಲ್ಲ. ಭಕ್ತಿಗೀತೆ ಧಾಟಿಯ ಪ್ರಚಾರದ ಹಾಡಿಗೆ ಸಂಬಂಧಪಟ್ಟಂತೆ ಶಾಸಕರು ಈಗಾಗಲೇ ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲಿ ಧರ್ಮ, ದೇವರ ನಿಂದನೆ ಆಗಿಲ್ಲ. ಸೀರೆ
ಕೊಟ್ಟಿರುವುದು ನನಗೆ ಗೊತ್ತಿಲ್ಲ. ಹೀಗಾಗಿ ವಿವಾದಗಳೇ ಇಲ್ಲದಿರುವಾಗ ಯಾವುದೇ ಹೊಡೆತ ಸಿಗುವುದಿಲ್ಲ.

Advertisement

ಮೋದಿ ಪ್ರಭಾವದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆಯೇ?
ಮೋದಿ ಪ್ರಭಾವ ಈಗ ಸಂಪೂರ್ಣ ನಿಂತುಹೋಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ಉಪಚುನಾವಣೆಗಳಲ್ಲಿ ಬಿಜೆಪಿ
ಸೋತಿದೆ. ಕೆಲವರು ಮಾತ್ರ ಮೋದಿ ಮೋದಿ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಜನರು ಮಾತ್ರ ಅಭಿವೃದ್ಧಿ ಕೆಲಸಗಳನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ಮತ ಹಾಕಲಿದ್ದಾರೆ.

„ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next